Sunday, November 16, 2025

ಸತ್ಯ | ನ್ಯಾಯ |ಧರ್ಮ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳ ಬಗ್ಗೆ ಜಾಗೃತಿ ಮೂಡಿಸಬೇಕು” – ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಹೇಮಲತಾ

ಹಾಸನ : ನೂತನವಾಗಿ ಆಯ್ಕೆಯಾದಂತ ಪದಾಧಿಕಾರಿಗಳಿಗೆ ಶುಭಾಷಯಗಳು ಮೂರು ದಿನಗಳ ನಿರಂತರ ಚರ್ಚೆ ಮಾಡಿ,ಕಾರ್ಮಿಕ ವರ್ಗದ ಮೇಲೆ, ದುಡಿಯುವ ಜನರ ಮೇಲೆ ನಡೆಯುತ್ತಿರುವಂತಹ ದಬ್ಬಾಳಿಕೆಯನ್ನು ತಡೆಗಟ್ಟಲು ಸ್ಥಿತಿ ಗತಿಯನ್ನು ಕುರಿತು ಒಟ್ಟು ಕಾರ್ಮಿಕ ವರ್ಗದ ಅನುಭವಗಳನ್ನು ತಿಳಿದುಕೊಂಡಿದ್ದು, ನಾವು ವರದಿಯನ್ನು ಅಂಗೀಕಾರ ಮಾಡಿಕೊಂಡಿದ್ದೇವೆ” ಎಂದು ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಕೆ ಹೇಮಲತಾ ಹೇಳಿದರು. ಇಡೀ ರಾಜ್ಯಗಳು ಸೇರಿದಂತೆ ದೇಶಾದ್ಯಂತ ಕಾರ್ಮಿಕ ವರ್ಗದಲ್ಲಿ ಐಕ್ಯತೆಯನ್ನು ಮೂಡಿಸಬೇಕು. ಜನರನ್ನು ಒಗ್ಗೂಡಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ ನೀತಿಗಳ ಬಗ್ಗೆ ಜಾಗೃತಿ ಮೂಡಿಸಬೇಕು” ಎಂದು ಹೇಳಿದರು.

ಈ ಸಿಐಟಿಯು ಸಮ್ಮೇಳನ ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಮ್ಮೇಳನಕ್ಕೆ ಪೂರ್ವಭಾವಿಯಾಗಿದೆ. ಇಂತಹ ಹೋರಾಟಗಳಲ್ಲಿ ರೈತ ಕಾರ್ಮಿಕರ ವಿರೋಧಿ ನೀತಿಗಳನ್ನು ಖಂಡಿಸಲಾಗುವುದು. ಅಂಗನವಾಡಿ, ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಬೀಡಿಕಾರ್ಮಿಕರು ಸೇರಿದಂತೆ ಸ್ವಚ್ಛತೆ ಕಾರ್ಮಿಕರ ವೇತನದ ಹಕ್ಕು, ಸಮಯದ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ” ಎಂದು ಹೇಳಿದರು.
ಎಲ್ಲ ಕಾರ್ಮಿಕರ ಬವಣೆಗಳನ್ನು ಚರ್ಚಿಸಲಾಗಿದೆ. ಇದರ ಪರಿಹಾರಕ್ಕೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಕಂಡುಕೊಳ್ಳಬೇಕು ಎನ್ನುವ ಚಿಂತನೆಯನ್ನು ನಡೆಸಿದ್ದೇವೆ” ಎಂದರು.

ಅಖಿಲ ಭಾರತ ಸಮ್ಮೇಳನಕ್ಕೆ ಹೋಗುವಷ್ಟರಲ್ಲಿ ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಸೇರಿದಂತೆ ಎಲ್ಲ ಕಾರ್ಮಿಕ ಕೂಡ ಹೋರಾಟವನ್ನು ತೀವ್ರಗೊಳಿಸಬೇಕು. ಈ ಮೂಲಕ ಸರ್ಕಾರಗಳನ್ನು ಬಡಿದೆಚ್ಚರಿಸುವ ಕೆಲಸ ಮಾಡಬೇಕು” ಎಂದು ಹೇಳಿದರು.

