Saturday, June 15, 2024

ಸತ್ಯ | ನ್ಯಾಯ |ಧರ್ಮ

ವಿಧಾನಸಭಾ ಚುನಾವಣೆ : ಕಾರ್ಕಳಕ್ಕೆ  ಸಂಭಾವ್ಯ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ ?

ಕಾರ್ಕಳ : ಕಾಂಗ್ರೆಸ್ಸಿನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೈೂಲಿಯವರ ಬೆಂಗಳೂರು ನಿವಾಸದಲ್ಲಿ ನಡೆದ ಕಾರ್ಕಳದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಯಾವನೇ ಅಭ್ಯರ್ಥಿಯಾದರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷಕ್ಕೆ ಗೆಲುವು ತರಬೇಕೆಂದು ನಿರ್ಣಯ ಕೈಗೊಳ್ಳಲಾಯಿತು. ಕಾರ್ಕಳದಿಂದ ಸುಮಾರು ನಲ್ವತ್ತು ಮಂದಿ ಕಾಂಗ್ರೆಸ್ಸಿಗರು ಹೋಗಿದ್ದು ಜೊತೆಯಲ್ಲಿ ಅಭ್ಯರ್ಥಿ ಆಕಾಂಕ್ಷಿಗಳೂ ಹೋಗಿದ್ದರು.

ಹೆಬ್ರಿಯ ಅಪ್ಪಿ ಬಲ್ಲಾಳರ ಅಪೇಕ್ಷೆಯಂತೆ, ಕಾರ್ಯಕರ್ತರ ಅಭಿಪ್ರಾಯಗಳನ್ನು ಪ್ರತಿಯೊಬ್ಬರಿಂದ ರಹಸ್ಯವಾಗಿ ಪಡೆದು ಕೊಳ್ಳಲಾಯಿತು. ಉದಯ ಶೆಟ್ಟಿ ಸಹಿತ ಯಾರಿಗೇ ಟಿಕೆಟ್ ದೊರೆತರೂ ಪಕ್ಷದಿಂದ  ಒಗ್ಗಟ್ಟಿನ ಕೆಲಸ ಆಗಬೇಕು ಎಂದು ಅಭಿಪ್ರಾಯ ಮಂಡಿಸಿದಾಗ ಮುನಿಯಾಲು ಉದಯ ಶೆಟ್ಟರಿಗೇ ಟಿಕೆಟ್‌ ಖಚಿತ ಅನ್ನುವ ಗುಮಾನಿ ಹುಟ್ಟಿಕೊಂಡಿದೆ.

ಉದಯ ಶೆಟ್ಟಿಯವರ ಕಟ್ಟಾ ಬೆಂಬಲಿಗ, ಉದ್ಯಮಿ ಅಪ್ಪಿ ಬಲ್ಲಾಳರವರ ನಿರ್ದೇಶನದಂತೆಯೇ ಮೈೂಲಿ ಸಭೆ ನಡೆಸಿರುವುದರ ಉದ್ದೇಶ, ಕಾರ್ಕಳದಲ್ಲಿ ಯಾರೇ ಅಭ್ಯರ್ಥಿಯಾಗಲಿ ಪಕ್ಷಕ್ಕೆ ಮತ್ತೆ ಗೆಲುವು ತಂದುಕೊಡುವುದಷ್ಟೇ ಆಗಿದೆ. ಮೈೂಲಿಯವರ ಮೊಂಡುತನಕ್ಕೆ ಹೆಬ್ರಿ ಎ.ಪಿ ಎಂ ಸಾರಿಗೆ ಸಂಸ್ಥೆಯ ಅಪ್ಪಿ ಬಲ್ಲಾಳ್ ಬ್ರೇಕ್ ಹಾಕಿರುವುದಂತೂ ಸತ್ಯ.

ಸಭೆಯಲ್ಲಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಪಾಲ್ಗೊಂಡಿರಲಿಲ್ಲ.

ವರದಿ : ವಿ ಕೆ ವಾಲ್ಪಾಡಿ

Related Articles

ಇತ್ತೀಚಿನ ಸುದ್ದಿಗಳು