Sunday, July 27, 2025

ಸತ್ಯ | ನ್ಯಾಯ |ಧರ್ಮ

ಆಸಿಫ್, ಫರೀದ್ ಅಹ್ಮದ್ ಗೆ ದಂಡ ಹಾಕಿದ ಐಸಿಸಿ

ಮೊನ್ನೆ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯದ ವೇಳೆ ಮೈದಾನದಲ್ಲಿ ನಡೆದ ಘರ್ಷಣೆಯಲ್ಲಿ ಐಸಿಸಿ ನೀತಿ ಸಂಹಿತೆಯ ಹಂತ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ  ಪಾಕಿಸ್ತಾನದ ಆಸಿಫ್ ಅಲಿ ಮತ್ತು ಅಫ್ಘಾನಿಸ್ತಾನದ ಫರೀದ್ ಅಹ್ಮದ್ ಅವರಿಗೆ ಶಿಕ್ಷೆ ವಿಧಿಸಲಾಗಿದೆ. 19ನೇ ಓವರ್‌ನ ಐದನೇ ಎಸೆತದ ನಂತರ ನಡೆದ ವಾಗ್ವಾದಕ್ಕಾಗಿ ಈ ಜೋಡಿಗೆ ಪಂದ್ಯದ ಶುಲ್ಕದ 25% ಅನ್ನು ದಂಡ ವಿಧಿಸಲಾಗಿದೆ.

ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ರೂಪಿಸಲಾಗಿರುವ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.6 ಅನ್ನು ಆಸಿಫ್ ಉಲ್ಲಂಘಿಸಿದ್ದರು. ಇದು ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಅವಮಾನಕರವಾದ ಗೆಸ್ಚರ್ ಅನ್ನು ಬಳಸುವುದಕ್ಕೆ ಸಂಬಂಧಿಸಿದೆ. ಆದರೆ ಫರೀದ್ ಆರ್ಟಿಕಲ್ 2.1.12 ಅನ್ನು ಉಲ್ಲಂಘಿಸಿರುವುದು ಕಂಡುಬಂದಿತ್ತು.

ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಆಟಗಾರ, ಆಟಗಾರನ ಬೆಂಬಲ ಸಿಬ್ಬಂದಿ, ಅಂಪೈರ್, ಮ್ಯಾಚ್ ರೆಫರಿ ಅಥವಾ ಯಾವುದೇ ಇತರ ವ್ಯಕ್ತಿಯೊಂದಿಗೆ (ವೀಕ್ಷಕರನ್ನು ಒಳಗೊಂಡಂತೆ) ಅನುಚಿತ ದೈಹಿಕ ಸಂಪರ್ಕಕ್ಕೆ ಸಂಬಂಧಿಸಿದಂತೆ ಮಾಡಲಾಗಿರುವ ನಿಯಮ ಇದು. ಇದೀಗ ಇಬ್ಬರೂ ಆಟಗಾರರು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಪ್ರಸ್ತಾಪಿಸಿದ ನಿರ್ಬಂಧಗಳಿಗೆ ತಲೆ ಆಡಿಸಿದ್ದಾರೆ. ಪಂದ್ಯದ ವೇಳೆ ಈ ಜೋಡಿಯ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದ್ದು, ಮೈದಾನದಲ್ಲಿ ಘರ್ಷಣೆ ತೀವ್ರವಾಗಿತ್ತು.

ಅಹ್ಮದ್ ಬೌಲಿಂಗ್ ಮಾಡಿದ ನಿಧಾನಗತಿಯ ಬೌನ್ಸರ್ ನಲ್ಲಿ ಆಸಿಫ್ ಅಲಿ ಶಾರ್ಟ್ ಫೈನ್ ಲೆಗ್‌ನಲ್ಲಿ ಕ್ಯಾಚ್ ನೀಡಿದರು. ಆಗ ಅಲಿ ಪೆವಿಲಿಯನ್‌ಗೆ ತೆರಳುತ್ತಿದ್ದಾಗ ಅಹ್ಮದ್ ವಿಕೆಟ್‌ ಪಡೆದ ಸಂಭ್ರಮದಲ್ಲಿ ಆಸಿಫ್ ಅವರ ಮೇಲೇರಿ ಹೋಗಿದ್ದರು. ಇದಕ್ಕೆ ಆಸಿಫ್ ಕೂಡಾ ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು. ಆದರೆ ಇದು ಕೇವಲ ಆಟಗಾರರಿಗೆ ಸಂಬಂಧ ಪಡದೆ, ಮೈದಾನದ ಹೊರಗೆ ಪಾಕ್ ಮತ್ತು ಆಫ್ಗನ್ ಅಭಿಮಾನಿಗಳು ಕೂಡಾ ಇದರಿಂದಾಗಿ ರಂಪಾಟ ಮಾಡಿಕೊಂಡು ಸ್ಟೇಡಿಯಂನ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page