Tuesday, January 20, 2026

ಸತ್ಯ | ನ್ಯಾಯ |ಧರ್ಮ

ದಲಿತರ ಮೇಲಿನ ದೌರ್ಜನ್ಯ ತೀವ್ರ ಹೆಚ್ಚಳ – ಬೆಂಗಳೂರು ಅಗ್ರಸ್ಥಾನ

ಬೆಂಗಳೂರು : ಕರ್ನಾಟಕದಲ್ಲಿ(Karnataka) ಎಸ್‌ಸಿ/ಎಸ್‌ಟಿ(SC/ST) ಮೇಲಿನ ದೌರ್ಜನ್ಯ ಪ್ರಕರಣಗಳು ದಿನೇ ದನೇ ಹೆಚ್ಚುತ್ತಿದೆ. ಅಂಕಿ ಅಂಶಗಳ ಪ್ರಕಾರ 2021ರಲ್ಲಿ 1,751 ಪ್ರಕರಣಗಳು ದಾಖಲಾಗಿದ್ದರೆ, 2025ರಲ್ಲಿ ಈ ಸಂಖ್ಯೆ 2,412ಕ್ಕೆ ಏರಿಕೆಯಾಗಿದ್ದು, ಐದು ವರ್ಷಗಳಲ್ಲಿ ಶೇ 37.74ರಷ್ಟು ಹೆಚ್ಚಳ ಕಂಡುಬಂದಿದೆ

ಎಸ್‌ಸಿ/ ಎಸ್‌ಟಿ ದೌರ್ಜನ್ಯದಲ್ಲಿ ಬೆಂಗಳೂರಿಗೇ ಅಗ್ರಸ್ಥಾನ

ಕಳೆದ ಐದು ವರ್ಷಗಳಲ್ಲಿ ರಾಜ್ಯದಾದ್ಯಂತ ಒಟ್ಟು 10,573 ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣಗಳು ದಾಖಲಾಗಿದೆ. ಇವುಗಳಲ್ಲಿ 1,598 ಪ್ರಕರಣಗಳು ಹುಸಿಯಾಗಿದ್ದು, ಕೇವಲ 47 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ವಿಧಿಸಲಾಗಿದೆ.
1,050 ಪ್ರಕರಣಗಳು ವಜಾಗೊಂಡಿವೆ. 2025ರಲ್ಲಿ ದಾಖಲಾಗಿದ ಪ್ರಕರಣಗಳಲ್ಲಿ ಇಡೀ ದೇಶಕ್ಕೆ ಐಟಿ ಕ್ಯಾಪಿಟಲ್ ಎನಿಸಿರುವ ಬೆಂಗಳೂರು ಅಗ್ರಸ್ಥಾನದಲ್ಲಿದ್ದು , 261 ಪ್ರಕರಣಗಳು ದಾಖಲಾಗಿವೆ. ತುಮಕೂರು ಜಿಲ್ಲೆಯಲ್ಲಿ 139, ಬೆಳಗಾವಿಯಲ್ಲಿ 128 ಹಾಗೂ ರಾಯಚೂರಿನಲ್ಲಿ 121 ಪ್ರಕರಣಗಳು ದಾಖಲಾಗಿವೆ. ಗೃಹ ಸಚಿವ ಜಿ.ಪರಮೇಶ್ವರ ಅವರ ಊರು ತುಮಕೂರು ಜಿಲ್ಲೆ ಎರಡನೇ ಸ್ಥಾನದಲ್ಲಿದೆ.

ಇನ್ನು ರಾಜ್ಯದಲ್ಲಿ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗಾಗಿ 11ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಪ್ರಕರಣಗಳ ಸರಿಯಾದ ವಿಚಾರಣೆ ನಡೆಸಿ, ತ್ವರಿತವಾಗಿ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಶಿಕ್ಷೆಯ ಪ್ರಮಾಣ ಶೇ.10ರಷ್ಟಿದ್ದು, ಇದು ಹೆಚ್ಚಾಗಬೇಕು. ಆರೋಪಿಗಳೊಂದಿಗೆ ಪೊಲೀಸರು ಶಾಮೀಲಾಗಿರುವುದು ಕಂಡು ಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಎಚ್ಚರಿಕೆ ಬೀಡಿದರು.

ಇದೇ ವೇಳೆ ಗೃಹ ಸಚಿವ ಜಿ.ಪರಮೇಶ್ವರ ಅವರು ಪ್ರತಿಕರಿಯಿಸಿ, ಎಸ್‌ಸಿ/ಎಸ್‌ಟಿ ಸಮುದಾಯಗಳ ರಕ್ಷಣೆಗೆ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ DCRE ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣಗಳ ತನಿಖೆಯನ್ನು ಬಲಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಏಪ್ರಿಲ್ 2025ರಲ್ಲಿ 33 ನಾಗರಿಕ ಹಕ್ಕುಗಳ ಜಾರಿಗೆ ನಿರ್ದೇಶನಾಲಯ (DCRE) ಪೊಲೀಸ್ ಠಾಣೆಗಳನ್ನು ಸ್ಥಾಪಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ವಕೀಲೆ ರಾಜಲಕ್ಷ್ಮಿ ಅಂಕಲಗಿ, ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಜಾತಿ ಆಧಾರಿತ ಭೇದಭಾವ ನಿರ್ಮೂಲನೆಗಾಗಿ ಜಾರಿಯಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಂತರ್ಜಾತಿ ಪ್ರೀತಿ ಮತ್ತು ವಿವಾಹ ಪ್ರಕರಣಗಳನ್ನು ಸಹ ಕೆಲವೊಮ್ಮೆ ಈ ಕಾಯ್ದೆಯ ಅಡಿಯಲ್ಲಿ ದಾಖಲಿಸಲಾಗುತ್ತಿದೆ. ಸಂವಿಧಾನವು ಅಂತರ್ಜಾತಿ ವಿವಾಹಗಳನ್ನು ನಿರ್ಬಂಧಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page