Monday, June 17, 2024

ಸತ್ಯ | ನ್ಯಾಯ |ಧರ್ಮ

ಕಾಂತಾರ ಸಿನಿಮಾ ನೋಡಲು ಬಂದಿದ್ದ ಮುಸ್ಲಿಂ ಜೋಡಿಗಳ ವಿರುದ್ಧ ಹಲ್ಲೆ

ದಕ್ಷಿಣ ಕನ್ನಡ: ತುಳುನಾಡಿನ ದೈವಾರಾಧನೆಯ ಆಧಾರಿತವಾದ ಕಾಂತಾರ ಸಿನಿಮಾವನ್ನು ನೋಡುತ್ತಿದ್ದ ಮುಸ್ಲಿಂ ಯುವಕ-ಯುವತಿಗೆ ಯುವಕರ ಗುಂಪೊಂದು ಥಿಯೇಟರ್‌ನ ಆವರಣದಲ್ಲೇ ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ ನಡೆದಿದೆ.

ಕಾಂತಾರ ಸಿನಿಮಾ ದೇಶಾದ್ಯಂತ ಸುದ್ದಿಯಲ್ಲಿದೆ. ಕಾಂತಾರ ಬಿಡುಗಡೆಯಾದ ನಂತರ ತುಳುನಾಡಿನ ದೈವಾರಾಧನೆ, ದೈವನರ್ತನಗಳು ಆಚರಣೆಗಳು ಎಚ್ಚುತ್ತಲೇ ಇವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ ಮುಸ್ಲಿಂ ಜೋಡಿಗಳು ಕಾಂತಾರ ಸಿನಿಮಾ ನೋಡುತ್ತಿದ್ದ ಹಿನ್ನಲೆಯಲ್ಲಿ ಯುವಕರ ಗುಂಪೊಂದು ಅವರ ವಿರುದ್ಧ ನೈತಿಕ ಪೊಲೀಸ್‌ಗಿರಿ ನಡೆಸಿದ್ದಾರೆ.

ಯುವಕ ಮತ್ತು ಯುವತಿ ಸುಳ್ಯದ ಸಂತೋಷ್‌ ಚಿತ್ರಮಂದಿರದಲ್ಲಿ ಕಾಂತಾರ ಸಿನಿಮಾ ನೋಡಲೆಂದು ಬಂದಿದ್ದರು. ಈ ಇಬ್ಬರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಹಿಂದೂಗಳ ದೈವಾರಾಧನೆ ಆಧಾರಿತ ಸಿನಿಮಾ ನೋಡಲು ಬಂದಿದ್ದಾರೆ ಎನ್ನುವ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ ಎನ್ನುವುದು ಕೆಲವರು ಹೇಳುತ್ತಿದ್ದರೂ ಯಾವ ಕಾರಣಕ್ಕಾಗಿ ಹಲ್ಲೆ ನಡೆಸಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.

ಕಾಲೇಜಿಗೆ ಹೋಗದೇ ಸಿನಿಮಾಗೆ ಬಂದಿದ್ದಕ್ಕೆ ಯುವಕರ ಗುಂಪು ಆಕ್ಷೇಪ ವ್ಯಕ್ತ ಪಡಿಸಿ ಅವರಿಗೆ ಎಚ್ಚರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಗುಂಪು ಜೋರು ಧ್ವನಿಯಲ್ಲಿ ಪ್ರಶ್ನೆ ಮಾಡುತ್ತಿರುವುದನ್ನು ತಿಳಿದ ಚಿತ್ರಮಂದಿರದ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು