Wednesday, September 25, 2024

ಸತ್ಯ | ನ್ಯಾಯ |ಧರ್ಮ

ಅಮಿತ್ ಶಾ ಹೇಳಿಕೆಗೆ ಬಾಂಗ್ಲಾದೇಶ ಪ್ರತಿಭಟನೆ

ಹೊಸದೆಹಲಿ: ಜಾರ್ಖಂಡ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಇತ್ತೀಚಿನ ಹೇಳಿಕೆಗಳ ವಿರುದ್ಧ ಬಾಂಗ್ಲಾದೇಶ ತೀವ್ರವಾಗಿ ಪ್ರತಿಭಟಿಸಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ಬಾಂಗ್ಲಾ ನುಸುಳುಕೋರರನ್ನು ತಲೆಕೆಳಗಾಗಿ ನೇತುಹಾಕಿ ಪರಿಸ್ಥಿತಿಯನ್ನು ಸರಿಪಡಿಸುತ್ತೇವೆ ಎಂದು ಅಮಿತ್ ಶಾ ಹೇಳಿದ್ದರು.

ಬಾಂಗ್ಲಾದೇಶದ ಪ್ರಜೆಗಳ ಬಗ್ಗೆ ಅಮಿತ್ ಶಾ ಅವರ ಹೇಳಿಕೆಗಳು ಅತ್ಯಂತ ಆಕ್ಷೇಪಾರ್ಹ ಎಂದು ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯ ಪ್ರತಿಭಟಿಸಿದೆ. ಈ ಸಂಬಂಧ ಢಾಕಾದಲ್ಲಿರುವ ಭಾರತೀಯ ಹೈಕಮಿಷನರ್‌ಗೆ ಪತ್ರ ಹಸ್ತಾಂತರಿಸಲಾಗಿದೆ.

ಈ ಹೇಳಿಕೆಗಳು ತನಗೆ ತೀವ್ರ ನೋವುಂಟು ಮಾಡಿದೆ ಎಂದು ಪತ್ರದಲ್ಲಿ ಬಾಂಗ್ಲಾ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ಸ್ವೀಕಾರಾರ್ಹವಲ್ಲದ ಮತ್ತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡದಂತೆ ಸಂಯಮವನ್ನು ವಹಿಸಲು ರಾಜಕೀಯ ನಾಯಕರಿಗೆ ಸೂಚಿಸಬೇಕು ಎಂದು ಭಾರತ ಸರ್ಕಾರಕ್ಕೆ ಬಾಂಗ್ಲಾ ಸೂಚಿಸಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರು ಈ ರೀತಿ ಹೇಳಿಕೆ ನೀಡಿದರೆ ಉಭಯ ದೇಶಗಳ ನಡುವಿನ ಪರಸ್ಪರ ಗೌರವ, ತಿಳುವಳಿಕೆ ಹಾಳಾಗುತ್ತದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page