Tuesday, September 16, 2025

ಸತ್ಯ | ನ್ಯಾಯ |ಧರ್ಮ

ಹಿಂದೂ ಧರ್ಮದ ಚಾತುರ್ವರ್ಣ ವ್ಯವಸ್ಥೆಯಿಂದಾಗಿಯೇ ಬೇರೆಬೇರೆ ಧರ್ಮಗಳ ಉದಯವಾಗಿವೆ: ಸಚಿವ ಪ್ರಿಯಾಂಕ್ ಖರ್ಗೆ

ಹಿಂದೂ ಧರ್ಮದಲ್ಲಿನ ಅಸಮಾನತೆ, ಜಾತೀಯತೆಯ ಕಾರಣದಿಂದ ‘ಬಹುಜನ ಸಮಾಜ’ಗಳನ್ನೇ ಹೊರಗಿಟ್ಟು ಆ ಸಮಾಜಗಳಿಗೆ ‘ಘನತೆ, ಗೌರವ’ವನ್ನು ನೀಡದ ಕಾರಣದಿಂದಲೇ ಸಿಖ್, ಜೈನ, ಬೌದ್ಧ ಮತ್ತು ಲಿಂಗಾಯತ ಧರ್ಮಗಳು ಭಾರತದಲ್ಲಿ ಪ್ರತ್ಯೇಕ ಧರ್ಮವಾಗಿ ಹುಟ್ಟಿಕೊಂಡಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

‘ಸಮಾಜದ ಹಲವು ಸಮುದಾಯಗಳಿಗೆ ಘನತೆ, ಗೌರವ ಸಿಕ್ಕಿರಲಿಲ್ಲ. ವಿವಿಧ ಜಾತಿಗಳು ತಾವು ಈ ವ್ಯವಸ್ಥೆಯಿಂದ ಹೊರಗುಳಿದಿರುವುದಾಗಿ ಭಾವಿಸಿದ್ದವು. ಭಾರತದಲ್ಲಿ ಹುಟ್ಟಿರುವ ಎಲ್ಲ ಧರ್ಮಗಳು ಈ ಅಸಮಾನತೆಯ ವಿರುದ್ಧ ಹುಟ್ಟಿವೆ. ಬಿಜೆಪಿ ನಾಯಕರಿಗೆ ಅದು ಏನೆಂದೇ ಇನ್ನೂ ತಿಳಿದಿಲ್ಲ ಎಂದು ನಾನು ಭಾವಿಸುತ್ತೇನೆ’ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ರಾಜ್ಯ ಸರ್ಕಾರವು ತನ್ನ ನೀತಿಗಳ ಮೂಲಕ ಧಾರ್ಮಿಕ ಮತಾಂತರವನ್ನು ಉತ್ತೇಜಿಸುತ್ತಿದೆ ಎಂದು ಆರೋಪಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಎಂಎಲ್‌ಸಿ ಸಿಟಿ ರವಿ ಅವರು ಸಿದ್ದರಾಮಯ್ಯ ವಿರುದ್ಧ ಆಡಿದ ಮಾತಿಗೆ ಪ್ರತಿಕ್ರಿಯೆಯಾಗಿ ಪ್ರಿಯಾಂಕ್ ಖರ್ಗೆ ಮೈಸೂರಿನಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

‘ಚಾತುರ್ವರ್ಣ ವ್ಯವಸ್ಥೆ ಎಂದರೇನು? ಅದು ಪ್ರಪಂಚದ ಬೇರೆ ಯಾವುದೇ ಧರ್ಮದಲ್ಲಿದೆಯೇ? ಅದು ಹಿಂದೂ ಧರ್ಮದಲ್ಲಿ ಮಾತ್ರ ಇದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಹಿಂದೂವಾಗಿ ಹುಟ್ಟುವುದು ನನ್ನ ಕೈಯಲ್ಲಿಲ್ಲ, ಆದರೆ ನಾನು ಹಿಂದೂವಾಗಿ ಸಾಯುವುದಿಲ್ಲ ಎಂಬ ಘೋಷಣೆಯನ್ನು ನೀಡಿದರು. ಏಕೆ? ಇದೇ ಚಾತುರ್ವರ್ಣ ವ್ಯವಸ್ಥೆಯಿಂದಾಗಿ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಹಿಂದೂ ಧರ್ಮದಲ್ಲಿ ಸಮಾನತೆ ಇದ್ದಿದ್ದರೆ ಇಲ್ಲಿಂದ ಬೇರೆ ಧರ್ಮಕ್ಕೆ ಏಕೆ ಮತಾಂತರ ಆಗುತ್ತಿದ್ದರು. ಇಲ್ಲಿನ ಈ ಅಸಮಾನತೆ, ಜಾತೀಯತೆ ವ್ಯವಸ್ಥೆಯಿಂದಾಗಿಯೇ ಕೆಲವರು ಬೇರೆ ಬೇರೆ ಧರ್ಮಕ್ಕೆ ಮತಾಂತರಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಉತ್ತರವಾಗಿ ಬಿಜೆಪಿ ನಾಯಕರು ಹೇಳಿಕೆ ನೀಡಿದ ಪರಿಣಾಮ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭಾದಲ್ಲಿ ಮುಂಬರುವ ಜಾತಿಗಣತಿಯಲ್ಲಿ ಧರ್ಮದ ಅಂಕಣದಲ್ಲಿ ಸಮುದಾಯಕ್ಕೆ ಸೇರಿದ ಜನರು ಹಿಂದೂ ಎಂದು ಬರೆಯದೆ ವೀರಶೈವ-ಲಿಂಗಾಯತರು ಎಂದು ಬರೆಯಬೇಕೆಂದು ನಿರ್ಧರಿಸಲಾಗಿದೆ ಎಂದು ಗಮನಸೆಳೆದ ಖರ್ಗೆ, ‘ಅವರು ವಿಜಯೇಂದ್ರ ಆಗಲಿ, ಯಡಿಯೂರಪ್ಪ ಆಗಲಿ ಅದರ ಬಗ್ಗೆ ಏನು ಹೇಳುತ್ತಾರೆ? ಅವರು ಅದನ್ನು ಸಮರ್ಥಿಸಿಕೊಂಡು, ನಮ್ಮೊಂದಿಗೆ ಮಾತನಾಡಬಹುದೇ?’ ಎಂದು ಪ್ರಶ್ನಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page