Tuesday, November 19, 2024

ಸತ್ಯ | ನ್ಯಾಯ |ಧರ್ಮ

ದಲಿತ ಸಾಹಿತಿಗಳಿಗೆ ಬೆಲೆಯೇ ಇಲ್ವಾ?

ಬೆಂಗಳೂರು : ಕನಕದಾಸರ ಜನ್ಮದಿನದ ಪ್ರಯುಕ್ತ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ “ಕರ್ನಾಟಕ ತತ್ವಪದಕಾರರ ಹದಿನೆಂಟು ಸಂಪುಟಗಳ ಬಿಡುಗಡೆ ಸಮಾರಂಭʼ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯ ಅವರು ಮಾಲೂರು ತಾಲೂಕಿನ ಲಕ್ಕೂರು ಗ್ರಾಮದ ದಲಿತ ಸಾಹಿತಿ ಗಂಗಪ್ಪ ತಳವಾರ ಅವರು ಭಾವಾನುವಾದ ಮಾಡಿರುವ “ಗುಟ್ಟಹಳ್ಳಿ ಆಂಜನಪ್ಪ” ಅವರ “ಸುಜ್ಞಾನ ಬೋಧ ತತ್ವಗಳು ಸಂಪುಟ” ಎಂಬ ಸಂಪುಟವನ್ನು ಬಿಡುಗಡೆಗೋಳಿಸಿದರು.

ಈ ಕಾರ್ಯಕ್ರಮಕ್ಕೆ ಹಲವಾರು ಗಣ್ಯರನ್ನು ಅಮಂತ್ರಿಸಿ ಬಹಳಷ್ಟು ಜನರಿಗೆ ಗೌರವವನ್ನೂ ಸೂಚಿಸಿದ್ದಾರೆ. ಇದೇ ಕಾರ್ಯಕ್ರಮಕ್ಕೆ ಆಗಮಿಸಿದ್ದ ದಲಿತ ಸಾಹಿತಿ ಗಂಗಪ್ಪ ತಳವಾರ ಅವರನ್ನು ಸೌಜನ್ಯಕ್ಕೂ ಅವರ ಹೆಸರನ್ನೂ ಕರೆಯದೇ ಅವಮಾನಿಸಿರುವ ಘಟನೆ ಸನ್ಮಾನ್ಯ ಮುಖ್ಯಮಂತ್ರಿಗಳ ಎದುರಲ್ಲೇ ನಡೆದಿರುವುದು ಖಂಡನೀಯ.

ದಲಿತ ಸಾಹಿತಿಗಳನ್ನು ಹಿಂದಿನಿಂದಲೂ ಕೆಲವು ಸಮಾರಂಭಗಳಲ್ಲಿ ದ್ವಿತೀಯ ದರ್ಜೆಯಲ್ಲಿಯೇ ನೋಡುತ್ತಿರುವುದು ದಲಿತ ಸಾಹಿತ್ಯಕ್ಕೆ ಮಾಡುತ್ತಿರುವ ಅಪಮಾನ. ರಾಜ್ಯದ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅದರಲ್ಲಿಯೂ ದಲಿತ ಸಾಹಿತಿಯೊಬ್ಬರ ಕೃತಿಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಹೆಸರನ್ನೇ ಹೇಳದೆ ಬಿಡುಗಡೆಗೊಳಿಸುವುದನ್ನು ಹೇಗೆ ದಲಿತ ಸಮುದಾಯ ಸ್ವೀಕರಿಬೇಕಿದೆ?

ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ ಚಿಕ್ಕಣ್ಣ ಅವರ ಬೇಜವಬ್ದಾರಿತನದಿಂದ ಈ ಘಟನೆ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ರೀತಿ ದಲಿತ ಸಾಹಿತಿಗಳನ್ನು,ಲೇಖಕರರನ್ನು ಅವಮಾನಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಅವರೇ ಹೇಳಬೇಕಿದೆ.

ಕೇಂದ್ರದ ಕಚೇರಿಯಿಂದ ಕರೆ ಮಾಡಿ ಕಾರ್ಯಕ್ರಮಕ್ಕೆ ಬರಲು ಹೇಳಿ, ತಾವೇ ಬರೆದಿರುವ ಪುಸ್ತಕ ಕೇಳಿದರೆ ಹಣ ಕೊಡಿ ಎಂದಿದ್ದಾರೆ. ಕುಟುಂಬ ಸಮೇತರಾಗಿ ಕಾರು ಬಾಡಿಗೆ ಮಾಡಿಕೊಂಡು ಬಂದಿದ್ದ ಗಂಗಪ್ಪನವರು ಕುಟುಂಬಸ್ತರ ಮುಂದೆ ತಲೆತಗ್ಗಿಸುವಂತಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page