Saturday, September 20, 2025

ಸತ್ಯ | ನ್ಯಾಯ |ಧರ್ಮ

ಕಬಾಬ್‌ ಗ್ಯಾಂಗ್‌ ಕೇಸ್‌ | ಚೈತ್ರಾ ಕುಂದಾಪುರ ಹೆಸರಿನಲ್ಲಿ ಕೋಟಿ ಕೋಟಿ ಮೌಲ್ಯದ ಸೊತ್ತು ಪತ್ತೆ

ಬೆಂಗಳೂರು: ಟಿಕೆಟ್‌ ವಂಚನೆ ಕೇಸು ಬಗೆದಷ್ಟೂ ಪದರಗಳನ್ನು ಬಿಡುತ್ತಿದ್ದು, ಈಗ ಬೆಂಗಳೂರು ಸಿಸಿಬಿ ಪೊಲೀಸರು ಚೈತ್ರಾಗೆ ಸೇರಿದ ಕೋಟ್ಯಂತರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸರ್ಚ್‌ ವಾರೆಂಟ್‌ ಪಡೆದು ಶೋಧನೆ ನಡೆಸಿದ ಸಿಸಿಬಿ ಪೊಲೀಸ್‌ ಪಡೆ ಉಡುಪಿಯ ಉಪ್ಪೂರು ಶ್ರೀರಾಮ ಸೊಸೈಟಿಯಲ್ಲಿ ಆಸ್ತಿ, ಬಂಗಾರ ಪತ್ತೆ ಮಾಡಿದೆ. 1 ಕೋಟಿ 8 ಲಕ್ಷ ರೂಪಾಯಿ FD, ಸೊಸೈಟಿಯಲ್ಲಿ 40 ಲಕ್ಷ ರೂ. ನಗದು, ಸುಮಾರು 400 ಗ್ರಾಂ ಚಿನ್ನ ಕೂಡ ಪತ್ತೆ ಮಾಡಿದೆ.

ಈ ನಡುವೆ ಆಸ್ಪತ್ರೆಯು ಚೈತ್ರಾ ಹೆಲ್ತ್‌ ಬುಲೆಟಿನ್‌ ಬಿಡುಗಡೆ ಮಾಡಿದ್ದು ಅದರ ವಿವರಗಳ ಹೀಗಿದೆ:

ಹೆಲ್ತ್​ ಬುಲೆಟಿನ್​ ಪ್ರಕಾರ ಚೈತ್ರಾ ಕುಂದಾಪುರ ಅವರ ಆರೋಗ್ಯ ಸ್ಥಿರವಾಗಿದೆ. ಆದರೆ, ಎಂಆರ್​ಐ ಸ್ಕ್ಯಾನ್​​​ಗೆ ತಜ್ಞ ವೈದ್ಯರು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಚೈತ್ರಾಳಿಗೆ ವೈದ್ಯರು MRI ಸ್ಕ್ಯಾನ್ ಮಾಡಲಿದ್ದಾರೆ. ಒಂದು ವೇಳೆ MRI ನಾರ್ಮಲ್ ಇದ್ದರೆ ಇಂದೇ ಚೈತ್ರಾ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.

ಚೈತ್ರಾ ಪೊಲೀಸರ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ತಿಳಿದುಬಂದಿದೆ. ಪೊಲೀಸರು ಇದುವರೆಗೂ ಒಂದು ಪುಟ ಹೇಳಿಕೆಯನ್ನೂ ದಾಖಲು ಮಾಡಲು ಸಾಧ್ಯವಾಗಿಲ್ಲ. ಅಷ್ಟು ಹೈಡ್ರಾಮಾ ಮಾಡುತ್ತಿದ್ದಾಳೆ. ನಾನೇನು ಮಾಡಿಲ್ಲ, ಎಲ್ಲವೂ ಸ್ವಾಮೀಜಿಗೆ ಗೊತ್ತು ಎಂದು ಮಾತ್ರ ಹೇಳುತ್ತಿದ್ದಾಳೆ. ಅಲ್ಲದೆ ಪ್ರತಿಯೊಂದಕ್ಕೂ ಅಳುವುದು ಮತ್ತು ಕೂಗಾಡುತ್ತಿದ್ದಾಳೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page