Thursday, June 13, 2024

ಸತ್ಯ | ನ್ಯಾಯ |ಧರ್ಮ

ಉಪೇಂದ್ರ ಬಂಧನಕ್ಕೆ ಆಗ್ರಹಿಸಲು ಮುಂದಾದ ಹೋರಾಟಗಾರರ ಬಂಧನ

ಸಮಾಜದ ತಳಸಮುದಾಯಗಳ ಬಗ್ಗೆ ಚಿತ್ರನಟ ಉಪೇಂದ್ರ ಅವರು ತುಚ್ಛವಾಗಿ, ಆಕ್ಷೇಪಾರ್ಹವಾಗಿ ಮಾತನಾಡಿದ್ದನ್ನು ವಿರೋಧಿಸಿ ಉಪೇಂದ್ರ ಬಂಧನಕ್ಕೆ ಆಗ್ರಹಿಸಿ, ಗೃಹಮಂತ್ರಿಗಳ ಮನೆ ಮುಂದೆ ಧರಣಿಗೆ ತೆರಳುತ್ತಿದ್ದ ಹೋರಾಟಗಾರರಾದ ಬಿ.ಆರ್.ಭಾಸ್ಕರ್ ಪ್ರಸಾದ್ ಹಾಗೂ ಪ್ರೊಫೆಸರ್ ಹರಿರಾಮ್ ಅವರ ನೇತೃತ್ವದ ತಂಡವನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಪೀಪಲ್ ಮೀಡಿಯಾ ಗೆ ಪ್ರತಿಕ್ರಿಯಿಸಿದ ಮುಖಂಡರಾದ ಭಾಸ್ಕರ್ ಪ್ರಸಾದ್ ‘ಉಪೇಂದ್ರ ಅವರ ಈ ಹೇಳಿಕೆ ಸ್ಪಷ್ಟವಾಗಿ ಖಂಡನಾರ್ಹ. ಸಮಾಜದಲ್ಲಿ ಕೆಟ್ಟದ್ದನ್ನು ಉದಾಹರಿಸಲು ಒಂದು ನಿರ್ದಿಷ್ಟ ಸಮುದಾಯ ಅದರಲ್ಲೂ ತಳಸಮುದಾಯಕ್ಕೆ ಹೋಲಿಕೆ ಮಾಡುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದ್ದಾರೆ.

‘ಉಪೇಂದ್ರ ಈ ಹೇಳಿಕೆ ನೀಡಿ ಇಷ್ಟು ದಿನವಾದರೂ ಅವರನ್ನು ಬಂಧಿಸದೇ ಇರುವುದನ್ನು ಪ್ರಶ್ನಿಸಿ, ಗೃಹಮಂತ್ರಿಗಳ ಮನೆ ಮುಂದೆ ಧರಣಿ ಮಾಡಲು ಮುಂದಾಗಿದ್ದೆವು. ಆದರೆ ಪೊಲೀಸರು ನಮ್ಮನ್ನು ವಿಧಾನಸೌಧದ ಮುಂದೆ ತಡೆದು ನಮ್ಮನ್ನು ವಶಕ್ಕೆ ಪಡೆದಿದ್ದಾರೆ. ಇದು ಯಾವ ನ್ಯಾಯ’ ಎಂದು ಪ್ರಶ್ನಿಸಿದ್ದಾರೆ.

ಅಷ್ಟೆ ಅಲ್ಲದೆ ‘ಗಾದೆಯಲ್ಲಿ ಇದ್ದ ಮಾತ್ರಕ್ಕೆ ತಳಸಮುದಾಯದ ಬಗ್ಗೆ ಆಡಿರುವ ಅವಹೇಳನಕಾರಿ ಮಾತನ್ನು ಪರಿಗಣಿಸಲು ಆಗುವುದಿಲ್ಲ. ಸಂವಿಧಾನದಲ್ಲಿ ಇಂತಹದಕ್ಕೆ ಅವಕಾಶವೇ ಇಲ್ಲ. ಆದರೆ ಘನ ನ್ಯಾಯಾಲಯ ಕೂಡಾ ಇಂತಹದ್ದನ್ನು ಪರಿಗಣಿಸುವುದಿಲ್ಲ ಎಂದರೆ ನಿಜಕ್ಕೂ ನೋವಿನ ಸಂಗತಿ, ಈ ಬಗ್ಗೆ ನ್ಯಾಯಾಲಯ ಕೂಡಾ ಗಂಭೀರವಾಗಿ ಆಲೋಚಿಸಬೇಕು’ ಎಂದು ಭಾಸ್ಕರ್ ಪ್ರಸಾದ್ ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು