Home ದೆಹಲಿ ಕುಂಭಮೇಳದಲ್ಲಿ ನಡೆದ ಕಾಲ್ತುಳಿತದಲ್ಲಿ ಕನಿಷ್ಟ 80 ಜನ ಸಾವಿಗೀಡಾಗಿದ್ದಾರೆ: ಬಿಬಿಸಿ ತನಿಖಾ ವರದಿಯಲ್ಲಿ ಬಹಿರಂಗ

ಕುಂಭಮೇಳದಲ್ಲಿ ನಡೆದ ಕಾಲ್ತುಳಿತದಲ್ಲಿ ಕನಿಷ್ಟ 80 ಜನ ಸಾವಿಗೀಡಾಗಿದ್ದಾರೆ: ಬಿಬಿಸಿ ತನಿಖಾ ವರದಿಯಲ್ಲಿ ಬಹಿರಂಗ

0

‘ಮಹಾಕುಂಭ ಕಾಲ್ತುಳಿತದಲ್ಲಿ ಕನಿಷ್ಠ 82 ಮಂದಿ ಸಾವಿಗೀಡಾಗಿದ್ದಾರೆ’: ಬಿಬಿಸಿ ತನಿಖಾ ವರದಿಯಲ್ಲಿ ಬಹಿರಂಗ

ನವದೆಹಲಿ: ಈ ವರ್ಷದ ಜನವರಿ 29ರಂದು ಅಲಹಾಬಾದ್‌ನಲ್ಲಿ ಮೌನಿ ಅಮವಾಸ್ಯೆಯಂದು ನಡೆದ ಮಹಾಕುಂಭ ಮೇಳದ ಸಮಯದಲ್ಲಿ ನಡೆದ ಕಾಲ್ತುಳಿತದಲ್ಲಿ “ಕನಿಷ್ಠ 82 ಸಾವುಗಳು” ಸಂಭವಿಸಿವೆ ಎಂದು ಬಿಬಿಸಿ ಹಿಂದಿ ನಡೆಸಿದ ತನಿಖಾ ವರದಿ ಬಹಿರಂಗಪಡಿಸಿದೆ.

ಆರಂಭಿಕ ಮಾಹಿತಿ ತಡೆ ಮತ್ತು ಒಂದು ದಿನ ಯಾವುದೇ ಹೊರಡಿಸದಿದ್ದ ಪೊಲೀಸ್ ಆಡಳಿತ, ನಂತರ 30 ಜನರು ಈ ದುರಂತದಲ್ಲಿ ಸಾವಿಗೀಡಾಗಿದ್ದಾರೆ ಎಂದು ಹೇಳಿತ್ತು. ಹಾಗೂ ಉತ್ತರ ಪ್ರದೇಶ ಸರ್ಕಾರ ಇದುವರೆಗೂ ಕುಂಭಮೇಳದಲ್ಲಿ ನಡೆದ ಕಾಲ್ತುಳಿತದಲ್ಲಿ ಸತ್ತವರ ಸಂಖ್ಯೆಯನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೂ ಅದು ಮೃತರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ. ಈ ಬಾರಿಯ ಕುಂಭದಲ್ಲಿ ಸಾವನ್ನಪ್ಪಿದ ಒಟ್ಟು ಜನರ ಸಂಖ್ಯೆಯನ್ನು ಬಹಿರಂಗಪಡಿಸುವಂತೆ ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ಸೂಚಿದೆ.

ತಲಾ 5 ಲಕ್ಷ ರೂಪಾಯಿಯ ನಗದು ಪರಿಹಾರವನ್ನು ಪಡೆದ 26 ಇತರ ಕುಟುಂಬಗಳನ್ನು ಭೇಟಿ ಮಾಡಿರುವುದಾಗಿ ಬಿಬಿಸಿ ಹೇಳಿದೆ. ಈ ತನಿಖಾ ವರದಿಗಾಗಿ ಬಿಬಿಸಿ ಹಿಂದಿ 50 ಜಿಲ್ಲೆಗಳಲ್ಲಿ ಸಂಚರಿಸಿ 100 ಕುಟುಂಬಗಳನ್ನು ಭೇಟಿಯಾಗಿರುವುದಾಗಿ ಹೇಳಿಕೊಂಡಿದೆ. ಮತ್ತು ಈ ಮೂಲಕ ಕನಿಷ್ಠ 82 ಸಾವುಗಳನ್ನು ದೃಢಪಡಿಸಿದೆ.

