Home ವಿಶೇಷ ಬೆಂಗಳೂರು ಏರ್ ಶೋಗೆ ಇಂದು ಅದ್ದೂರಿ ಚಾಲನೆ; ಏಳು ಲಕ್ಷಕ್ಕೂ ಹೆಚ್ಚಿನ ಜನರ ಭೇಟಿ ನಿರೀಕ್ಷೆ

ಬೆಂಗಳೂರು ಏರ್ ಶೋಗೆ ಇಂದು ಅದ್ದೂರಿ ಚಾಲನೆ; ಏಳು ಲಕ್ಷಕ್ಕೂ ಹೆಚ್ಚಿನ ಜನರ ಭೇಟಿ ನಿರೀಕ್ಷೆ

0

ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಇಂದಿನಿಂದ 4 ದಿನಗಳ ಕಾಲ ನಡೆಯಲಿರುವ ‘ಬೆಂಗಳೂರು ಏರ್ ಶೋ’ ಗೆ ಇಂದು ಅದ್ದೂರಿ ಚಾಲನೆ ಸಿಗಲಿದೆ. 4 ದಿನಗಳ ಕಾಲ ನಡೆಯಲಿರುವ ವೈಮಾನಿಕ ಪ್ರದರ್ಶನಕ್ಕೆ ”ರನ್​ವೇ ಟು ಬಿಲಿಯನ್ ಅಪಾರ್ಚುನಿಟಿಸ್” ಎಂಬ ಟ್ಯಾಗ್ ಲೈನ್ ನೀಡಲಾಗಿದೆ.

ಇಂದು ಬೆಳಗ್ಗೆ 9.30ಕ್ಕೆ ಏರ್​ಶೋಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ. ಏರ್​​ಶೋದಲ್ಲಿ ರಷ್ಯಾ ಮತ್ತು ಅಮೆರಿಕನ್​ ಫೈಟ್​ ಏರ್​ಕ್ರಾಫ್ಟ್​ಗಳು ಭಾಗಿ ಆಗಲಿವೆ. 100 ದೇಶಗಳ 900ಕ್ಕೂ ಹೆಚ್ಚು ರಕ್ಷಣಾ ಸಾಮಗ್ರಿ ಉತ್ಪಾದಕರು ಭಾಗವಹಿಸಲಿದ್ದಾರೆ. ವಿವಿಧ ಕಂಪನಿಗಳ 100 ಸಿಇಒಗಳು, 50 ವಿದೇಶಿ ಒಎಂಎಸ್ ಉಪಸ್ಥಿತರಿರಲಿದ್ದಾರೆ.

ಎಐ, ಸೈಬರ್ ಸೆಕ್ಯುರಿಟಿ, ಡ್ರೋನ್ ಮತ್ತು ಗ್ಲೋಬಲ್​ ಏರೋಸ್ಪೇಸ್ ಪ್ರದರ್ಶನ ಕೂಡ ಈ ಬಾರಿ ಇರಲಿದೆ ಎಂದು ಆಯೋಜನೆಯಲ್ಲಿ ತಿಳಿಸಲಾಗಿದೆ. ಆತ್ಮನಿರ್ಭರ ಭಾರತದ ಉತ್ಪನ್ನಗಳು ಏರ್ ಶೋನಲ್ಲಿ ಇರಲಿದ್ದು 10 ಸೆಮಿನಾರ್​​ಗಳನ್ನು ಆಯೋಜಿಸಲಾಗಿದೆ. ರಕ್ಷಣಾ ವಲಯದಲ್ಲಿ ಹೂಡಿಕೆ, ಸಂಶೋಧನೆ, ಜಾಯಿಂಟ್ ವೆಂಚರ್, ರಕ್ಷಣಾ ವಲಯ ಬಗ್ಗೆ ಚರ್ಚೆ ಆಗಲಿದೆ.

ಫೆಬ್ರವರಿ 14ರವರೆಗೆ ಲೋಹದ ಹಕ್ಕಿಗಳು ಚಿತ್ತಾರ ಮೂಡಿಸಲಿವೆ. ಈ ಬಾರಿ 7 ಲಕ್ಷಕ್ಕೂ ಹೆಚ್ಚು ಜನ ಏರ್​ಶೋದಲ್ಲಿ ಭಾಗಿ ಆಗೋ ನಿರೀಕ್ಷೆ ಇದೆ. ಉಕ್ಕಿನ ಹಕ್ಕಿಗಳ ಸರ್ಕಸ್ ಕಣ್ತುಂಬಿಕೊಳ್ಳಲು ಜನ ತುದಿಗಾಲಲ್ಲಿ ನಿಂತಿದ್ದಾರೆ.

You cannot copy content of this page

Exit mobile version