Wednesday, September 10, 2025

ಸತ್ಯ | ನ್ಯಾಯ |ಧರ್ಮ

ಬಿಬಿಎಂಪಿ ಚುನಾವಣೆ : ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ, ಕಾಂಗ್ರೆಸ್ ಸರ್ಕಾರ ಶಾಕ್

ಈ ಹಿಂದೆ ರಾಜ್ಯ ಹೈಕೋರ್ಟ್ ನಿರ್ದೇಶನದ ಮೇರೆಗೆ ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಆದ ಡಿಲಿಮಿಟೇಷನ್ ಸಮಿತಿಯ ಮೂಲಕ ಬಿಬಿಎಂಪಿಗೆ 243 ವಾರ್ಡ್ ಗಳನ್ನು ರಚಿಸಿ ಕಳೆದ ಬಿಜೆಪಿ ಸರ್ಕಾರ ಆದೇಶಿಸಿತ್ತು. ಆ ಮೂಲಕ ತಾನು ಗೆಲ್ಲಲು ಬೇಕಾದ ಎಲ್ಲಾ ವಾರ್ಡುಗಳನ್ನು ಬಿಜೆಪಿ ಭದ್ರಪಡಿಸಿಕೊಂಡಿತ್ತು. ಆದರೆ ಈಗ ಬಿಜೆಪಿಯ ಎಲ್ಲಾ ಆಸೆಗೆ ತಣ್ಣೀರು ಎರಚಿದೆ.

2020ರಲ್ಲಿ ಬಿಬಿಎಂಪಿ(BBMP) ಸದಸ್ಯರ ಅಧಿಕಾರಾವಧಿ ಮುಗಿದಿದ್ದು, ಚುನಾವಣೆ ನಡೆಸುವ ದೃಷ್ಟಿಯಿಂದ 198 ವಾರ್ಡ್‌ಗಳಾಗಿ ಪುನರ್ ವಿಂಗಡಣೆ ಮಾಡಲಾಗಿತ್ತು. ಆದರೆ ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ 198 ವಾರ್ಡ್ ಗಳಿಂದ ಗೆಲ್ಲುವ ಲೆಕ್ಕಾಚಾರ ಹಾಕಿ ಅಂದಿನ ಸರ್ಕಾರದಲ್ಲಿ 243 ವಾರ್ಡ್‌ಗಳಿಗೆ ಏರಿಕೆ ಮಾಡಿತ್ತು.

ಸಧ್ಯ ಬಿಬಿಎಂಪಿ ಚುನಾವಣೆಗೆ ರಾಜ್ಯ ಸರ್ಕಾರ ಸಜ್ಜಾಗಿದ್ದು, ವಾರ್ಡ್‌ಗಳ ಸಂಖ್ಯೆಯನ್ನು 225ಕ್ಕೆ ಇಳಿಕೆ ಮಾಡಿ ಆದೇಶ ಹೊರಡಿಸಿದೆ.

ಬಿಜೆಪಿ ಪಕ್ಷದ ಅಧಿಕಾರಾವಧಿಯಲ್ಲಿ ಮಾಡಿರೋ ವಾರ್ಡ್ ವಿಂಗಡಣೆ ಸೂಕ್ತವಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಕೋರ್ಟ್‌ ಮೊರೆ ಹೋಗಿತ್ತು. ಇದೀಗ ಕಾಂಗ್ರೆಸ್‌ ಪಕ್ಷ ವಾರ್ಡ್‌ಗಳನ್ನು ಮರುವಿಂಗಡಣೆ ಮಾಡಿದೆ. 15 ವಾರ್ಡ್‌ಗಳನ್ನು ಕಡಿಮೆ ಮಾಡಲು ಕಾಂಗ್ರೆಸ್‌ ತೀರ್ಮಾನಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page