Wednesday, June 19, 2024

ಸತ್ಯ | ನ್ಯಾಯ |ಧರ್ಮ

ಅಯೋಧ್ಯೆ ರಾಮಮಂದಿರದಲ್ಲಿ ಗುಂಡಿನ ದಾಳಿ; ಭದ್ರತಾ ಸಿಬ್ಬಂದಿ ಸಾವು

ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರದಲ್ಲಿ ಕರ್ತವ್ಯ ನಿರತ ಭದ್ರತಾ ಸಿಬ್ಬಂದಿ ಗುಂಡೇಟಿಗೆ ಬಲಿಯಾಗಿದ್ದಾರೆ. ಗುಂಡು ಎಲ್ಲಿಂದ ಬಂದಿದೆ ಎನ್ನುವ ಕುರಿತು ಅನುಮಾನಗಳು ಎದ್ದಿವೆ.

ಆಕಸ್ಮಿಕವಾಗಿ ಭದ್ರತಾ ಸಿಬ್ಬಂದಿ ಬಂದೂಕಿನಿಂದ ಗುಂಡು ಹಾರಿದೆಯೇ? ಅಥವಾ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನಾ? ಎನ್ನುವುದು ಸ್ಪಷ್ಟವಾಗಿಲ್ಲ. ವಿಧಿವಿಜ್ಞಾನ ತಂಡವನ್ನು ಕರೆಸಿ ಸಾಕ್ಷ್ಯ ಸಂಗ್ರಹಿಸಲಾಗಿದೆ.

ಯುಪಿ ವಿಶೇಷ ಭದ್ರತಾ ಪಡೆಯ (ಎಸ್‌ಎಸ್‌ಎಫ್) 25 ವರ್ಷದ ಶತ್ರುಘ್ನ ವಿಶ್ವಕರ್ಮ ಹೊಸ ರಾಮ ಮಂದಿರದಿಂದ 150 ಮೀಟರ್ ದೂರದಲ್ಲಿರುವ ಕೋಟೇಶ್ವರ ದೇವಸ್ಥಾನದ ವಿಐಪಿ ಗೇಟ್‌ನಲ್ಲಿ ಭದ್ರತಾ ಕರ್ತವ್ಯದಲ್ಲಿದ್ದರು. ಬುಧವಾರ ಬೆಳಗ್ಗೆ 5.30ರ ಸುಮಾರಿಗೆ ಗುಂಡೇಟಿನಿಂದ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತನ ಹಣೆಯ ಮೇಲೆ ಗುಂಡೇಟಿನ ಗಾಯವಿತ್ತು ಎನ್ನಲಾಗಿದೆ. ಆ ಹೊತ್ತಿನಲ್ಲಿ ಆ ಗೇಟಿನಲ್ಲಿ ಶತ್ರುಘ್ನ ವಿಶ್ವಕರ್ಮ ಮತ್ತು ಇಬ್ಬರು ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಗುಂಡಿನ ಸದ್ದು ಕೇಳಿ ಇಬ್ಬರೂ ಅಲ್ಲಿಗೆ ಬಂದು ನೋಡಿದಾಗ ಶತ್ರುಘ್ನ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದಾಗ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆಕಸ್ಮಿಕವಾಗಿ ಬಂದೂಕು ಸ್ಫೋಟದಿಂದ ವಿಶ್ವಕರ್ಮ ಸತ್ತರೇ? ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಎಂಬುದು ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದರು. ವಿಧಿವಿಜ್ಞಾನ ತಂಡವನ್ನು ಕರೆತಂದು ಸಾಕ್ಷ್ಯ ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.

Related Articles

ಇತ್ತೀಚಿನ ಸುದ್ದಿಗಳು