Tuesday, June 18, 2024

ಸತ್ಯ | ನ್ಯಾಯ |ಧರ್ಮ

ಮಹಾರಾಷ್ಟ್ರದಲ್ಲಿ ವೈರಲ್ ಆಗ್ತಿದೆ ಬಾಹುಬಲಿ – ಕಟ್ಟಪ್ಪ ಪೋಸ್ಟರ್

ಮಹಾರಾಷ್ಟ್ರದ NCP ಪಕ್ಷದ ಬಣ ವೈಷಮ್ಯವು ಚುನಾವಣಾ ಆಯೋಗದ ಬಾಗಿಲನ್ನು ತಲುಪುತ್ತಿದ್ದಂತೆ, ಪಕ್ಷದ ಹಿರಿಯ ನಾಯಕ ಶರದ್ ಪವಾರ್ ವಿರುದ್ಧ ಅಜಿತ್ ಪವಾರ್ ಅವರು ಬಂಡಾಯವೆದ್ದಿರುವುದನ್ನು ಉಲ್ಲೇಖಿಸಿ ಎನ್‌ಸಿಪಿಯ ವಿದ್ಯಾರ್ಥಿ ಘಟಕವು ದೆಹಲಿ ಕಚೇರಿಯ ಹೊರಗೆ “ಗದ್ದಾರ್” (ದೇಶದ್ರೋಹಿ) ಪೋಸ್ಟರ್ ಅನ್ನು ಹಾಕಿರುವುದು ಈಗ ಮಹಾರಾಷ್ಟ್ರದಾದ್ಯಂತ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇವು ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ಕುರಿತಾಗಿ ಎದ್ದಿರುವ ಟ್ರೋಲ್ ವಿಚಾರವಾಗಿದ್ದು, ಒಂದಕ್ಕಿಂತ ಒಂದು ಹೆಚ್ಚು ಸುದ್ದಿ ಮಾಡುತ್ತಿವೆ. ಅದರಲ್ಲೂ ದೆಹಲಿ ಕಛೇರಿಯ ಹೊರಗೆ ನಿಲ್ಲಿಸಿದ “ಗದ್ದಾರ್” ಪೋಸ್ಟರ್ ಮಾತ್ರ ಈ ದಿನದ ಹೆಚ್ಚು ಚರ್ಚಿತ ಮತ್ತು ಗಮನಾರ್ಹ ಪೋಸ್ಟರ್ ಆಗಿದೆ.

ರಾಷ್ಟ್ರವಾದಿ ವಿದ್ಯಾರ್ಥಿ ಕಾಂಗ್ರೆಸ್ ಬಾಹುಬಲಿ ಸಿನೆಮಾದಲ್ಲಿ ಕಟ್ಟಪ್ಪ ಬಾಹುಬಲಿಗೆ ಹಿಂಬದಿಯಿಂದ ಚುಚ್ಚಿದ ದೃಶ್ಯವನ್ನು ಬಿಂಬಿಸುವ ಪೋಸ್ಟರ್ ಅನ್ನು ಹಾಕಿದ್ದು, ಅಜಿತ್ ಪವಾರ್ “ಕಟ್ಟಪ್ಪ”ನಾಗಿ, “ಅಮರೇಂದ್ರ ಬಾಹುಬಲಿ”ಯಾಗಿ ಶರದ್ ಪವಾರ್ ಅವರ ಬೆನ್ನಿಗೆ ಚೂರಿಯಿಂದ ಇರಿದಂತೆ ತೋರಿಸಿದೆ. ಅದರ ಮೇಲೆ ಗದ್ದಾರ್ ಎಂದು ಬರೆಯಲಾಗಿದೆ.

“ಇಡೀ ದೇಶವು ಒಬ್ಬರ (ಮೋದಿ) ನಡುವೆ ಅಡಗಿರುವ ದೇಶದ್ರೋಹಿಗಳನ್ನು ನೋಡುತ್ತಿದೆ. ಅಂತಹ ಜನರನ್ನು ರಾಷ್ಟ್ರದ ಜನತೆ ಕ್ಷಮಿಸುವುದಿಲ್ಲ” ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ. ಆದರೆ ಯಾವ ಚಿತ್ರದಲ್ಲೂ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ.

ಎನ್‌ಸಿಪಿಯ ಬಣದ ಹೋರಾಟವು ಇಂದು ಚುನಾವಣಾ ಆಯೋಗದ ಬಾಗಿಲನ್ನು ತಲುಪಿದೆ. ಅಜಿತ್ ಪವಾರ್ ಅವರ ಬೆಂಬಲಕ್ಕೆ ನಿಲ್ಲುವ 40 ಕ್ಕೂ ಹೆಚ್ಚು ಶಾಸಕರು ಮತ್ತು ಸಂಸದರು ಅಫಿಡವಿಟ್‌ಗಳನ್ನು ಸಲ್ಲಿಸಿದ್ದಾರೆ. ಶರದ್ ಪವಾರ್ ಪಾಳಯವು ಬಣ ಹೋರಾಟಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದೇಶನವನ್ನು ರವಾನಿಸುವ ಮೊದಲು ತಾವೇ ಮೊದಲು ಒತ್ತಾಯಿಸಿ ಚುನಾವಣಾ ಸಂಸ್ಥೆಗೆ ಕೇವಿಯಟ್ ಸಲ್ಲಿಸಿದೆ. ಅಜಿತ್ ಪವಾರ್ ಬಣವು ಪಕ್ಷದ ಹೆಸರು ಮತ್ತು ಚಿಹ್ನೆಯ ಮೇಲೆ ಹಕ್ಕು ಸಾಧಿಸಿರುವ ಹಿನ್ನೆಲೆಯಲ್ಲಿ, ಶರದ್ ಪವಾರ್ ಗುರುವಾರ ಮಧ್ಯಾಹ್ನ 3 ಗಂಟೆಗೆ ದೆಹಲಿಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿಯ ಸಭೆಯನ್ನು ಕರೆದಿದ್ದಾರೆ.

ಸಭೆಯಲ್ಲಿ ಶರದ್ ಪವಾರ್ ಬಣವು “ರಹಸ್ಯ ಪಕ್ಷಾಂತರ” ಮತ್ತು ಪಕ್ಷದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ 40 ಮಂದಿ ಶಾಸಕರನ್ನು ಅನರ್ಹಗೊಳಿಸುವಂತೆ ಸಭೆಯಲ್ಲಿ ಒತ್ತಾಯಿಸಿದೆ.

Related Articles

ಇತ್ತೀಚಿನ ಸುದ್ದಿಗಳು