Friday, June 27, 2025

ಸತ್ಯ | ನ್ಯಾಯ |ಧರ್ಮ

ಮೇ 15 ರಿಂದ ಬಿಬಿಎಂಪಿ ಆಗಲಿದೆ ‘ಗ್ರೇಟರ್ ಬೆಂಗಳೂರು’ ; ಕಾಯಿದೆ ಜಾರಿಗೆ ಸಂಪುಟ ಒಪ್ಪಿಗೆ

ಮೇ 15 ರಿಂದ ಬಿಬಿಎಂಪಿ ವ್ಯಾಪ್ತಿಯ ಪ್ರದೇಶವನ್ನು ‘ಗ್ರೇಟರ್‌ ಬೆಂಗಳೂರು ಪ್ರದೇಶ’ ಎಂದು ಪರಿಗಣಿಸಲು ಹಾಗೂ ಗ್ರೇಟರ್‌ ಬೆಂಗಳೂರು ಆಡಳಿತ ಕಾಯಿದೆಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಶುಕ್ರವಾರ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ ಬಗ್ಗೆ ಸಂಪುಟ ಒಪ್ಪಿಗೆ ಸೂಚಿಸಿದೆ.

ಕಾಯ್ದೆಯನ್ನು ಮೇ 15 ರಂದು ಅಧಿಸೂಚನೆ ಮಾಡಲಾಗುತ್ತದೆ. ಕಾಯ್ದೆಯನ್ನು ಹೇಗೆ ಮತ್ತಷ್ಟು ಜಾರಿಗೆ ತರಲಾಗುತ್ತದೆ ಎಂಬುದರ ಕುರಿತು ಅಧಿಸೂಚನೆಯಲ್ಲಿ ವಿವರಗಳಿರುತ್ತವೆ” ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಎಷ್ಟು ನಿಗಮಗಳಿಗೆ ಅಧಿಸೂಚನೆ ನೀಡಲಾಗುವುದು ಎಂಬ ಪ್ರಶ್ನೆಗೆ, ಅವರು ಸಂಖ್ಯೆಯನ್ನು ನಿರ್ದಿಷ್ಟಪಡಿಸಲು ನಿರಾಕರಿಸಿದರು. ಕಾಯ್ದೆಯು ಗರಿಷ್ಠ ಏಳು ನಿಗಮಗಳನ್ನು ರಚಿಸಲು ಅವಕಾಶ ನೀಡುತ್ತದೆ.

ಮೇ 15ರಿಂದ ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ’ ಪ್ರದೇಶವು ಗ್ರೇಟರ್‌ ಬೆಂಗಳೂರು ಪ್ರದೇಶವಾಗಿ ಪರಿವರ್ತನೆಯಾಗಲಿದೆ. ಅದಕ್ಕೆ ಪೂರಕವಾಗಿ ಅಧಿಸೂಚನೆ ಹೊರಡಿಸಲು, ಗ್ರೇಟರ್‌ ಬೆಂಗಳೂರು ಆಡಳಿತ ಕಾಯಿದೆಯನ್ನು ಜಾರಿಗೊಳಿಸಲು ಅಂತಿಮವಾಗಿ ಸರಕಾರ ದಿನಾಂಕ ನಿಗದಿಪಡಿಸಿದೆ. ಅದರಂತೆ ಮೇ 15ರಿಂದ ಅಧಿಸೂಚನೆ ಮೂಲಕ ಗ್ರೇಟರ್‌ ಬೆಂಗಳೂರು ಆಡಳಿತ ಕಾಯಿದೆ ಅನುಷ್ಠಾನವಾಗಲಿದೆ.

ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಏಪ್ರಿಲ್‌ನಲ್ಲಿ ಗ್ರೇಟರ್ ಬೆಂಗಳೂರು ಗವರ್ನನ್ಸ್ ಬಿಲ್, 2024 ಗೆ ತಮ್ಮ ಒಪ್ಪಿಗೆಯನ್ನು ನೀಡಿದರು. ಮಾರ್ಚ್‌ನಲ್ಲಿ, ಬಜೆಟ್ ಅಧಿವೇಶನದಲ್ಲಿ ಶಾಸಕಾಂಗವು ಅಂಗೀಕರಿಸಿದ ಮಸೂದೆಯನ್ನು ರಾಜ್ಯಪಾಲರು ಸ್ಪಷ್ಟೀಕರಣವನ್ನು ಕೋರಿ ಹಿಂತಿರುಗಿಸಿದ್ದರು. ಸರ್ಕಾರವು ಸ್ಪಷ್ಟೀಕರಣಗಳನ್ನು ನೀಡಿ ಮಸೂದೆಯನ್ನು ವಾಪಸ್ ಕಳುಹಿಸಿತು, ನಂತರ ಅದನ್ನು ಅನುಮೋದಿಸಲಾಯಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page