ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಮತ್ತು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ದೀಪಾವಳಿ ಬೆಳಕಿನ ಹಬ್ಬವಾಗಿದೆ ಮತ್ತು ಪಟಾಕಿಯ ಹಬ್ಬವಲ್ಲ ಎಂದು.
ಈ ಹಬ್ಬದಲ್ಲಿ ಯಾರೂ ಪಟಾಕಿ ಸಿಡಿಸಬಾರದು ಎಂದು ಮನವಿ ಮಾಡಿದರು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು. ಪಟಾಕಿ ಸುಡಬಾರದು, ದೀಪ ಹಚ್ಚಬೇಕು ಎಂದು ಸುಪ್ರೀಂಕೋರ್ಟ್, ಹೈಕೋರ್ಟ್‌ಗಳೂ ಹೇಳಿವೆ ಎನ್ನುವುದನ್ನು ನೆನಪಿಸಿದರು.
ಪರಿಸರ ಹಾಳಾಗುತ್ತದೆಯಾದ್ದರಿಂದ ಪಟಾಕಿ ಸುಡಬಾರದು, ದೀಪ ಹಚ್ಚಬೇಕು ಎಂದು ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳೂ ಸೂಚಿಸಿವೆ. ಇದು ಬೆಳಕಿನ ಹಬ್ಬ, ಪಟಾಕಿಯ ಹಬ್ಬವಲ್ಲ. ಪಟಾಕಿ ಹಚ್ಚಬೇಡಿ ಎಂದು ಹೇಳುವುದು ಯಾರದೋ ಪರವಾಗಿ ಮಾತನಾಡಿದಂತಲ್ಲ. ಮಾಲಿನ್ಯ ಹೆಚ್ಚಾದರೆ ನಮ್ಮ ಮಕ್ಕಳ ಆರೋಗ್ಯ ಹದಗೆಡುತ್ತದೆ. ಇದರಲ್ಲಿ ಹಿಂದೂ ಅಥವಾ ಮುಸ್ಲಿಂ ಚಿಂತನೆ ಇಲ್ಲ. ಪ್ರತಿಯೊಬ್ಬರ ಜೀವನವೂ ಮುಖ್ಯ’ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.