Friday, June 14, 2024

ಸತ್ಯ | ನ್ಯಾಯ |ಧರ್ಮ

PFI ನಾಯಕರ ಬಂಧನದ ಅವದಿ ಇನ್ನೂ 5 ದಿನ ಮುಂದುವರಿಕೆ

ದೆಹಲಿಯಲ್ಲಿರುವ ರಾಷ್ಟ್ರೀಯ ತನಿಖಾ ದಳದ ನ್ಯಾಯಾಲಯವು PFI ಮತ್ತು SDPI ಗೆ ಸಂಬಂಧಿಸಿದ 19 ಆರೋಪಿಗಳ ಬಂಧನವನ್ನು ಇನ್ನೂ 5 ದಿನಗಳವರೆಗೆ ವಿಸ್ತರಿಸಿದೆ. ಅವರ 4 ದಿನಗಳ ಬಂಧನದ ಕೊನೆಯಲ್ಲಿ ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಸೆಪ್ಟೆಂಬರ್ 22 ರಂದು ದೇಶದ 11 ರಾಜ್ಯಗಳಾದ್ಯಂತ ರಾಷ್ಟ್ರೀಯ ತನಿಖಾ ದಳ, ಜಾರಿ ನಿರ್ದೇಶನಾಲಯ ಮತ್ತು ಸ್ಥಳೀಯ ಪೊಲೀಸರ ತಂಡವು ನಡೆಸಿದ ಬಹು ದಾಳಿಗಳಲ್ಲಿ 106 PFI ಮತ್ತು SDPI ಸದಸ್ಯರನ್ನು ಬಂಧಿಸಲಾಗಿದೆ.

ಕರ್ನಾಟಕ ಸೇರಿದಂತೆ ದೇಶಾದ್ಯಂತ ನಡೆದ ಈ ದಾಳಿ ಆ ದಿನಕ್ಕೆ ಹೆಚ್ಚು ಸುದ್ದಿ ಮಾಡಿತ್ತು. ಇದಕ್ಕೆ ಪ್ರತಿಯಾಗಿ PFI ಮತ್ತು SDPI ಮುಖಂಡರು ದೇಶಾದ್ಯಂತ ಆಕ್ರೋಶ ವ್ಯಕ್ತಪಡಿಸಿದ್ದು ಹಲವು ಕಡೆ ಇಂದಿಗೂ ಪ್ರತಿಭಟನೆ ನಡೆಯುತ್ತಿದೆ. ಜೊತೆಗೆ ಬಿಜೆಪಿ ಮತ್ತು RSS ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ SDPI ಮತ್ತು PFI ಸಂಘಟಕರು ಪತ್ರಿಕಾಗೋಷ್ಠಿ ಮೂಲಕ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು