Thursday, June 13, 2024

ಸತ್ಯ | ನ್ಯಾಯ |ಧರ್ಮ

ಅಸ್ಸಾಂ, ಪಶ್ಚಿಮ ಬಂಗಾಳಕ್ಕೂ ಸಂಚರಿಸಲಿರುವ ʼಭಾರತ್‌ ಜೋಡೋ ಯಾತ್ರೆʼ

ನವದೆಹಲಿ :ಕಾಂಗ್ರೆಸ್‌ ಹಮ್ಮಿಕೊಂಡಿರುವ ಭಾರತ್‌ ಜೋಡೋ ಯಾತ್ರೆಯು ಮುಂದಿನ ದಿನಗಳಲ್ಲಿ ದೇಶದ ಇನ್ನೂ ಹಲವೆಡೆ ಸಂಚರಿಸುವ ಬಗ್ಗೆ ಕಾಂಗ್ರೆಸ್‌ ಪ್ರಧಾನ ಸಂವಹನ ಕಾರ್ಯದರ್ಶಿ ಜೈ ರಾಮ್‌ ರಮೇಶ್‌ ಅವರು ಮಾಹಿತಿ ನೀಡಿದ್ದಾರೆ.

ಕಳೆದ 9 ದಿನಗಳಿಂದ ನಡೆಯುತ್ತಿರುವ ಭಾರತ್‌ ಜೋಡೋ ಯಾತ್ರೆ ಪ್ರಸ್ತುತ ಕೇರಳ ಕೊಲ್ಲಂನಲ್ಲಿ ನಡೆಯುತ್ತಿದ್ದು ಈ ಕುರಿತು ಮಾತನಾಡಿದ ಜೈ ರಾಮ್‌ ರಮೇಶ್ ‌ʼಯಾತ್ರೆಯು ನವೆಂಬರ್‌ 1ರಿಂದ ಅಸ್ಸಾಂನಲ್ಲಿರುವ ಧುಬ್ರಿಯಿಂದ ಸಾದಿಯಾವರೆಗೆ ಪ್ರಾರಂಭವಾಗುತ್ತದೆ ಮತ್ತು ಹೀಗೆ ಮುಂದುವರೆಯುವ ಈ ಯಾತ್ರೆಯು ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಪಶ್ಚಿಮ ಬಂಗಾಳಕ್ಕೂ ಕಾಲಿಡಲಿದೆ ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು