BIG BREAKING NEWS :ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ವಿರುದ್ದ ಬಂಧನ ವಾರೆಂಟ್‌ ಜಾರಿ

ಗಾಜಾದಲ್ಲಿ ನಡೆಯುತ್ತಿರುವ ವ್ಯಾಪಕ ಹಿಂಸಾಚಾರದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಮತ್ತು ಇಸ್ರೇಲ್ ಮಾಜಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರಿಗೆ ಬಂಧನ ವಾರೆಂಟ್‌ ಹೊರಡಿಸಿದೆ.

ನೆತನ್ಯಾಹು ಮತ್ತು ಗ್ಯಾಲಂಟ್ ಅವರ ಮೇಲೆ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್-ಹಮಾಸ್ ಯುದ್ಧದ ಸಮಯದಲ್ಲಿ ನಡೆಸಿದ ಯುದ್ಧ ಅಪರಾಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪ ಹೊರಿಸಲಾಗಿದೆ.

ಇಸ್ರೇಲ್ ಹಮಾಸ್ ಮೇಲೆ ನಡೆಸಿದ ಭೀಕರ ಯುದ್ಧದಲ್ಲಿ, ಯುದ್ಧದ ನಿಯಮಗಳನ್ನು ಗಾಳಿಗೆ ತೂರಿ ಎದುರು ರಾಜ್ಯದ ನಾಗರೀಕರು ಹಸಿವಿನಿಂದ ಬಳಲುವಂತೆ ಮಾಡಿದ ಅಪರಾಧ; ಕೊಲೆ, ಕಿರುಕುಳ ಮತ್ತು ಇತರ ಅಮಾನವೀಯ ಕೃತ್ಯಗಳ ಮಾನವೀಯತೆಯ ವಿರುದ್ಧದ ಅಪರಾಧಗಳು ಸೇರಿದಂತೆ ಹೊಣೆಗಾರಿಕೆ ಮರೆತು ಯುದ್ಧದ ಹಾದಿ ತುಳಿದಿರುವ ಆರೋಪ ಹೊರಿಸಲಾಗಿದೆ.

(ಇನ್ನೂ ಹೆಚ್ಚಿನ ಮಾಹಿತಿ ಸಧ್ಯದಲ್ಲೇ ತಿಳಿಸಲಾಗುವುದು)

Related Articles

ಇತ್ತೀಚಿನ ಸುದ್ದಿಗಳು