Home ಅಪರಾಧ BIG BREAKING : ಭವಾನಿ ರೇವಣ್ಣ ಜಾಮೀನು ಅರ್ಜಿ ವಜಾ, ಯಾವುದೇ ಸಂದರ್ಭದಲ್ಲೂ ಬಂಧನ ಸಾಧ್ಯತೆ

BIG BREAKING : ಭವಾನಿ ರೇವಣ್ಣ ಜಾಮೀನು ಅರ್ಜಿ ವಜಾ, ಯಾವುದೇ ಸಂದರ್ಭದಲ್ಲೂ ಬಂಧನ ಸಾಧ್ಯತೆ

0

ಸಂತ್ರಸ್ತ ಮಹಿಳೆ ಕಿಡ್ನಾಪ್‌ ಪ್ರಕರಣದಲ್ಲಿ ಮಾಜಿ ಸಚಿವ ಎಚ್‌ಡಿ ರೇವಣ್ಣ ಪತ್ನಿ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್‌ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್‌ ವಜಾ ಮಾಡಿದೆ. ಆ ಮೂಲಕ ಪ್ರಜ್ವಲ್ ರೇವಣ್ಣನ ತಾಯಿ ಭವಾನಿ ಕೂಡ ಅರೆಸ್ಟ್ ಆಗೋದು ಪಕ್ಕಾ ಆಗಿದೆ.

ಜಾಮೀನಿನ ನಿರೀಕ್ಷೆಯಲ್ಲಿದ್ದ ಭವಾನಿ ರೇವಣ್ಣಗೆ ಕೋರ್ಟ್‌ ಶಾಕ್‌ ನೀಡಿದ್ದು, ನಿರೀಕ್ಷಣಾ ಜಾಮೀನಿನ ಅರ್ಜಿಯನ್ನು ಕೋರ್ಟ್‌ ತಿರಸ್ಕರಿಸಿದೆ. ಇದರೊಂದಿಗೆ ಅವರು ಈ ಕೇಸ್‌ನಲ್ಲಿ ಎಸ್‌ಐಟಿಯಿಂದ ಬಂಧನಕ್ಕೆ ಒಳಗಾಗಲಿದ್ದಾರೆ.

ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಎಸ್‌ಐಟಿ ಗೆ ಭವಾನಿ ರೇವಣ್ಣನ ತನಿಖೆ ಅಗತ್ಯವಿದೆ. ಹೀಗಾಗಿ ಅವರನ್ನು ಕಸ್ಟಡಿಯಲ್ ಇಂಟರಾಗೇಶನ್ ಗೆ ಕೋರ್ಟ್ ಅವಕಾಶ ಕಲ್ಪಿಸಬೇಕು ಎಂದು ಎಸ್ಐಟಿ ಪರ ವಕೀಲ ಜಗದೀಶ್‌ ವಾದ ಮಾಡಿದ್ದರು.

ಎಸ್ಐಟಿ ಪರ ಎಸ್ಪಿಪಿ ವಾದ ಮಂಡನೆ ಮಾಡಿದ್ದ ವಕೀಲರು, ಭವಾನಿ ಕಿಡ್ನಾಪ್ ನಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಾಕ್ಷಿಗಳಿವೆ. ದೂರುದಾರ ಹಾಗೂ a2 ಆರೋಪಿ ಸತೀಶ್ ಬಾಬಣ್ಣ ಮಾತಾಡಿರುವ ಕಾಲ್ ರೆಕಾರ್ಡ್ ಇದೆ.  ಈ ಕಾಲ್ ರೆಕಾರ್ಡ್ ನಲ್ಲಿ ಭವಾನಿ ಯಾವ ರೀತಿ ಭಾಗಿಯಾಗಿದ್ದಾರೆ ಎಂಬದಕ್ಕೆ ಸಾಕ್ಷಿ ಇದೆ. ಮೊಬೈಲ್ ನ ಅಟೋ ರೆಕಾರ್ಡರ್ ನಿಂದ ಕಾಲ್ ರೆಕಾರ್ಡ್ ಆಗಿದೆ. ಪೊಲೀಸ್ ಕೇಸಿದೆ, ಸಿಕ್ಕಿ ಹಾಕಿಕೊಂಡರೆ 2 ವರ್ಷ ಆದರೂ ಹೊರಬರಲು ಸಾಧ್ಯವಿಲ್ಲ. ದೂರುದಾರ ಚಿಕ್ಕಮ್ಮ ನಿಮ್ಮ ಜೊತೆ ಇದ್ದಾರೆ ಎಂದು ಕೇಳಿದ್ದಕ್ಕೆ ಅವರು ವಾಪಸ್ ಹೋಗಿದ್ದಾರೆ. ಆರೋಪಿಯೊಬ್ಬರ ಮೊಬೈಲ್‌ನಿಂದ ಸಂಪೂರ್ಣ ಕಾಲ್ ರೆಕಾರ್ಡ್ ರಿಕವರ್ ಮಾಡಲಾಗಿದೆ” ಎಂದು ಕೋರ್ಟ್‌ ಗೆ ತಿಳಿಸಿದ್ದಾರೆ.

