Friday, September 19, 2025

ಸತ್ಯ | ನ್ಯಾಯ |ಧರ್ಮ

ಚಡಚಣ SBI ಬ್ಯಾಂಕ್ ದರೋಡೆ ಪ್ರಕರಣ: ಮಹಾರಾಷ್ಟ್ರದಲ್ಲಿ ಚಿನ್ನಾಭರಣ ಮತ್ತು ನಗದು ಬ್ಯಾಗ್ ಪತ್ತೆ

ವಿಜಯಪುರ ಜಿಲ್ಲೆಯ ಚಡಚಣ SBI ಬ್ಯಾಂಕ್ ನಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಮತ್ತು ನಗದು ದರೋಡೆ ಮಾಡಿದ ಕೆಲವೇ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಬ್ಯಾಗ್ ಒಂದರಲ್ಲಿ ನಗದು ಹಾಗೂ ಚಿನ್ನಾಭರಣ ಪತ್ತೆಯಾಗಿದೆ. ಬ್ಯಾಗ್ ನಲ್ಲಿ 6 ಕೆಜಿ 55 ಗ್ರಾಂ ಚಿನ್ನಾಭರಣ ಹಾಗೂ 41.4 ಲಕ್ಷ ನಗದು ಪತ್ತೆಯಾಗಿದೆ.

ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಂಗಳವೇಡ ತಾಲೂಕಿನಹುಲಜಂತಿ ಗ್ರಾಮದ ಪಾಳು ಬಿದ್ದ ಮನೆಯ ಮೇಲ್ಚಾವಣಿಯಲ್ಲಿ ಬ್ಯಾಗ್ ಪತ್ತೆಯಾಗಿದೆ.

ಮನೆಯೊಂದರ ಮೇಲೆ ಬ್ಯಾಗ್ ಬಚ್ಚಿಟ್ಟು ದರೋಡೆಕೋರ ಪರಾರಿಯಾಗಿದ್ದಾನೆ. ಗ್ರಾಮದ ಜನರು ಮಂಗಳವೇಡ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಂಗಳವೇಡ ಪೊಲೀಸರು ವಿಜಯಪುರ ಎಸ್ ಪಿ ಲಕ್ಷ್ಮಣ್ ಗೆ ಮಾಹಿತಿ ನೀಡಿದ್ದಾರೆ.

ಒಟ್ಟು 1.4 ಕೋಟಿ ಮೌಲ್ಯದ ಚಿನ್ನ, 20 ಕೆಜಿ ಚಿನ್ನಾಭರಣ ದರೋಡೆಯಾಗಿತ್ತು. ಪತ್ತೆಯಾದ ಬ್ಯಾಗ್ ನಲ್ಲಿ 1.30 ಲಕ್ಷ ನಗದು ಸಿಕ್ಕಿದೆ. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆ ಮಂಗಳವೇಡ ತಾಲೂಕಿನ ಹುಲಜಂತಿ ಗ್ರಾಮದಲ್ಲಿ ಚಿನ್ನಾಭರಣದ ಬ್ಯಾಗ್ ಹಾಗೂ ದರೋಡೆಕೋರರ ಕೃತ್ಯಕ್ಕೆ ಬಳಸಿದ್ದ ಇಕೋ ವಾಹನ ಪತ್ತೆಯಾಗಿದೆ.

ಗ್ರಾಮಕ್ಕೆ ನುಗ್ಗಿದ್ದ ಇಕೋ ವಾಹನಕ್ಕೆ ಬೈಕ್ ಡಿಕ್ಕಿಯಾಗಿತ್ತು. ಇದನ್ನು ಪ್ರಶ್ನಿಸಿದ್ದಕ್ಕೆ ಪಿಸ್ತೂಲ್ ತೋರಿಸಿ ದರೋಡೆಕೋರರು ಪರಾರಿಯಾಗಿದ್ದರು. ಇದೇ ವೇಳೆ ಚಿನ್ನಾಭರಣ, ನಗದು ಇದ್ದ ಬ್ಯಾಗ್ ಎಸೆದು ಹೋಗಿದ್ದಾನೆ. ಮನೆ ಮೇಲ್ಛಾವಣಿಯಲ್ಲಿ ಬ್ಯಾಗ್ ಇಟ್ಟು ದರೋಡೆಕೋರನು ಹೋಗಿದ್ದನು.

ಪ್ರಕರಣ ತನಿಖೆ ನಡೆಯುತ್ತಿದೆ. ಶೀಘ್ರವೇ ದರೋಡೆಕೋರರನ್ನು ಬಂಧಿಸುತ್ತೇವೆ ಎಂದು ವಿಜಯಪುರ ಎಸ್ ಪಿ ಲಕ್ಷ್ಮಣ್ ನಿಂಬರಗಿ ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page