Monday, June 17, 2024

ಸತ್ಯ | ನ್ಯಾಯ |ಧರ್ಮ

ಜಯಲಲಿತಾ ಸಾವಿನ ವರದಿ ತನಿಖೆಗೆ ಆದೇಶಿಸಿದ ಎ.ಆರ್ಮುಘಸ್ವಾಮಿ ಆಯೋಗ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು AIADMK ನಾಯಕಿ ಜೆ.ಜಯಲಲಿತಾ ಅವರ ಸಾವಿನ ಸುತ್ತಲಿನ ಸನ್ನಿವೇಶಗಳನ್ನು ಪರಿಶೀಲಿಸುವ ಪ್ರತ್ಯೇಕ ತನಿಖಾ ವರದಿಗಳನ್ನು ತಮಿಳುನಾಡು ಸರ್ಕಾರ ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿದೆ.

ಜಯಲಲಿತಾ ಸಾವಿನ ಕುರಿತು ತನಿಖೆ ನಡೆಸಿದ ಸಮಿತಿಯಲ್ಲಿ ಎ. ಅರ್ಮುಘಸ್ವಾಮಿ ಆಯೋಗವೂ ಒಂದು. ಆಯೋಗವು ಜಯಲಲಿತಾ ಅವರ ಆಪ್ತ ಸಹಾಯಕಿ ವಿ.ಕೆ. ಶಶಿಕಲಾ, ಮಾಜಿ ಆರೋಗ್ಯ ಸಚಿವ ಸಿ ವಿಜಯಭಾಸ್ಕರ್, ಡಾ ಶಿವಕುಮಾರ್ (ಜಯಲಲಿತಾ ಅವರ ಆಪ್ತ ವೈದ್ಯ ಮತ್ತು ಶಶಿಕಲಾ ಅವರ ಸಂಬಂಧಿ) ಮತ್ತು ಮಾಜಿ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಸಾವಿನ ಪ್ರಕರಣದ ತನಿಖೆಗೆ ಮನವಿ ಮಾಡಿತು.

ಜಯಲಲಿತಾ ಅವರ ಆಪ್ತರಾಗಿದ್ದ ಶಶಿಕಲಾ ಅವರ ಅನುಮಾನಾಸ್ಪದ ನಡೆ ಮತ್ತು ತನಿಖೆಗೆ ಅವರು ಸ್ಪಂದಿಸಿದ ರೀತಿಯನ್ನು ಪತ್ತೆ ಹಚ್ಚಿ ತನಿಖೆಗೆ ಆದೇಶಿಸಬೇಕು ಎಂದು ಎ.ಆರ್ಮುಘಸ್ವಾಮಿ ಅವರನ್ನು ಒಳಗೊಂಡ ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಸಾವಿನ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS) ನ ವೈದ್ಯಕೀಯ ಮಂಡಳಿಯನ್ನು ರಚಿಸಿತ್ತು. ಮಂಡಳಿಯು ಈ ವರ್ಷದ ಆರಂಭದಲ್ಲಿ ನ್ಯಾಯಮೂರ್ತಿ ಎ.ಆರ್ಮುಘ ಸ್ವಾಮಿ ಆಯೋಗಕ್ಕೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿತು. ಚೆನ್ನೈನ ಅಪೋಲೋ ಆಸ್ಪತ್ರೆಗಳ ಮನವಿಯ ಆಧಾರದ ಮೇಲೆ ಮಂಡಳಿಯನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಏಮ್ಸ್‌ಗೆ ಸೂಚಿಸಿತ್ತು.

ಜಯಲಲಿತಾ ಅವರು ಡಿಸೆಂಬರ್ 5, 2016 ರಂದು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಬಹು ಅಂಗಾಂಗ ವೈಫಲ್ಯ ಮತ್ತು ಇನ್ನಿತರ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಅರ್ಮುಘ ಸ್ವಾಮಿ ತನಿಖಾ ಆಯೋಗಕ್ಕೆ ಹಿಂದಿನ ಎಐಎಡಿಎಂಕೆ ಸರ್ಕಾರ ಆದೇಶ ನೀಡಿತ್ತು. ಜಯಲಲಿತಾ ಅವರು ನಿಧನರಾಗುವವರೆಗೆ 75 ದಿನಗಳ ಕಾಲ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲೇ ದಾಖಲಾಗಿದ್ದರು. ಬಹು ಮುಖ್ಯ ಅಂಶವೆಂದರೆ, AIADMK ನಾಯಕ ಮತ್ತು ಅಂದಿನ ವಿಧಾನಸಭಾ ಸ್ಪೀಕರ್ ಪಿ.ಎಚ್.ಪಾಂಡಿಯನ್ ಅವರು ಕೂಡಾ ಜಯಲಲಿತಾ ಸಾವಿನ ಸುತ್ತ ನಿಗೂಢ ವಿಚಾರಗಳಿವೆ ಎಂದು ಆರೋಪಿಸಿದ್ದರು.

ಸಧ್ಯ ಆರ್ಮುಘಸ್ವಾಮಿ ಅವರನ್ನು ಒಳಗೊಂಡ ಆಯೋಗ ಜಯಲಲಿತಾ ಆಪ್ತೆ ಶಶಿಕಲಾ ಸೇರಿದಂತೆ ಎಐಎಡಿಎಂಕೆ ಪಕ್ಷದ ಪ್ರಮುಖ ನಾಯಕರ ಮೇಲೆ ತನಿಖೆಗೆ ಆದೇಶಿಸಿದೆ.

Related Articles

ಇತ್ತೀಚಿನ ಸುದ್ದಿಗಳು