“2 ಕಾಲ್ ರೆಕಾರ್ಡ್ ಗಳಲ್ಲಿ ಭವಾನಿ ಅವರ ಆ್ಯಕ್ಟೀವ್ ಪಾರ್ಟಿಸಿಪೇಷನ್ ಇರೋದು ಪತ್ತೆಯಾಗಿದೆ. ಸತೀಶ್ ಬಾಬಣ್ಣ ಮೊಬೈಲ್ ನಿಂದ ಕಾಲ್ ರೆಕಾರ್ಡ್ ಪಡೆಯಲಾಗಿದೆ. ಆ ಸಂಭಾಷಣೆಯಲ್ಲಿ ಮೇಡಮ್‌ ಎಂದು ಸಂಭೋದನೆ ಆಗಿದೆ. ಸಂತ್ರಸ್ತೆಗೆ 150 – 200 ಸೀರೆ ಕೊಡಿಸಿ ಅಂತಾರೆ. ಏನ್ ಮಾಡೋದು ಎಲ್ಲಾ ಬಾಯಿ ಪಾಠ ಆಗಿದೆ. ಅದೇನೂ ರಂಪಾಟ ಆಗಿದೆ ಎಂಬ ಬಗ್ಗೆ ಮಾತುಕತೆ” ಹೀಗೆ ಅನೇಕ ರೀತಿಯಲ್ಲಿ ಸಂಭಾಷಣೆ ನಡೆದಿದೆ ಎಂದು ಕೋರ್ಟ್‌ ಗೆ ಹೇಳಿದ್ದಾರೆ.

“ಸಂತ್ರಸ್ಥೆಗೆ ಭವಾನಿ ಜೈಲಿಗೆ ಹೋಗುವ ಬೆದರಿಕೆ ಹಾಕಿದ್ದಾರೆ. ವಿಡಿಯೋ ಮಾಡಲು ಒತ್ತಡ ಹಾಕಿದ್ದಾರೆ ಅನೇಕರ ಜೊತೆ ಮಾತನಾಡಿರುವ ಸಂಭಾಷಣೆಗಳಿವೆ. ಸಂತ್ರಸ್ತೆ ಮಗಳ ಹೇಳಿಕೆ, ಡಾಕ್ಟರ್ ಹೇಳಿಕೆ ಎಲ್ಲಾ ಸಾಕ್ಷಿಗಳು ಇವೆ.‌ ಭವಾನಿ ಅವರ ಪಿಎ, ಡ್ರೈವರ್ ಹಾಗೂ ರಾಜಗೋಪಾಲ್ ನಡುವೆ ಸಂಭಾಷಣೆ ನಡೆದಿವೆ. ರಾಜಕೀಯ ಪ್ರಭಾವ ಇರುವ ಮಹಿಳೆಯನ್ನ ಕಸ್ಟೋಡಿಯಲ್ ಇಂಟ್ರಾಗೇಷನ್ ಅಗತ್ಯ ಇದೆ” ಎಂದು ವಾದ ಮಾಡಿದ್ದಾರೆ.

ಇನ್ನೊಂದೆಡೆ ಭವಾನಿ ರೇವಣ್ಣಗಾಗಿ ಬೆಂಗಳೂರು , ಹಾಸನ, ಹೊಳೆನರಸೀಪುರದಲ್ಲಿ ಹುಡುಕಾಟ ಆರಂಭವಾಗಿದೆ. ಸಂಬಂಧಿಕರು ನೆಂಟರ ಮನೆಗಳಲ್ಲೂ ಶೋಧ ಕಾರ್ಯ ನಡೆದಿದೆ ಬೆಂಗಳೂರಿನಲ್ಲಿ ಸಂಬಂಧಿಕರ ಮನೆ ಬಳಿ ಭವಾನಿ ರೇವಣ್ಣಗಾಗಿ ಎಸ್‌ಐಟಿ ಕಾದು ಕುಳಿತಿದೆ. ಜಾಮೀನು ಸಿಗದೇ ಇದ್ದಲ್ಲಿ ಕೂಡಲೇ ಭವಾನಿ ರೇವಣ್ಣ ಅರೆಸ್ಟ್ ಮಾಡಲು ಸಿದ್ಧತೆ ನಡೆಸಲಾಗಿದೆ. ಆದರೆ ಈವರೆಗೂ ಎಸ್‌ಐಟಿ ಗೆ ಭವಾನಿ ರೇವಣ್ಣ ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ.

Exit mobile version