Tuesday, January 27, 2026

ಸತ್ಯ | ನ್ಯಾಯ |ಧರ್ಮ

ಡಿಸೆಂಬರ್ ಅಂತ್ಯದೊಳಗೆ BBMP ಚುನಾವಣೆ ನಡೆಸಿ : ಹೈಕೋರ್ಟ್ ಆದೇಶ

ಇದೇ ವರ್ಷದ (2022) ನವಂಬರ್‌ 3ರಷ್ಟರಲ್ಲಿ ಮೀಸಲಾತಿ ಪಟ್ಟಿಯನ್ನು ಸರಿಪಡಿಸಿ, ಡಿಸೆಂಬರ್‌ 31ರ ಒಳಗೆ ಚುನಾವಣೆ ನಡೆಸುವಂತೆ ರಾಜ್ಯ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ.

ಬಿಬಿಎಂಪಿ ವಾರ್ಡ್‌ ಪುನರ್ವಿಂಗಡಣೆಯಲ್ಲಿ ವಾರ್ಡ್ ವಾರು ಮೀಸಲು ನಿಗದಿಯಲ್ಲಿ ತಾರತಮ್ಯ ಆಗಿದೆ ಎಂಬ ರಿಟ್‌ ಅರ್ಜಿಗಳನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸರ್ಕಾರ ಒಬಿಸಿ (ನ್ಯಾಯಮೂರ್ತಿ ಭಕ್ತವತ್ಸಲ ಸಮಿತಿ) ಆಯೋಗಕ್ಕೆ ಅಂಕಿ ಅಂಶ ಒದಗಿಸಬೇಕು. 2022ರ ನವೆಂಬರ್ 30ರೊಳಗೆ ಮೀಸಲಾತಿ ಪಟ್ಟಿಯನ್ನು ಸರಿಪಡಿಸಿ ಪ್ರಕಟಿಸಬೇಕು ಮತ್ತು ಡಿಸೆಂಬರ್ 31ರೊಳಗೆ ಬಿಬಿಎಂಪಿಗೆ ಚುನಾವಣೆ ನಡೆಸಬೇಕು ಎಂದು ಆದೇಶಿಸಿದೆ.

ಬಿಬಿಎಂಪಿ ಚುನಾವಣೆ 2022 ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ. ಸರ್ಕಾರ ಈ ಮೊದಲು ಹೊರಡಿಸಿದ್ದ 243 ವಾರ್ಡ್‌ಗಳ ಮೀಸಲು ಪಟ್ಟಿಯ ಅಧಿಸೂಚನೆಯನ್ನು ರದ್ದುಪಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page