Monday, July 28, 2025

ಸತ್ಯ | ನ್ಯಾಯ |ಧರ್ಮ

ಸರ್ಕಾರಿ ನಿಗದಿಸಿದ ಶುಲ್ಕಕ್ಕಿಂತ  ಆಟೋರಿಕ್ಷಾಗಳು ಹೆಚ್ಚು ದರ ವಿಧಿಸಬಾರದು : ಕರ್ನಾಟಕ ಸಾರಿಗೆ ಇಲಾಖೆ ಆದೇಶ

ಬೆಂಗಳೂರು : ಆಟೋರಿಕ್ಷಾ ಅಗ್ರಿಗೇಟರ್ಸ್‌ಗಳಿಗೆ ಹೆಚ್ಚುವರಿ ಶುಲ್ಕವನ್ನು ನಿಲ್ಲಿಸಲು ಮತ್ತು ಅವರ ಪ್ಲಾಟ್‌ಫಾರ್ಮ್‌ ಶುಲ್ಕವನ್ನು 5% ಕ್ಕೆ ಮಿತಿಗೊಳಿಸುವಂತೆ ಕರ್ನಾಟಕ ಸಾರಿಗೆ ಇಲಾಖೆಯು ಕಡ್ಡಾಯ ಆದೇಶ ನೀಡಿದ್ದು, ಈ ಆದೇಶದ ಪ್ರಕಾರ, ಕಂಪನಿಯ ಕಮಿಷನ್‌, ಸರಕು ಮತ್ತು ಸೇವಾ ತೆರಿಗೆಯನ್ನು ಹೊರತುಪಡಿಸಿ, ಆಟೋರಿಕ್ಷಾಗಗಳು ಸರ್ಕಾರ ನಿಗದಿ ಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕವನ್ನು ಪ್ರಯಾಣಿಕರಿಗೆ ವಿಧಿಸುವಂತಿಲ್ಲ ಎಂದು ತಿಳಿಸಿದೆ.

ನವೆಂಬರ್‌ 2021 ರಲ್ಲಿ ಪರಿಷ್ಕೃತ ದರಗಳ ಅಡಿಯಲ್ಲಿ, ಪ್ರಯಾಣಿಕರಿಗೆ ಮೊದಲ 2 ಕಿಮೀ ವರೆಗೆ 30 ವರೆಗೆ ಪ್ರತಿ ಹೆಚ್ಚುವರಿ ಕಿಲೋ ಮೀಟರ್‌ಗೆ 16 ರೂ ಶುಲ್ಕ ವಿಧಿಸುವಂತೆ ಘೋಷಿಸಲಾಗಿತ್ತು. ಆದಗ್ಯೂ, ಅಗ್ರಿಗೇಟರ್ಸ್‌ಗಳು ತಾವು ವಿಧಿಸುವ ಬೆಲೆಯನ್ನು ಸುಮಾರು 300% ಹೆಚ್ಚಿಸಿದ್ದರಿಂದ, ಸರ್ಕಾರ ಆಟೋರಿಕ್ಷಾ ಸೇವೆಗಳನ್ನು ನಿಲ್ಲಿಸಲು ನಿರ್ಧರಿಸಿತ್ತು.

ಈ ಕುರಿತು ಅಗ್ರಿಗೇಟರ್ಸ್‌ಗಳು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಕರ್ನಾಟಕ ಹೈಕೋರ್ಟ್‌,10% ಶುಲ್ಕವನ್ನು ಮುಂದುವರೆಸುವಂತೆ ಅವರ ಮನವಿಯನ್ನು ಪುರಸ್ಕರಿಸಿ, ಹಾಗೆಯೇ ಶುಲ್ಕ ನೀತಿಯನ್ನು ಸ್ಥಾಪಿಸಲು ಸರ್ಕಾರಕ್ಕೆ ಆದೇಶ ನೀಡಿತು.  ಹಲವಾರು ಪ್ರಯಾಣಿಕರು ಅವರು ವಿಧಿಸುವ ಹೆಚ್ಚಳ ಶುಲ್ಕದ ಬಗ್ಗೆ ದೂರು ನೀಡಿದ ನಂತರ  ಕರ್ನಾಟಕದಲ್ಲಿ ಓಲಾ, ಉಬರ್‌ ಮತ್ತು ರ್ಯಾಪಿಡೋದಂತಹ ಅಪ್ಲಿಕೇಶನ್‌ಗಳನ್ನು ಆಟೋ ಸೇವೆಗಳನ್ನು ನಿಲ್ಲಿಸುವಂತೆ ಆದೇಶ ನೀಡಿತ್ತು. ಆ ನಂತರ ಕರ್ನಾಟಕ ಸಾರಿಗೆ ಇಲಾಖೆಯವರು ಕ್ಯಾಬ್‌ ಅಗ್ರಿಗೇಟರ್ಸ್‌ಗಳಿಗೆ ನೋಟಿಸ್‌ ನೀಡಿ, ನೋಟಿಸ್‌ನಲ್ಲಿ ಈ ಹೆಚ್ಚುವರಿ ಶುಲ್ಕ ಪಡೆಯುತ್ತಿರುವುದನ್ನು ʼಕಾನೂನು ಬಾಹಿರ ಅಭ್ಯಾಸʼ ಎಂದು ಉಲ್ಲೇಖಿಸಲಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page