ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ನಲ್ಲಿ ಸ್ಪರ್ಧಿಗಳಾದ ಗಿಲ್ಲಿ ನಟ ಮತ್ತು ರಿಷಾ ಗೌಡ ನಡುವೆ ನಡೆದ ಘರ್ಷಣೆ ಇದೀಗ ಕಾನೂನು ಹಾದಿಗೆ ತಲುಪಿದೆ. ಶೋ ಸಮಯದಲ್ಲಿ ರಿಷಾ ಗೌಡ ಗಿಲ್ಲಿ ನಟನ ಮೇಲೆ ಹಲ್ಲೆ ನಡೆಸಿದರೆಂಬ ಆರೋಪದ ಮೇಲೆ ಜಿಲ್ಲಾ ಸಿಐಎನ್ ಠಾಣೆಯಲ್ಲಿ ರಿಷಾ ವಿರುದ್ಧ ದೂರು ದಾಖಲಾಗಿದೆ.
ಘಟನೆ ಕೆಲ ದಿನಗಳ ಹಿಂದೆ ಮನೆಯಲ್ಲಿ ಬಾತ್‌ರೂಂ ಬಳಕೆ ವೇಳೆ ನಡೆದ್ದಿದ್ದು, ಬಕೆಟ್ ನೀಡುವ ವಿಚಾರದಲ್ಲಿ ಉಂಟಾದ ವಿವಾದದಿಂದ ಇಬ್ಬರ ಮಧ್ಯೆ ವಾಗ್ವಾದ ಉಲ್ಬಣಗೊಂಡಿತ್ತು. ರಿಷಾ ಅವರ ಬಟ್ಟೆಗಳು ನೆಲದ ಮೇಲೆ ಬಿದ್ದ ಹಿನ್ನೆಲೆಯಲ್ಲಿ ಅವರು ಕೋಪಗೊಂಡು ಗಿಲ್ಲಿ ನಟನ ಮೇಲೆ ಹಲ್ಲೆ ನಡೆಸಿದರೆಂದು ದೂರಿನಲ್ಲಿ ತಿಳಿಸಲಾಗಿದೆ.
ಬಿಗ್ ಬಾಸ್ ಆಯೋಜಕರು ಘಟನೆಯ ಕುರಿತು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಗಿಲ್ಲಿ ಅಭಿಮಾನಿಗಳು ರಿಷಾ ವಿರುದ್ಧ ದೂರು ದಾಖಲಿಸಿದ್ದಾರೆ. “ನಮ್ಮ ಪ್ರಿಯ ಸ್ಪರ್ಧಿಯ ಮೇಲೆ ಹಲ್ಲೆ ನಡೆದಿದ್ದರೂ ಶೋ ತಂಡ ಕ್ರಮ ಕೈಗೊಂಡಿಲ್ಲ. ನ್ಯಾಯ ಸಿಗುವ ತನಕ ಹೋರಾಟ ಮುಂದುವರಿಸುತ್ತೇವೆ,” ಎಂದು ಅಭಿಮಾನಿಗಳು ತಿಳಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಕುಶಲಾ ಎಂಬ ಮಹಿಳೆಯೊಬ್ಬರು ರಿಷಾ ಗೌಡ ಗೌರವ ಹಾನಿಗೆ ಒಳಗಾದರೆಂಬ ದೂರನ್ನು ಮಹಿಳಾ ಆಯೋಗಕ್ಕೆ ನೀಡಿದ್ದಾರೆ. ಆಯೋಗವು ಘಟನೆಯ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಸಂಬಂಧಪಟ್ಟ ವಿಡಿಯೋ ದೊರಕದ ಹಿನ್ನೆಲೆ ಪ್ರಕರಣವನ್ನು ಕಾನೂನು ವಿಭಾಗಕ್ಕೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
