Home ಬೆಂಗಳೂರು ಮನೆ ಕಾಂಪೌಂಡ್​ ಒಳಗಿನ ಪಾರ್ಕಿಂಗ್​ಗೂ ಶುಲ್ಕ ಬಿಗ್ ಶಾಕ್ ನೀಡಿದ BBMP

ಮನೆ ಕಾಂಪೌಂಡ್​ ಒಳಗಿನ ಪಾರ್ಕಿಂಗ್​ಗೂ ಶುಲ್ಕ ಬಿಗ್ ಶಾಕ್ ನೀಡಿದ BBMP

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಂದೆಡೆ ಫ್ರೀ ಕೊಟ್ಟರೆ ಇನ್ನೊಂದೆಡೆ ಅದರ ದುಪ್ಪಟ್ಟು ಹಣವನ್ನು ಜನಸಾಮಾನ್ಯರ ಕೈಯಿಂದ ಕೀಳುತ್ತಿದೆ. ರಾಜ್ಯದಲ್ಲಿ ಇಂದಿನಿಂದ ಹಾಲು, ವಿದ್ಯುತ್​ ದರ ಏರಿಕೆಯಾಗಿದ್ದು, ರಾಜ್ಯದ ಜನರು ರೋಸಿ ಹೋಗಿದ್ದಾರೆ. ಇದೀಗ ಗಾಯದ ಮೇಲೆ ಬರೆ ಎಳೆದಂತೆ ಸದ್ದಿಲ್ಲದೆ ಮತ್ತೊಂದು ಸುತ್ತಿನ ಟ್ಯಾಕ್ಸ್ ಏರಿಕೆಗೆ ಬಿಬಿಎಂಪಿ ಪ್ಲಾನ್​ ಮಾಡಿದೆ.‌ಹೌದು.. ವಾಹನ ನಿಲ್ದಾಣದ ಪ್ರದೇಶವಾರು ಯೂನಿಟ್ ದರ ನಿರ್ಧರಿಸಲು ಕರಡು ಅಧಿಸೂಚನೆಯನ್ನು ಬಿಬಿಎಂಪಿ ಹೊರಡಿಸಿದ್ದು, ಈ ಸಂಬಂಧ ಸಾರ್ವಜನಿಕರು ಸಲಹೆ ಮತ್ತು ಅಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ.

ಮನೆಯ ಕಾಂಪೌಂಡ್​, ಅಪಾರ್ಟ್‌ಮೆಂಟ್, ಕಮರ್ಷಿಯಲ್ ಕಾಂಪ್ಲೆಕ್ಸ್, ಮಾಲ್ ಸೇರಿದಂತೆ ಎಲ್ಲಾ ರೀತಿಯ ಕಟ್ಟಡಗಳಿಗೆ ಪಾರ್ಕಿಂಗ್ ದರ ಏರಿಕೆ ಮಾಡಲು ತೀರ್ಮಾನಿಸಿದೆ. ವಸತಿ ಉದ್ದೇಶದ ಕನಿಷ್ಠ 150 ಚದರ ಅಡಿ ಪಾರ್ಕಿಂಗ್ ಸ್ಥಳಕ್ಕೆ ವಾರ್ಷಿಕ 600 ರೂ. ಪಾರ್ಕಿಂಗ್ ತೆರಿಗೆ (ಆರಂಭಿಕ ದರ) (ಚದರ ಅಡಿಗೆ 2 ರೂ.) ವಸೂಲಿ ಮಾಡಲು ನಿರ್ಧರಿಸಲಾಗಿದೆ. ವಾಣಿಜ್ಯ ಅಥವಾ ವಸತಿಯೇತರ ಉದ್ದೇಶದ ಕನಿಷ್ಠ 150 ಚದರ ಅಡಿ ಪಾರ್ಕಿಂಗ್ ಸ್ಥಳಕ್ಕೆ ವಾರ್ಷಿಕ 1,125 ರೂ. ಪಾರ್ಕಿಂಗ್ ತೆರಿಗೆ (ಆರಂಭಿಕ ದರ) (ಚದರ ಅಡಿಗೆ 3 ರೂ.) ಸಂಗ್ರಹಿಸಲು ಬಿಬಿಎಂಪಿ ತೀರ್ಮಾನಿಸಿದೆ.ಮೊದಲೆಲ್ಲ ಕಮರ್ಷಿಯಲ್ ಇದ್ದರೆ, ಕಮರ್ಷಿಯಲ್ ಲೆಕ್ಕದಲ್ಲಿ ಪಾರ್ಕಿಂಗ್ ಶುಲ್ಕ ಹಾಗೂ ವಸತಿ ಇದ್ದರೆ ವಸತಿ ಲೆಕ್ಕದಲ್ಲಿ ಪಾರ್ಕಿಂಗ್ ಶುಲ್ಕವನ್ನು ಬೇಕಾಬಿಟ್ಟಿಯಾಗಿ ವಸೂಲಿ ಮಾಡಲಾಗುತ್ತಿತ್ತು. ಆದರೆ ಇದೀಗ ಪಾರ್ಕಿಂಗ್​ಗೆ ಚದರ ಅಡಿ ಲೆಕ್ಕದಲ್ಲಿ ಪಾಲಿಕೆ ದರ ನಿಗದಿ ಮಾಡಿದೆ.

You cannot copy content of this page

Exit mobile version