Monday, September 22, 2025

ಸತ್ಯ | ನ್ಯಾಯ |ಧರ್ಮ

ರಸ್ತೆ ಅಪಘಾತದಲ್ಲಿ ಚಿತ್ರಕಲಾ ಶಿಕ್ಷಕ ಬಿ.ಎಸ್ ದೇಸಾಯಿ ಸೊಸೆ ನಿಧನ

ಹಾಸನ : ಪ್ರಜಾವಾಣಿ ಪತ್ರಿಕೆಯ ಆರ್ಟಿಸ್ಟ್ ಶಶಿಕಿರಣ ದೇಸಾಯಿ ಅವರ ಪತ್ನಿ ಕಲ್ಪನಾ (38) ಅವರು (ಹಾಸನದ ಕಲಾವಿದ ಬಿ.ಎಸ್.ದೇಸಾಯಿ ಅವರ ಸೊಸೆ) ಬೆಂಗಳೂರು ನಂದಿನಿ ಲೇಔಟ್ ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಮೃತಪಟ್ಟಿದ್ದಾರೆ.ಚಿಕ್ಕ ಮಗಳು ಡಿಂಪನಾ (4)ಸೇರಿದಂತೆ ಬಂಧು ಬಳಗವನ್ನ ಅಗಲಿದ್ದಾರೆ.ಮಗಳನ್ನು ಶಾಲೆಗೆ ಬಿಟ್ಟು ಆಫೀಸ್ ಗೆ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ. ಗಾಯಗೊಂಡ ಕಲ್ಪನಾ ಅವರನ್ನು ಕೂಡಲೇ ಕಣ್ವ ಸತ್ಯಸಾಯಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದರೂ ಪ್ರಯೋಜನವಾಗಲಿಲ್ಲ.ಸಂಜೆ ಹಾಸನಕ್ಕೆ ಹೋಗಿ ಅಂತ್ಯಕ್ರಿಯೆ ಮಾಡುವುದಾಗಿ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಸಂತಾಪ : ಶ್ರೀಮತಿ ಕಲ್ಪನಾ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಪ್ರಜಾವಾಣಿ ಬಳಗ, ಸ್ನೇಹಿತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page