ಇಂಗ್ಲೆಂಡ್ ವಿರುದ್ಧದ ಐದು ಟಿ20 ಹಾಗೂ ಮೂರು ಏಕದಿನ ಪಂದ್ಯಗಳಿಗೆ ತಂಡಗಳನ್ನು ಪ್ರಕಟಿಸಿದ ಬಿಸಿಸಿಐ

ಶ್ರೀಲಂಕಾದಲ್ಲಿ ನಡೆದ ಏಕದಿನ ತ್ರಿಕೋನ ಸರಣಿಯನ್ನು ಗೆದ್ದ ಭಾರತದ ಮಹಿಳಾ ತಂಡ ಮತ್ತೊಂದು ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿದೆ. ಜೂನ್‌ನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ, ಆತಿಥೇಯ ತಂಡದ ವಿರುದ್ಧ 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಲಿದೆ.

ಜೂನ್ 28 ರಿಂದ ಟಿ20 ಸರಣಿ ಮತ್ತು ಜುಲೈ 16 ರಿಂದ ಏಕದಿನ ಸರಣಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿ ಇಂದು ತಂಡಗಳನ್ನು ಪ್ರಕಟಿಸಿದೆ. ಶೆಫಾಲಿ ವರ್ಮಾ ಮತ್ತು ಸ್ನೇಹ್ ರಾಣಾ ಬಹಳ ದಿನಗಳ ನಂತರ ಟಿ20 ತಂಡಕ್ಕೆ ಮರಳಿದ್ದಾರೆ. ವೇಗಿ ಬೌಲಿಂಗ್ ಆಲ್‌ರೌಂಡರ್‌ಗಳಾದ ಕ್ರಾಂತಿ ಗೌಡ್ ಮತ್ತು ಸಯೋಲಿ ಸತ್ಫುರೆ, ಎಡಗೈ ಸ್ಪಿನ್ನರ್‌ಗಳಾದ ನಲ್ಲಪುರರೆಡ್ಡಿ ಶ್ರೀಚರಣಿ ಮತ್ತು ಶುಚಿ ಉಪಾಧ್ಯಾಯ ಅವರನ್ನು ಮೊದಲ ಬಾರಿಗೆ ಟಿ20ಐ ತಂಡಕ್ಕೆ ಕರೆಸಲಾಗಿದೆ.

ಟಿ20 ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶೆಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್‌ಕೀಪರ್), ಯಾಸ್ತಿಕಾ ಭಾಟಿಯಾ (ವಿಕೆಟ್‌ಕೀಪರ್), ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ನಲ್ಲಪುರೆಡ್ಡಿ ಶ್ರೀಚರಣಿ, ಶುಚಿ ಉಪಾಧ್ಯಾಯ್‌, ಅಮನ್‌ಜ್ಯೋತ್‌ ಕೌರ್‌, ಅರುಂದತಿ ರೆಡ್ಡಿ, ಕ್ರಾಂತಿ ಗೌಡ್, ಸಯಾಲಿ ಸತ್ಫುರೆ.

ಏಕದಿನ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್‌ಕೀಪರ್), ಯಾಸ್ತಿಕಾ ಭಾಟಿಯಾ (ವಿಕೆಟ್‌ಕೀಪರ್), ತೇಜಲ್ ಹಸಬ್ನಿಸ್, ದೀಪ್ತಿ ಶರ್ಮಾ, ಸ್ನೇಹಾ ರಾಣಾ, ಶ್ರೀಚರಣಿ, ಶುಚಿ ಉಪಾಧ್ಯಾಯ್‌, ಅಮನ್‌ಜ್ಯೋತ್ ಕೌರ್, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ್. ಸಯಾಲಿ ಸತ್ಫುರೆ.

Related Articles

ಇತ್ತೀಚಿನ ಸುದ್ದಿಗಳು