Home ಇನ್ನಷ್ಟು ಕೋರ್ಟು - ಕಾನೂನು ಆರ್ಟಿಕಲ್‌ 35ಎ ಜಮ್ಮು ಮತ್ತು ಕಾಶ್ಮೀರದ ಜನರ ಸಾಂವಿಧಾನಿಕ ಹಕ್ಕುಗಳನ್ನು ಕಸಿದಿದೆ : ಡಿವೈ ಚಂದ್ರಚೂಡ್

ಆರ್ಟಿಕಲ್‌ 35ಎ ಜಮ್ಮು ಮತ್ತು ಕಾಶ್ಮೀರದ ಜನರ ಸಾಂವಿಧಾನಿಕ ಹಕ್ಕುಗಳನ್ನು ಕಸಿದಿದೆ : ಡಿವೈ ಚಂದ್ರಚೂಡ್

0

ಸಂವಿಧಾನದ ವಿಧಿ (Article) 35ಎ ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಿಂದ ಕೆಲವು ಪ್ರಮುಖ ಸಾಂವಿಧಾನಿಕ ಹಕ್ಕುಗಳಿಂದ ವಂಚಿತಗೊಳಿಸಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಇಂದು ಹೇಳಿದ್ದಾರೆ. “ಸಮಾನತೆಯ ಅವಕಾಶ, ರಾಜ್ಯ ಸರ್ಕಾರದಲ್ಲಿ ಉದ್ಯೋಗ ಮತ್ತು ಭೂಮಿ ಖರೀದಿಸುವ ಹಕ್ಕು — ಇವನ್ನು ನಾಗರಿಕರಿಂದ ಕಸಿದುಕೊಳ್ಳುತ್ತದೆ. ಏಕೆಂದರೆ ನಿವಾಸಿಗಳು (Jammu and Kashmir) ವಿಶೇಷ ಹಕ್ಕುಗಳನ್ನು ಹೊಂದಿದ್ದರು. ಆದರೆ ಅನಿವಾಸಿಗಳನ್ನು ಹೊರಗಿಡಲಾಗಿತ್ತು,” ಎಂದು ಅವರು ಹೇಳಿದ್ದಾರೆ. ಭಾರತೀಯ ಸಂವಿಧಾನವು ಜಮ್ಮು ಮತ್ತು ಕಾಶ್ಮೀರದ ಸಂವಿಧಾನಕ್ಕೂ ಮೇಲಿರುವ ದಾಖಲೆ ಎಂದು ಕೇಂದ್ರದ ಅಭಿಪ್ರಾಯಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ (Special Status) ನೀಡಿದ 370 ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ 11 ನೇ ದಿನದ ವಿಚಾರಣೆಯ ಸಂದರ್ಭದಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Article 35 A ಯನ್ನು Article 370 ಜೊತೆಗೆ 2019 ರ ಆಗಸ್ಟ್‌ನಲ್ಲಿ ರದ್ದುಗೊಳಿಸಲಾಗಿತ್ತು. ಹಿಂದಿನ ರಾಜ್ಯದ ಶಾಸಕಾಂಗವು “ಶಾಶ್ವತ ನಿವಾಸಿಗಳನ್ನು ( Permanent Residents) ” ವ್ಯಾಖ್ಯಾನಿಸಲು ಮತ್ತು ಅವರಿಗೆ ಸಾರ್ವಜನಿಕ ಉದ್ಯೋಗ, ಸ್ಥಿರ ಆಸ್ತಿ ವಿಚಾರದಲ್ಲಿ ವಿಶೇಷ ಹಕ್ಕುಗಳು ಮತ್ತು ಸವಲತ್ತುಗಳನ್ನು ಒದಗಿಸಲು ಅವಕಾಶ ಮಾಡಿಕೊಟ್ಟಿದೆ.