“45 ದಿನಗಳ ಕುಂಭ ಮೇಳದಲ್ಲಿ 66 ಕೋಟಿ ಜನರು ಭಾಗವಹಿಸಿದ್ದರು ಮತ್ತು ಅದು ಭಾರಿ ಯಶಸ್ಸು ಎಂದು ಕೇಂದ್ರ ಸರ್ಕಾರ ಮತ್ತು ಆದಿತ್ಯನಾಥ್ ಸರ್ಕಾರ ಹೇಳಿಕೊಂಡಿವೆ. ಈ ಕಾರ್ಯಕ್ರಮಕ್ಕಾಗಿ ರೂ. 7000 ಕೋಟಿ ಸಾರ್ವಜನಿಕ ಹಣವನ್ನು ಖರ್ಚು ಮಾಡಲಾಗಿದೆ ಎಂದು ವರದಿಯಾಗಿದೆ.

ಫೆಬ್ರವರಿ 19ರ ಹೊತ್ತಿಗೆ ಮುಖ್ಯಮಂತ್ರಿ ಆದಿತ್ಯನಾಥ್ ಅವರು ರಾಜ್ಯ ವಿಧಾನಸಭೆಯಲ್ಲಿ ಕಾಲ್ತುಳಿತದ ಬಗ್ಗೆ ಹೇಳಿಕೆ ನೀಡಿ, 30 ಸಾವುಗಳು ಸಂಭವಿಸಿವೆ ಮತ್ತು 29 ಶವಗಳನ್ನು ಗುರುತಿಸಲಾಗಿದೆ ಎಂದು ಒಪ್ಪಿಕೊಂಡಿದ್ದರು. ಅವರು ಕೆಲವು ಸ್ಥಳಗಳನ್ನು “ಒತ್ತಡದ ಬಿಂದುಗಳು (ಪ್ರೆಷರ್‌ ಪಾಯಿಂಟ್) ” ಎಂದು ಉಲ್ಲೇಖಿಸಿದ್ದು, ಅಲ್ಲಿ ಕೆಲವು ಸಮಸ್ಯೆಯಾಗಿವೆ ಎಂದಿದ್ದರು. ಬಿಬಿಸಿ ತನ್ನ ತನಿಖೆಯಲ್ಲಿ ಈ “ಒತ್ತಡದ ಬಿಂದುಗಳು” ಎಂದು ಕರೆಯಲ್ಪಡುವ ನಾಲ್ಕರಲ್ಲಿ ಸಾವುಗಳು ಸಂಭವಿಸಿರುವುದಾಗಿ ಹೇಳಿದೆ.

ವರದಿಯು ಸಂತ್ರಸ್ತರನ್ನು ಮೂರು ವರ್ಗಗಳಾಗಿ ವರ್ಗೀಕರಿಸಿದೆ, ಮೊದಲು ತಲಾ 25 ಲಕ್ಷ ರೂಪಾಯಿಗಳ ಅಧಿಕೃತ ನಗದು ಪರಿಹಾರವನ್ನು ಪಡೆದವರು, ಎರಡನೇ ವರ್ಗ ನಗದು ರೂಪದಲ್ಲಿ 5 ಲಕ್ಷ ಪಡೆದವರು. ಏನೂ ಸಿಗದ ಸಂತ್ರಸ್ತರ ಮೂರನೇ ವರ್ಗ.

(ಆಧಾರ: ದಿ ವೈರ್)

You cannot copy content of this page

Exit mobile version