Friday, June 14, 2024

ಸತ್ಯ | ನ್ಯಾಯ |ಧರ್ಮ

ತಾಜ್‌ ಮಹಲ್‌ನ 500 ಮೀ ವ್ಯಾಪ್ತಿಯೊಳಗೆ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ: ಸುಪ್ರೀಂ ಕೋರ್ಟ್‌ ಆದೇಶ

ನವದೆಹಲಿ: ತಾಜ್‌ ಮಹಲ್‌ನ ಸುತ್ತಮುತ್ತಲಿನ ಪ್ರದೇಶದ 500 ಮೀಟರ್‌ ವ್ಯಾಪ್ತಿಯೊಳಗೆ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಆಗ್ರಾ ಅಭಿವೃದ್ದಿ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ಎಎಸ್‌ ಓಕಾ ಅವರ ಪೀಠವು ಆಗ್ರಾ ಅಭಿವೃದ್ದಿ ಪ್ರಾಧಿಕಾರಕ್ಕೆ 17 ನೇ ಶತಮಾನದ ಬಿಳಿ ಅಮೃತಶಿಲೆಯ ಸಮಾಧಿಗೆ (ತಾಜ್‌ ಮಹಲ್) ಸಂಬಂಧಿಸಿದಂತೆ ತನ್ನ ಆದೇಶವನ್ನು ಅನುಸರಿಸುವುದರ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ತಿಳಿಸಿದೆ.

ಐತಿಹಾಸಿಕ ಸಮಾಧಿಯ (ತಾಜ್‌ ಮಹಲ್‌) ಸುತ್ತ ಮುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

ತನ್ನ ಆದೇಶದಲ್ಲಿ, ಸರ್ವೋಚ್ಚ ನ್ಯಾಯಾಲಯವು, “ನಾವು ಓದುವ ಪ್ರಾರ್ಥನೆಯನ್ನು ಅನುಮತಿಸುತ್ತೇವೆ- ತಾಜ್ ಮಹಲ್ ಸ್ಮಾರಕದ ಗಡಿಯಿಂದ 500 ಮೀಟರ್‌ಗಳ ಒಳಗೆ ಎಲ್ಲಾ ವ್ಯಾಪಾರ ಚಟುವಟಿಕೆಗಳನ್ನು ತೆಗೆದುಹಾಕಲು ಆಗ್ರಾ ಅಭಿವೃದ್ಧಿ ಪ್ರಾಧಿಕಾರಕ್ಕೆ ನಿರ್ದೇಶಿಸಿದ್ದು, ಅದು ಭಾರತದ ಸಂವಿಧಾನದ  14ನೇ ವಿಧಿಗೆ ಅನುಗುಣವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಸ್ಮಾರಕದ 500 ಮೀ-ವ್ಯಾಪ್ತಿಯಲ್ಲಿ ವಾಹನ ಸಂಚಾರದ ಮೇಲೆ ಕಟ್ಟುನಿಟ್ಟಾದ ನಿಯಮಗಳ ಹೊರತಾಗಿ ನಿರ್ಮಾಣ-ರಹಿತ ವಲಯವಾಗಿದ್ದು, ಸ್ಮಾರಕದ ಬಳಿ ಇರುವ ಮರಗಳು ಮತ್ತು ಪುರಸಭೆಯ ಇಡೀ ಪ್ರದೇಶದಲ್ಲಿ ಘನತ್ಯಾಜ್ಯ ಮತ್ತು ಕೃಷಿ ತ್ಯಾಜ್ಯ ಸುಡುವುದನ್ನು ಸಹ ನಿಷೇಧಿಸಲಾಗಿದೆ ಎಂದು ಸುಪ್ರೀಂ ಕೊರ್ಟ್‌ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು