ಅವಳ ಕವಿತೆ..


ಮನೆಯಿಂದ ಹೊರಡುವಾಗ
ತೊಟ್ಟ ಡ್ರೆಸ್ ‘ಹೂ’ ಹಗುರ
ಸಂಜೆ ಮರಳುವ ಹೊತ್ತಿಗೆ ಹೆಣಭಾರ..
ಯಾವಾಗ ಡ್ರೆಸ್ ಕಳಚುವೆನೋ
ಎನ್ನುವ ಧಾವಂತ..

ಮೊದಲಿಗೆ ಎದೆಭಾರ ಇಳಿಸಲೆಂದು
ಬ್ರಾ ಬಿಚ್ಚಿ ಕೊಡವಿದರೆ..
ಕಳಚಿದ ಡ್ರಸ್ಸನ್ನೊಮ್ಮೆ ಜಾಡಿಸಿದರೆ..
ಬಿದ್ದ ಅಸಂಖ್ಯಾತ ಕಣ್ಣುಗಳು ಕೆಕ್ಕರಿಸಿ ನೋಡುತ್ತಿವೆ..

ಯಾರ ಕಣ್ಣುಗಳಿವು ?
ಹೀಗೇಕೆ ನನಗೆ ಅಂಟಿಕೊಂಡು
ಮನೆತನಕ ಬಂದವು..
ಬಹುತೇಕ ಅಪರಿಚಿತ..
ಮತ್ತೆ ಕೆಲವು
ಅಕ್ಕ ತಂಗಿ ಮಗಳೇ ಮೇಡಂ ಟೀಚರ್
ಆಂಟೀ ಗೆಳತೀ
ಎನ್ನುವ ಚಿರಪರಿಚಿತ
ಗಂಡಸರ ಕಣ್ಣುಗಳೆ..
ಧೈರ್ಯ ಮಾಡಿ
ಈ ಕಣ್ಣುಗಳಲ್ಲಿ ಕಣ್ಣಿಟ್ಟು ಗಮನಿಸಿದೆ..
ನನ್ನದೆ ಬೆತ್ತಲೆ ಚಿತ್ರ ನೋಡಿ ಬೆಚ್ಚಿಬಿದ್ದೆ…!

ಅರುಣ್ ಜೋಳದಕೂಡ್ಲಿಗಿ

Related Articles

ಇತ್ತೀಚಿನ ಸುದ್ದಿಗಳು