Thursday, July 31, 2025

ಸತ್ಯ | ನ್ಯಾಯ |ಧರ್ಮ

ಇವಿ ಬೈಕ್ ಶೋರೂಂ ಬೆಂಕಿ ಅವಘಡ ಪ್ರಕರಣ: ಮಾಲಿಕ ಮತ್ತು ಮ್ಯಾನೇಜರ್ ಬಂಧನ

ಬೆಂಗಳೂರು: ಬೆಂಗಳೂರಿನ ರಾಜ್‌ಕುಮಾರ್‌ ರಸ್ತೆಯಲ್ಲಿರುವ ಎಲೆಕ್ಟ್ರಿಕ್‌ ಬೈಕ್‌ ಶೋರೂಂನಲ್ಲಿ ಬೆಂಕಿ ಅವಘಡ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋರೂಂ ಮಾಲೀಕ ಪುನೀತ್‌ ಹಾಗೂ ಮ್ಯಾನೇಜರ್‌ ಯುವರಾಜ್‌ ಅವರನ್ನು ರಾಜಾಜಿನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಮಂಗಳವಾರ ಸಂಜೆ 5.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಸಂಖ್ಯೆಯ ವಾಹನಗಳು ಹಾಗೂ ಶೋರೂಂ ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಕೂಟರ್‌ಗಳಲ್ಲಿದ್ದ ಬ್ಯಾಟರಿಗಳು ಸ್ಫೋಟಗೊಂಡಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ. ಅದೇ ಸಂದರ್ಭದಲ್ಲಿ ಶೋ ರೋಂ ಒಳಗಿದ್ದ ಉದ್ಯೋಗಿ ಪ್ರಿಯಾ ಬೆಂಕಿಯನ್ನು ನೋಡಿ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು.

ಕೊನೆಗೆ ಬೆಂಕಿ ವ್ಯಾಪಿಸಿ ಅವರು ಜೀವಂತ ಸುಟ್ಟುಹೋದರು. ಇನ್ನು ಕೆಲವರು
ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡರು. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪ್ರಿಯಾ ತನ್ನ 27 ನೇ ಹುಟ್ಟುಹಬ್ಬವನ್ನು ಬುಧವಾರ ಆಚರಿಸಬೇಕಾಗಿತ್ತು, ಆದರೆ ಅದಕ್ಕೂ ಒಂದು ದಿನ ಮೊದಲು ಈ ದುರಂತ ಸಂಭವಿಸಿದೆ.

ಶೋರೂಂ ಸಿಬ್ಬಂದಿ ಮಗಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ಆಕೆಯ ತಂದೆ ದೂರಿದ್ದರು. ಪೊಲೀಸರು ಹಾಗೂ ಫೋರೆನ್ಸಿಕ್ ಸಿಬ್ಬಂದಿ ಶೋ ರೂಂ ಪರಿಶೀಲನೆ ನಡೆಸಿದ್ದಾರೆ. ಪ್ರತ್ಯಕ್ಷದರ್ಶಿಗಳಿಂದ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page