Wednesday, October 2, 2024

ಸತ್ಯ | ನ್ಯಾಯ |ಧರ್ಮ

ನಾವು AI ಸರ್ವಾಧಿಕಾರಕ್ಕೆ ಬಲಿಯಾಗುತ್ತಿದ್ದೇವೆಯೇ? ಯುವಲ್ ಹರಾರಿಯ ಹೊಸ ಪುಸ್ತಕ ‘ನೆಕ್ಸಸ್’ನಲ್ಲಿದೆ ಉತ್ತರ

ಬೆಂಗಳೂರು: ಮಾಹಿತಿ ಜಾಲಗಳಲ್ಲಿ ಆಗಿರುವ ಏರಿಕೆ ಮತ್ತು ಪ್ರಪಂಚದ ಮೇಲೆ ಅವುಗಳ ಆಳವಾದ ಪ್ರಭಾವವನ್ನು ಕುರಿತು ಇಸ್ರೇಲಿ ಬರಹಗಾರ ಮತ್ತು ಇತಿಹಾಸಕಾರ ಯುವಲ್ ನೋಹ್ ಹರಾರಿ ಅವರ ಹೊಸ ಪುಸ್ತಕ ನಮ್ಮ ಗಮನ ಸೆಳೆಯುತ್ತದೆ. ಕಥೆಗಳ ಶಕ್ತಿಯಿಂದ ಅಲ್ಗಾರಿದಮ್‌ಗಳ ಪ್ರಾಬಲ್ಯದವರೆಗೆ ಮತ್ತು ಕೃತಕ ಬುದ್ಧಿಮತ್ತೆಯ ಭರವಸೆಗಳು ಮತ್ತು ಅಪಾಯಗಳವರೆಗೆ ಮನುಕುಲದ ಪ್ರಯಾಣದ ಬಗ್ಗೆ ಇವರ Nexus ಪುಸ್ತಕ ಮಾತನಾಡುತ್ತದೆ. 

ಪೆಂಗ್ವಿನ್ ರಾಂಡಮ್ ಹೌಸ್ ಪ್ರಕಟಿಸಿರುವ “Nexus” ನಲ್ಲಿ 11 ಅಧ್ಯಾಯಗಳಿವೆ. ಈ ಪುಸ್ತಕ “ಮಾಹಿತಿ ಜಾಲಗಳು ನಮ್ಮ ಜಗತ್ತನ್ನು ಹೇಗೆ ನಿರ್ಮಿಸಿವೆ” ಎಂಬುದರ ಕಥೆಯಾಗಿದೆ. 

“AI ಬಗ್ಗೆ ಹೊಸದೇನಿದೆ, ಪ್ರಿಂಟಿಂಗ್ ಪ್ರೆಸ್‌ಗಳು ಮತ್ತು ರೇಡಿಯೊ ಸೆಟ್‌ಗಳಿಗಿಂತ ಇದು ಮೂಲಭೂತವಾಗಿ ಹೇಗೆ ಭಿನ್ನವಾಗಿದೆ ಮತ್ತು AI ಸರ್ವಾಧಿಕಾರವು ನಾವು ಹಿಂದೆ ನೋಡಿದ್ದಕ್ಕಿಂತ ಹೇಗೆ ಭಿನ್ನ ಎಂಬುದನ್ನು ಅರ್ಥಮಾಡಿಕೊಳ್ಳಲು ಇತಿಹಾಸದ ಆಳವಾದ ಜ್ಞಾನವು ಅತ್ಯಗತ್ಯವಾಗಿದೆ. ಈ ಪುಸ್ತಕವು ಹಿಂದಿನದನ್ನು ಅಧ್ಯಯನ ಮಾಡುವುದರಿಂದ ಭವಿಷ್ಯವನ್ನು ಊಹಿಸಲು ನಮಗೆ ಸಾಧ್ಯವಾಗುತ್ತದೆ ಎಂದು ವಾದಿಸುವುದಿಲ್ಲ.

