Saturday, March 7, 2026

ಸತ್ಯ | ನ್ಯಾಯ |ಧರ್ಮ

ನೇಪಾಳ ರಾಜಕೀಯದಲ್ಲಿ ಹೊಸ ಯುಗ: 35 ವರ್ಷದ ಇಂಜಿನಿಯರ್ ಬಾಲೇಂದ್ರ ಶಾ ನೇಪಾಳದ ನೂತನ ಪ್ರಧಾನಿ

ನೇಪಾಳದ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿದ್ದು, ಗಾಯಕನಿಂದ ರಾಜಕಾರಣಿಯಾಗಿ ಬದಲಾದ ಬಾಲೇಂದ್ರ ಶಾ ನೇತೃತ್ವದ ರಾಷ್ಟ್ರೀಯ ಸ್ವತಂತ್ರ ಪಾರ್ಟಿ (RSP) ಅಧಿಕಾರದತ್ತ ಮುನ್ನಡೆದಿದೆ.

ನೇಪಾಳದಲ್ಲಿ ನಡೆದ ‘ಜೆನ್ ಜಿ’ (Gen Z) ಪ್ರತಿಭಟನೆಗಳ ನಂತರ ಕೆ.ಪಿ. ಶರ್ಮಾ ಓಲಿ ಸರ್ಕಾರ ಪತನಗೊಂಡು ನಡೆದ ಈ ಚುನಾವಣೆಯಲ್ಲಿ ಆರ್‌ಎಸ್‌ಪಿ ಅಚ್ಚರಿಯ ಮುನ್ನಡೆ ಸಾಧಿಸಿದೆ. ಒಟ್ಟು 165 ಕ್ಷೇತ್ರಗಳ ಪೈಕಿ 144 ಸ್ಥಾನಗಳ ಫಲಿತಾಂಶ ಹಾಗೂ ಟ್ರೆಂಡ್‌ಗಳು ಲಭ್ಯವಿದ್ದು, ಆರ್‌ಎಸ್‌ಪ ಈಗಾಗಲೇ ಮೂರು ಸ್ಥಾನಗಳನ್ನು ಗೆದ್ದಿದೆ ಮತ್ತು 104 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪ್ರಸ್ತುತ ಕಠ್ಮಂಡು ಮೇಯರ್ ಆಗಿರುವ ಬಾಲೇಂದ್ರ ಶಾ ಅವರು ಝಾಪಾ-5 ಕ್ಷೇತ್ರದಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ, ಸಿಪಿಎನ್-ಯುಎಂಎಲ್ ಅಧ್ಯಕ್ಷ ಹಾಗೂ ನಾಲ್ಕು ಬಾರಿ ಪ್ರಧಾನಿಯಾಗಿದ್ದ ಕೆ.ಪಿ. ಶರ್ಮಾ ಓಲಿ ವಿರುದ್ಧ ಭಾರಿ ಮುನ್ನಡೆ ಸಾಧಿಸಿದ್ದಾರೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ 35 ವರ್ಷದ ಬಾಲೇಂದ್ರ ಶಾ ನೇಪಾಳದ ಪ್ರಧಾನಿ ಪೀಠವನ್ನು ಅಲಂಕರಿಸುವುದು ಬಹುತೇಕ ಖಚಿತವಾಗಿದೆ.

ರಾಜಕೀಯ ಅಸ್ಥಿರತೆಗೆ ಹೆಸರಾಗಿರುವ ನೇಪಾಳದಲ್ಲಿ ಕಳೆದ 18 ವರ್ಷಗಳಲ್ಲಿ 14 ಸರ್ಕಾರಗಳು ಬದಲಾಗಿವೆ. ನೇಪಾಳದ ಈ ಚುನಾವಣಾ ಫಲಿತಾಂಶಗಳನ್ನು ಭಾರತವು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ನೆರೆಯ ದೇಶದಲ್ಲಿ ಸುಸ್ಥಿರ ಸರ್ಕಾರ ರಚನೆಯಾಗಲಿ ಎಂದು ಆಶಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page