Tuesday, July 2, 2024

ಸತ್ಯ | ನ್ಯಾಯ |ಧರ್ಮ

ಸಂಘರ್ಷದ ಮಧ್ಯೆ ಗಾಜಾದಲ್ಲಿ ಸಿಕ್ಕಿಹಾಕಿಕೊಂಡಿರುವ ತಮಿಳುನಾಡಿನ ಪ್ರಾಧ್ಯಾಪಕಿ

ಬೆಂಗಳೂರು,ಅಕ್ಟೋಬರ್.‌14: ತಿರುಚನಪಳ್ಳಿಯ ಅನ್ಬಿಲ್ ಧರ್ಮಲಿಂಗಂ ಕೃಷಿ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಹ ಪ್ರಾಧ್ಯಾಪಕರೊಬ್ಬರು ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ನಡುವೆ ಇಸ್ರೇಲ್‌ನಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ.

ನೆಗೆವ್‌ನ ಬೆನ್-ಗುರಿಯನ್ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿದ್ದ ಹನಿ ನೀರಾವರಿ ಕುರಿತಾದ ಎರಡು ತಿಂಗಳ ತರಬೇತಿ ಕಾರ್ಯಕ್ರಮದಲ್ಲಿರುವ ಭಾಗವಹಿಸಿರುವ 40 ವರ್ಷ ಪ್ರಾಯದ ಎಸ್ ರಥಿಕಾ ಎಂಬ ಸಹ ಪ್ರಾಧ್ಯಾಪಕಿ ಸಂಘರ್ಷ ಭುಗಿಲೇಳುವ ಮೊದಲೇ, ಸೆಪ್ಟೆಂಬರ್ 23, 2023 ರಂದು ಇಸ್ರೇಲ್‌ಗೆ ತೆರಳಿದ್ದರು.

ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದ (ಟಿಎನ್‌ಎಯು) ಕೃಷಿ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿರುವ ಸಹ ಪ್ರಾಧ್ಯಾಪಕ, ರಥಿಕಾ ಅವರ ಪತಿ ಟಿ ರಮೇಶ್, “ನನ್ನ ಪತ್ನಿ ಗಾಜಾಕ್ಕೆ ಸಮೀಪವಿರುವ ನೆಗೆವ್‌ನಲ್ಲಿ ನಿದ್ದೆಯಿಲ್ಲದೆ ದಿನ ಕಳೆಯುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

ರಮೇಶ್‌ರವರು ಹೇಳುವಂತೆ ರಥಿಕಾ ಭೂಗತ ಬಂಕರ್‌ನಲ್ಲಿ ಅಡಗಿಕೊಂಡಿದ್ದು, ಸಂಘರ್ಷ ಕೊನೆಗೊಂಡ ನಂತರ ರಕ್ಷಣೆಗಾಗಿ ಕಾಯುತ್ತಿದ್ದಾರೆ. “ಸೈರನ್‌ಗಳು ಕೂಗಿದಾಗಲೆಲ್ಲಾ, ಅವರು ನೆಲಮಾಳಿಗೆಗೆ ಧಾವಿಸಿ ಬಂಕರ್‌ನಲ್ಲಿ ಆಶ್ರಯ ಪಡೆಯಬೇಕು, ಅಲ್ಲಿ ಅವರು ಸುಮಾರು 30 ನಿಮಿಷದಿಂದ ಒಂದು ಗಂಟೆಯವರೆಗೆ ಅಥವಾ ಕೆಲವೊಮ್ಮೆ ಸೈರನ್‌ ನಿಲ್ಲುವವರೆಗೆ ಇರಬೇಕಾಗಿದೆ” ಎಂದು ಅವರು ಹೇಳಿದರು.

ಕಳೆದ ನಾಲ್ಕು ದಿನಗಳಿಂದ ವಾಟ್ಸಾಪ್ ಮೂಲಕ ಪತ್ನಿಯನ್ನು ಸಂಪರ್ಕಿಸಿ, ಅವರ ಸುರಕ್ಷತೆಯ ಬಗ್ಗೆ ವಿಚಾರಿಸುತ್ತಿರುವ ರಮೇಶ್ ಸದ್ಯ ರಥಿಕಾ ಸುರಕ್ಷಿತವಾಗಿದ್ದು, ಮನೆಗೆ ಮರಳುವ ಆತಂಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಭಾರತೀಯ ರಾಯಭಾರಿ ಕಚೇರಿಯು ಈಗಾಗಲೇ ರಥಿಕಾರನ್ನು ಸಂಪರ್ಕಿಸಿದೆ.

Related Articles

ಇತ್ತೀಚಿನ ಸುದ್ದಿಗಳು