ಸ್ಪೇಸ್ ಎಕ್ಸ್ ಬಾಹ್ಯಾಕಾಶ ನೌಕೆಯಲ್ಲಿ ಕಂಡುಬಂದ ತಾಂತ್ರಿಕ ದೋಷದ ಕಾರಣ ಬಾಹ್ಯಾಕಾಶದಲ್ಲೇ ಕಳೆದ 9 ತಿಂಗಳು ಕಳೆದ ನಂತರ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನು ನಾಸಾ ಹಾಗೂ ಸ್ಪೇಸ್ ಎಕ್ಸ್ ಜಂಟಿಯಾಗಿ ಭೂಮಿಗೆ ಕರೆತಂದಿದೆ.
ಭಾರತೀಯ ಕಾಲಮಾನದ ಪ್ರಕಾರ ಇಂದು(ಮಾ.19) ಬೆಳಗಿನ ಜಾವ 3.27ರ ಸುಮಾರಿಗೆ ಫ್ಲೋರಿಡಾದ ಸಮುದ್ರದ ಮೇಲೆ ಬಂದು ಇಳಿದಿದ್ದಾರೆ. ಬಳಿಕ ನಾಸಾ ವಿಜ್ಞಾನಿಗಳ ತಂಡ ಸಮುದ್ರದಿಂದ ಸುರಕ್ಷಿತವಾಗಿ ನೌಕೆಯನ್ನು ದಡಕ್ಕೆ ಕರೆತರಲಾಗಿದೆ. ನಿಕ್ ಹೇಗ್, ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ಬುನೊವ್ ನೌಕೆಯಲ್ಲಿದ್ದರು.
ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ 10.35ಕ್ಕೆ 4 ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್‌ಎಕ್ಸ್ ಕ್ಯಾಪ್ಸೂಲ್ ಐಎಸ್‌ಎಸ್‌ನಿಂದ ಹೊರಟಿತ್ತು. ಬಳಿಕ ಗಗನಯಾನಿಗಳ ಹ್ಯೂಸ್ಟನ್‌ನಲ್ಲಿರುವ ನಾಸಾದ ಜಾನ್ಸನ್ ಸ್ಪೇಸ್ ಸೆಂಟರ್‌ನ ಆಸ್ಪತ್ರೆಗೆ ಒಯ್ಯಲಾಗುತ್ತದೆ. ಅಲ್ಲಿ ಸುನೀತಾ, ವಿಲ್ಮೋರ್‌ರನ್ನು ತಪಾಸಣೆಗೊಳಪಡಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ವರ್ಷ ಜೂ.5ರಂದು ಬೋಯಿಂಗ್ ಸ್ಟಾರ್‌ಲೈನರ್ ನೌಕೆಯಲ್ಲಿ ಈ ಇಬ್ಬರು ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ತೆರಳಿದ್ದರು. ನೌಕೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಅವರು ಐಎಸ್‌ಎಸ್‌ನಲ್ಲೇ ಬಾಕಿಯಾಗಬೇಕಾಗಿತ್ತು.
ಎಲ್ಲವೂ ಅಂದುಕೊಂಡಂತೆ ಆಗಿದೆ, ಎಲ್ಲ ಗಗನಯಾತ್ರಿಗಳು ಸುರಕ್ಷಿತವಾಗಿದ್ದು, ಸ್ಪೇಸ್ ಎಕ್ಸ್‌ಗೆ ಧನ್ಯವಾದಗಳನ್ನು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಧನ್ಯವಾದಗಳ ತಿಳಿಸಿದೆ.