“ಈ ಪುಸ್ತಕವನ್ನು ಬರೆಯುವ ಸಂಪೂರ್ಣ ಅಂಶವೆಂದರೆ ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡುವ ಮೂಲಕ ನಾವು ಕೆಟ್ಟ ಫಲಿತಾಂಶಗಳನ್ನು ತಡೆಯಬಹುದು. ನಾವು ಭವಿಷ್ಯವನ್ನು ಬದಲಾಯಿಸಲು ಸಾಧ್ಯವಾಗದಿದ್ದರೆ, ಅದನ್ನು ಚರ್ಚಿಸಲು ಸಮಯವನ್ನು ಏಕೆ ವ್ಯರ್ಥ ಮಾಡುಬೇಕು?” ಎಂದು ಈ ಪುಸ್ತಕದಲ್ಲಿ ಜನಪ್ರಿಯ ಪುಸ್ತಕ “ಸೇಪಿಯನ್ಸ್: ಎ ಬ್ರೀಫ್ ಹಿಸ್ಟರಿ ಆಫ್ ಹ್ಯೂಮನ್‌ಕೈಂಡ್” ನ ಈ ಲೇಖಕ ಬರೆಯುತ್ತಾರೆ.

ಉತ್ತಮ ಭವಿಷ್ಯವನ್ನು ರೂಪಿಸಲು ಮಾನವೀಯತೆಯು ಮಾಡಬೇಕಾದ ಆಯ್ಕೆಗಳ ರೋಮಾಂಚಕ ಮತ್ತು ಸಮಯೋಚಿತ ಪರಿಶೋಧನೆ ಎಂದು ಹೇಳಲಾಗಿರುವ ಈ ಪುಸ್ತಕವು “ಸಾರ್ವಜನಿಕ ಸಂವಾದವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ, ವಿಮರ್ಶಾತ್ಮಕ ಚಿಂತನೆಯನ್ನು ಉತ್ತೇಜಿಸುತ್ತದೆ ಮತ್ತು ತಾಂತ್ರಿಕ ವಿಕಾಸ ಹಾಗೂ ಅದರ ಸಾಮಾಜಿಕ ಪರಿಣಾಮಗಳ ಐತಿಹಾಸಿಕ ದಾಖಲೆಯನ್ನು ಒದಗಿಸುತ್ತದೆ”.

“AI ಮತ್ತು ಅಲ್ಗಾರಿದಮ್‌ಗಳು ನಮ್ಮ ಜೀವನವನ್ನು ವೇಗವಾಗಿ ಪರಿವರ್ತಿಸುತ್ತಿರುವ ಸಮಯದಲ್ಲಿ, ತಿಳುವಳಿಕೆಯುಳ್ಳ ಚರ್ಚೆಗಳನ್ನು ಉತ್ತೇಜಿಸಲು ಮತ್ತು ನಮ್ಮ ಸಾಮೂಹಿಕ ಆಯ್ಕೆಗಳಿಗೆ ಮಾರ್ಗದರ್ಶನ ನೀಡಲು ಇಂತಹ ಪುಸ್ತಕಗಳು ಅತ್ಯಗತ್ಯ ಎಂದು ನಾವು ನಂಬುತ್ತೇವೆ” ಎಂದು ಪೆಂಗ್ವಿನ್ ಸೆಲೆಕ್ಟ್‌ನ ಮಾರಾಟ ಮತ್ತು ಉತ್ಪನ್ನ ವಿಭಾಗದ ಮುಖ್ಯಸ್ಥ ಮನೋಜ್ ಸತ್ತಿ ಹೇಳುತ್ತಾರೆ..

2002 ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪಡೆದಿರುವ ಹರಾರಿ, ಪ್ರಸ್ತುತ ಜೆರುಸಲೆಮ್‌ನ ಹೀಬ್ರೂ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ವಿಭಾಗದಲ್ಲಿ ಪ್ರಾದ್ಯಾಪಕರಾಗಿದ್ದಾರೆ, “Homo Deus: A Brief History of Tomorrow” ಮತ್ತು “21 Lessons for the 21st Century” ಇವರ ಜಗದ್ವಿಖ್ಯಾತ ಪುಸ್ತಕಗಳು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page