ವಿದೇಶಗಳಲ್ಲಿರುವ ಅಮೇಜಾನ್‌ ಎನ್ನುವಂತಹ ಒಂದು ದೊಡ್ಡ ಸಂಸ್ಥೆಯ ಕಾರ್ಮಿಕರೇ ಒಗ್ಗಾಟ್ಟಾಗುತ್ತಿದ್ದಾರೆ. ಹಾಗಾಗಿ ನಮ್ಮ ದೇಶದ ಕಾರ್ಮಿಕರೂ ಕೂಡ ಒಗ್ಗಾಟ್ಟಾಗಬೇಕು. ಈ ಮೂಲಕ ತಮ್ಮ ಹಕ್ಕುಗಳನ್ನು ಗಟ್ಟಿಗೊಳಿಸಿಕೊಳ್ಳಬೇಕು” ಎಂದರು.

“ಒಗ್ಗಟ್ಟಾಗುವ ಕಾರ್ಮಿಕರನ್ನು ಚದುರಿಸುವ ಕೆಲಸ ಮಾಡುತ್ತಿದೆ. ಆರ್‌ಎಸ್‌ಎಸ್‌ನ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಬಿಜೆಪಿ ಸರ್ಕಾರ ಧರ್ಮವನ್ನು ಮುಂದೆ ತಂದು ಕಾರ್ಮಿಕರ ನಡುವೆ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆ” ಎಂದು ಹೇಳಿದರು.

“ನ್ಯೂಯಾರ್ಕ್‌ನಲ್ಲಿ ಆಯ್ಕೆಯಾಗಿರುವಂತಹ ಮೇಯರ್‌ ಅವರು ಜನಪರವಾದ ನೀತಿಗಳನ್ನು ಘೋಷಣೆ ಮಾಡಿದ ಕೂಡಲೇ, ಅಧ್ಯಕ್ಷ ಡ್ರೊನಾಲ್ಡ್‌ ಟ್ರಂಪ್‌ ಆ ದೇಶಕ್ಕೆ ಸೇರಬೇಕಾದ ಅನುದಾನವನ್ನು ಕಡಿತಗೊಳಿಸುವುದಾಗಿ ಹೇಳಿದ್ದಾರೆ” ಎಂದರು.

ಇಂತಹ ಹಲವು ಹೋರಾಟಗಳನ್ನು ಮಾಡುವ ಮೂಲಕ ವೇತನ ಹೆಚ್ಚಳ ಸೇರಿದಂತೆ ಹಲವು ಅನುಕೂಲಗಳನ್ನು ಪಡೆದಿದ್ದೇವೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಮಿಕರ ಹಕ್ಕುಗಳನ್ನು ಕಸಿಯುತ್ತಿದೆ. ಉದ್ಯೋಗ ನೀಡುವುದನ್ನು ನಿಲ್ಲಿಸಿದೆ. ನಿರುದ್ಯೋಗಿಗಳನ್ನಾಗಿ ಮಾಡುತ್ತಿದೆ” ಎಂದು ಆರೋಪಿಸಿದರು.

ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕಾರ್ಮಿಕರ ಹಕ್ಕುಗಳನ್ನು ಹೇಗೆ ಕಸಿಯಲಾಗುತ್ತಿದೆ ಎಂಬುದನ್ನು ನಾವೆಲ್ಲರೂ ಕಂಡುಕೊಂಡಿದ್ದೇವೆ. ಇಂತಹ ಕಾರ್ಮಿಕ ವರ್ಗವನ್ನು ಒಡೆದಾಳುವ ನೀತಿಯನ್ನು ಕೇಂದ್ರ ಬಿಜೆಪಿ ಸರ್ಕಾರ ನಡೆಸುತ್ತಿದೆ. ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಹತ್ತಿಕ್ಕುವಂತಹ ಕೆಲವು ನಿರ್ಣಯಗಳನ್ನು ಅಂಗೀಕರಿಸಿದ್ದೇವೆ.

