Tuesday, January 27, 2026

ಸತ್ಯ | ನ್ಯಾಯ |ಧರ್ಮ

ಆಶಿಕಿ ಸಾಂಗ್ಸ್ ಆಗಸ್ಟ್ 18ಕ್ಕೆ ಆಡಿಯೋ ರಿಲೀಸ್

ಆಶಿಕಿ ಸಾಂಗ್ಸ್ ಅದಾಕ್ಷಣ ಚಿತ್ರಪ್ರೇಮಿಗಳ ಮನಸ್ಸಿಗೆ ಬರೋದು 1990 ರಲ್ಲಿ ಬಿಡುಗಡೆ ಆದ ರಾಹುಲ್ ರಾಯ್ ಮತ್ತು ಅನು ಆಗರ್ ವಾಲ್ ಅಭಿನಯದ ಆಶಿಕಿ ಸಿನಿಮಾದ ಹಾಡುಗಳು. ಆದರೆ ಈಗ ನಾವು ಮಾತಾಡ್ತಾ ಇರೋದು, ನಮ್ಮ ಕನ್ನಡದ ಅಚ್ಚ ಪ್ರತಿಭೆ ಸಿನಿಮಾ ಪತ್ರಕರ್ತ ಸಂದೀಪ್ ಕುಮಾರ್ ನಾಯಕನಾಗಿ ಅಭಿನಯಿಸಿರೋ ಚಿತ್ರ ಆಶಿಕಿಯ ಬಗ್ಗೆ.

‘ಕ್ವಾಟ್ಲೆ’ ಸಿನಿಮಾ ಮೂಲಕ ಚಂದನವನದಲ್ಲಿ ಒಂದಷ್ಟು ಸುದ್ದಿ ಮಾಡಿದ್ದ ನಿರ್ದೇಶಕಿ ಜೆ ಚಂದ್ರಕಲ ಅವರ ನಿರ್ದೇಶನದಲ್ಲಿ ಮೂಡಿ ಬರ್ತಿರುವ ‘ಆಶಿಕಿ’ ಸಿನಿಮಾ ಇತ್ತೀಚೆಗೆ ಮತ್ತೆ ಸೌಂಡ್ ಮಾಡುತ್ತಿದೆ. ಸಾಕಷ್ಟು ನಿರೀಕ್ಷೆಯನ್ನು ಸೃಷ್ಟಿಸಿರುವ ‘ಆಶಿಕಿ’ ಸಿನಿಮಾ ಬಿಡುಗಡೆಗೂ ಮುನ್ನ ಹಾಡುಗಳ ಮೂಲಕ ಎಲ್ಲರ ಮನಸೂರೆಗೊಳ್ಳಲು ಸಜ್ಜಾಗಿದೆ. ಚಿತ್ರದ ‘ಯಾರಾ ಯಾರಾ’ ಹಾಡಿನ ವೀಡಿಯೋ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯಕ್ಕೂ ಮುನ್ನುಡಿ ಬರೆದಿದೆ ಚಿತ್ರತಂಡ. ಲಿಯೋ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಸ್ವತಃ ಚಿತ್ರದ ನಿರ್ದೇಶಕಿ ಜೆ ಚಂದ್ರಕಲ ಸಾಹಿತ್ಯ ಬರೆದಿದ್ದು ಅಶ್ವಿನ್ ಶರ್ಮಾ ದನಿಯಾಗಿದ್ದಾರೆ.

ಮ್ಯೂಸಿಕಲ್ ಲವ್ ಸ್ಟೋರಿ ಹಾಗೂ ತ್ರಿಕೋನ ಪ್ರೇಮಕಥೆ ಹೊತ್ತ ‘ಆಶಿಕಿ’ ಚಿತ್ರದಲ್ಲಿ ಸಾಕಷ್ಟು ವರ್ಷ ಮಾಧ್ಯಮ ರಂಗದಲ್ಲಿ ಸಿನಿಮಾ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ  ಸಂದೀಪ್ ಕುಮಾರ್ ನಾಯಕರಾಗಿ ಅಭಿನಯಿಸಿದ್ದು ನಾಯಕಿಯಾಗಿ ಐಶ್ವರ್ಯ ಸಿಂಧೋಗಿ, ಹಾಗೂ ಇನ್ನೊಬ್ಬ ನಾಯಕನ ಪಾತ್ರದಲ್ಲಿ ಪ್ರದೀಪ್ ಕುಮಾರ್ ನಟಿಸಿದ್ದು  ಗುರುಪ್ರಸಾದ್, ಸುಚೇಂದ್ರ ಪ್ರಸಾದ್, ತುಳಸಿ ಶಿವಮಣಿ, ಪ್ರಮೋದಿನಿ ಚಿತ್ರದ ತಾರಾಬಳಗದಲ್ಲಿದ್ದಾರೆ.  ಇತ್ತಿಚೆಗಷ್ಟೆ ಸೆನ್ಸಾರ್ ಮಗಿಸಿರುವ ಆಶಿಕಿ ದಸರಾದಲ್ಲಿ  ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದ್ದು ಇದೇ ತಿಂಗಳಲ್ಲಿ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು ಪ್ರತಿ ಹಾಡುಗಳು ವಿಭಿನ್ನವಾಗಿ ಮೂಡಿ ಬಂದಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕಿ ಜೆ. ಚಂದ್ರಕಲಾ.

ಕುಲು ಮನಾಲಿ, ಕೇರಳ, ಆಂಧ್ರಪ್ರದೇಶ, ಪಂಜಾಬ್, ಚಂಡೀಗಡ, ಚಿಕ್ಕಮಗಳೂರು, ಆಗ್ರಾ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಆಶಿಕಿ ಚಿತ್ರದ ಚಿತ್ರೀಕರಣ ನಡೆದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page