“ಆರ್ಟಿಕಲ್ 16 (1) ಅಡಿಯಲ್ಲಿ ದೇಶದ ಎಲ್ಲಾ ನಾಗರಿಕರಿಗೂ ಸಾರ್ವಜನಿಕ ಉದ್ಯೋಗ ಪಡೆಯುವ ಸಮಾನ ಹಕ್ಕಿದೆ. ರಾಜ್ಯ ಸರ್ಕಾರದ ಅಡಿಯಲ್ಲಿ ಉದ್ಯೋಗವನ್ನು ನಿರ್ದಿಷ್ಟವಾಗಿ ಆರ್ಟಿಕಲ್ 16 (1) ಅಡಿಯಲ್ಲಿ ಒದಗಿಸಲಾಗಿದೆ. ಆದ್ದರಿಂದ ಒಂದು ಕಡೆ ಆರ್ಟಿಕಲ್ 16 (1) ಮತ್ತೊಂದು ಕಡೆ ಆರ್ಟಿಕಲ್ 35 ಎ ನೇರವಾಗಿ ಮೂಲಭೂತ ಹಕ್ಕನ್ನು ಕಸಿದುಕೊಂಡಿದೆ,” ಎಂದು ಸಿಜೆಐ ಹೇಳಿದರು.

ಆರ್ಟಿಕಲ್ 19 ದೇಶದ ಯಾವುದೇ ಮೂಲೆಯಲ್ಲಿ ವಾಸಿಸುವ ಮತ್ತು ನೆಲೆಸುವ ಹಕ್ಕನ್ನು ನಾಗರಿಕರಿಗೆ ನೀಡುತ್ತದೆ. “ಆದ್ದರಿಂದ ಎಲ್ಲಾ ಮೂರು ಮೂಲಭೂತ ಹಕ್ಕುಗಳನ್ನು ಮೂಲಭೂತವಾಗಿ 35A ಕಸಿದುಕೊಳ್ಳುತ್ತದೆ, ಇದು ನ್ಯಾಯಾಂಗ ಪರಿಶೀಲನೆಯ ಅಧಿಕಾರವನ್ನೂ ಕಸಿದುಕೊಳ್ಳಲಾಗಿದೆ” ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವಲ್ಲಿ ಒಂದು ವೇದಿಕೆಯನ್ನು ಕಲ್ಪಿಸುವುದು ಕೇಂದ್ರದ ಪ್ರಮುಖ ವಾದಗಳಲ್ಲಿ ಒಂದು.
ಕೇಂದ್ರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ (Solicitor General Tushar Mehta), ಕೇಂದ್ರದ ಈ ನಡೆಯು ಜಮ್ಮು ಮತ್ತು ಕಾಶ್ಮೀರದ ಜನರನ್ನು ದೇಶದ ಇತರ ಭಾಗಗಳ ನಾಗರಿಕರಂತೆ ಸರಿಸಮಾನವಾಗಿ ಬದುಕುವಂತೆ ಮಾಡಿದೆ . ಜಮ್ಮು ಮತ್ತು ಕಾಶ್ಮೀರದಲ್ಲಿ ಶಿಕ್ಷಣದ ಹಕ್ಕನ್ನು ಸೇರಿಸುವ ತಿದ್ದುಪಡಿ ಸೇರಿದಂತೆ ಈ ಹಿಂದೆ ಜಾರಿಗೆ ತರದ ಎಲ್ಲಾ ಕಾನೂನುಗಳನ್ನು ಈಗ ಜಾರಿಗೊಳಿಸಲಾಗುತ್ತಿದೆ,” ಎಂದು ಅವರು ಹೇಳಿದರು.

” 370 ನೇ ವಿಧಿಯ ಪ್ರಕಾರ ಭಾರತೀಯ ಸಂವಿಧಾನಕ್ಕೆ ಮಾಡಲಾದ ಯಾವುದೇ ತಿದ್ದುಪಡಿಯು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ . ಆದ್ದರಿಂದ 2019 ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶಿಕ್ಷಣದ ಹಕ್ಕನ್ನು ಜಾರಿಗೊಳಿಸಲಾಗಿರಲಿಲ್ಲ,” ಎಂದು ಅವರು ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಜಾತ್ಯತೀತತೆ ಮತ್ತು ಸಮಾಜವಾದದ ತಿದ್ದುಪಡಿಯನ್ನು (Secularism and Socialism Amendment) ಎಂದಿಗೂ ಅಂಗೀಕರಿಸಲಾಗಿರಲಿಲ್ಲ ಎಂದು ಅವರು ಹೇಳಿದರು.

You cannot copy content of this page

Exit mobile version