Home ನಿಧನ ಸುದ್ದಿ ಶಿವಮೊಗ್ಗ; ಬಹು ಅಂಗಾಂಗ ವೈಫಲ್ಯದಿಂದ ತ್ಯಾವರೇಕೊಪ್ಪದ 18 ವರ್ಷದ ಆರ್ಯ ನಿಧನ

ಶಿವಮೊಗ್ಗ; ಬಹು ಅಂಗಾಂಗ ವೈಫಲ್ಯದಿಂದ ತ್ಯಾವರೇಕೊಪ್ಪದ 18 ವರ್ಷದ ಆರ್ಯ ನಿಧನ

0

ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮದ 18.5 ವರ್ಷದ ಸಿಂಹ ‘ಆರ್ಯ’ ಸೋಮವಾರ ಮೃತಪಟ್ಟಿದೆ. ಹಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಾ, ತೀವ್ರ ಅಸ್ವಸ್ಥಗೊಂಡಿದ್ದ ಸಿಂಹ ಆರ್ಯ ಚಿಕಿತ್ಸೆಯ ಬಳಿಕವೂ ಮೃತಪಟ್ಟಿದೆ.

ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಆರ್ಯನಿಗೆ ಹುಲಿ-ಸಿಂಹಧಾಮದ ವೈದ್ಯ ಡಾ.ಮುರಳಿ ಮನೋಹರ್ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು.

ಆರ್ಯ ಹುಲಿ-ಸಿಂಹ ಧಾಮದಲ್ಲಿರುವ ಸಿಂಹಗಳಲ್ಲಿಯೇ ಅತ್ಯಂತ ಹಿರಿಯ. 2008ರಲ್ಲಿ ಮೈಸೂರು ಮೃಗಾಲಯದಿಂದ ಆರ್ಯನನ್ನು ಶಿವಮೊಗ್ಗಕ್ಕೆ ಕರೆತರಲಾಗಿತ್ತು. ಹಲವು ದಿನಗಳಿಂದ ಆಹಾರ ತಿನ್ನುವುದನ್ನೂ ನಿಲ್ಲಿಸಿದ್ದ ಆರ್ಯ, ಕೇವಲ ಚಿಕಿತ್ಸೆಯ ಮೂಲಕವೇ ದಿನ ದೂಡುತ್ತಿತ್ತು. ಅದೇ ಕಾರಣಕ್ಕೆ ಸಿಂಹದಾಮದಿಂದ ಶಿವಮೊಗ್ಗಕ್ಕೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.

You cannot copy content of this page

Exit mobile version