“ನಮ್ಮ ನೆರೆಯ ರಾಜ್ಯವಾದ ಕೇರಳದಲ್ಲಿ ಎಡಪಂಥೀಯ ಸರ್ಕಾರ ಆಡಳಿತದಲ್ಲಿದ್ದು, ಅಲ್ಲಿಯ ನೀತಿಗಳನ್ನು ಜಾರಿಗೊಳಿಸಬೇಕು” ಕೆ ಹೇಮಲತಾ

ಉಮೇಶ್‌ : ಮುಂದಿನ ಮೂರು ವರ್ಷಗಳಲ್ಲಿ ಯಾವ ರೀತಿಯ ಕಾನೂನು ಬರಬೇಕೆಂಬುದನ್ನು ಸಿಐಟಿಯು ತೀರ್ಮಾನ ಮಾಡಿದೆ.
ನಿರಂತರವಾಗಿ ಹೋರಾಟ ಮಾಡುತ್ತದ್ದೇವೆ, ಸ್ಕೀಂ ಕಾರ್ಮಿಕರನ್ನು ಖಾಯಂ ಕಾರ್ಮಿಕರನ್ನಾಗಿ ನೇಮಿಸಿಕೊಳ್ಳಬೇಕು. ಕನಿಷ್ಟ ವೇತನಕ್ಕಾಗಿ ಕೇಳಿದರೆ ಪ್ರಧಾನಿ ಮೋದಿಗಳು ಶ್ರಮ ಏವ ಜಯತೆ ಎಂಬ ಘೋಷಣೆಯನ್ನು ಕೊಟ್ಟಿದ್ದಾರೆ. ಇಡೀ ಶ್ರಮಿಕರನ್ನು ದಫನ್‌ ಮಾಡುವ ಕೆಲಸ ಕೈಗೊಂಡಿದ್ದಾರೆ.

ಬ್ರಿಟಿಷರ ಕಾಲದಲ್ಲಿಯೇ ಡಾ. ಬಿ ಆರ್‌ ಅಂಬೇಡ್ಕರ್‌ ಅವರು ಕಾರ್ಮಿಕ ಸಚಿವರಾಗಿದ್ದಾಗಲೇ ಕಾನೂನುಗಳನ್ನು ಜಾರಿಗೆ ತಂದಿದ್ದರು. ಅಂತಹ ಕಾನೂನುಗಳನ್ನು ಮಂಡಿಸಬೇಕು ಎಂದು ನಾವು ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಕೂಡ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಕಾರ್ಮಿಕರ ಶ್ರಮ ಸಂಹಿತೆಗಳನ್ನು ಜಾರಿಗೊಳಿಸಲಾಗುತ್ತಿಲ್ಲ ಎಂದು ಆರೋಪಿಸಿದರು.

ತಿರುಪತಿಯಲ್ಲಿ ಸಮ್ಮೇಳನ ನಡೆಯುತ್ತಿದೆ. ಈ ಲಾಡು ತಿಮ್ಮಪ್ಪ ಕಾರ್ಮಿಕರಿಗೆ ಒಳ್ಳೆಯ ಬುದ್ಧಿ ಕೊಡಲೆಂದು ಹೇಳಿದರು ಮೋದಿಯವರು.

ಸಿಐಟಿಯು ರಾಜ್ಯಾಧ್ಯಕ್ಷ ಮೀನಾಕ್ಷಿ ಸುಂದರಂ

Related Articles

ಇತ್ತೀಚಿನ ಸುದ್ದಿಗಳು

You cannot copy content of this page