Wednesday, June 19, 2024

ಸತ್ಯ | ನ್ಯಾಯ |ಧರ್ಮ

ವಿಧಾನಸಭೆ ಅಧಿವೇಶನ| ನೆರೆ ಕುರಿತು ಬಿಜೆಪಿ ಶಾಸಕರುಗಳ ಹಾಸ್ಯ: ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ರಾಜ್ಯದಲ್ಲಿ ಮಳೆ ಆವಾಂತದದಿಂದ ರಸ್ತೆಗಳು ಜಲಾವೃತಗೊಂಡಿದ್ದ ಸ್ಥಳಗಳಿಗೆ  ಭೇಟಿ ನೀಡಲು ಹೋಗಿದ್ದಾಗ ಬೋಟ್‌ಗಳಲ್ಲಿ ಹೋಗಿದ್ದೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮಾತಿಗೆ ಅಧಿವೇಶದಲ್ಲಿದ್ದ ಬಿಜೆಪಿ ನಾಯಕರು ಎರೆಡು ಅಡಿ ನೀರಿನಲ್ಲಿ ಮಾಜಿ ಮುಖ್ಯಮಂತ್ರಿಯವರನ್ನು ಬೋಟ್‌ನಲ್ಲಿ ಕರೆದುಕೊಂಡು ಹೋದವರು ಯಾರು ಎಂದು ಹಾಸ್ಯವಾಗಿ ನುಡಿದರು.

ಈ ಕುರಿತು ಮಾತನಾಡಿದ ಸಿದ್ದರಾಮಯ್ಯ ಅವರು, ನಾನು ನನ್ನ ಸ್ವಂತ ಬೋಟ್‌ ನಲ್ಲಿ ಹೋಗಿರಲಿಲ್ಲ, ರಾಜ್ಯ ಸರ್ಕಾರ ಪ್ರವಾಹ ಭೀತಿಯಿಂದ ಜನರ ರಕ್ಷಣೆಗೆಂದು ಕಳಿಸಿದ್ದ ಎನ್‌ಡಿಆರ್‌ಎಫ್‌ ತಂಡದ ಬೋಟ್‌ ನಲ್ಲಿ ಹೋಗಿದ್ದೆ ಎಂದು ತಿರುಗೇಟು ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು