ಸುವರ್ಣ ವಿಧಾನಸೌಧ ಎದುರು ಧರಣಿ ಸತ್ಯಾಗ್ರಹ
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ (ರಿ) ಕರ್ನಾಟಕ ರಾಜ್ಯ ಸಮಿತಿ, ಬೆಂಗಳೂರು ನೇತ್ರತ್ವದಲ್ಲಿ ಅತಿಥಿ ಶಿಕ್ಷಕರ ವೇತನ ಹೆಚ್ಚಳಕ್ಕಾಗಿ ಮತ್ತು ಸೇವೆ ಕಾಯಂಗೊಳಿಸಲು ಒತ್ತಾಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಇದೇ ಡಿಸೆಂಬರ್ 13 ರಂದು ಬೆಳಗಾವಿ ಚಲೋ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸುವರ್ಣ ವಿಧಾನಸೌಧ ಎದುರು ಧರಣಿ ಸತ್ಯಾಗ್ರಹ ನಡೆಸಲಿದ್ದೇವೆ. ಈ ಮೇಲಿನ ಬೇಡಿಕೆಗಳ ಈಡೇರಿಕೆಗಾಗಿ ನಡೆಯುವ ಈ ಹೋರಾಟದಲ್ಲಿ ನಾಡಿನ ಎಲ್ಲಾ ಅತಿಥಿ ಶಿಕ್ಷಕರು, ಶಿಕ್ಷಣ ಪ್ರೇಮಿಗಳು, ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿ ಯಶಸ್ವಿಗೊಳಿಸಲು ನಿರ್ಧರಿಸಿರುತ್ತಾರೆ.
ಹಕ್ಕೊತ್ತಾಯಗಳು:
1. ಪ್ರತಿ ವರ್ಷ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯ ಬದಲಾಗಿ ಪ್ರಸ್ತುತ ಸಾಲಿನಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಶೈಕ್ಷಣಿಕ ವರ್ಷಕ್ಕೆ ಮುಂದುವರಿಸಬೇಕು. ಸೇವಾ ಅನುಭವವನ್ನು ಆದ್ಯತೆಯಾಗಿ ಪರಿಗಣಿಸಬೇಕು. ಮೆರಿಟ್ ಹೆಸರಿನಲ್ಲಿ ಅತಿಥಿ ಶಿಕ್ಷಕರನ್ನು ಬಳಸಿ ಬಿಸಾಕುವುದನ್ನು ನಿಲ್ಲಿಸಬೇಕು.
2. ಅತಿಥಿ ಶಿಕ್ಷಕರ ವೇತನವನ್ನು ಮಾಸಿಕ ಕನಿಷ್ಠ 20 ಸಾವಿರಕ್ಕೆ ಹೆಚ್ಚಿಸಬೇಕು. ಬೇಸಿಗೆ ಮತ್ತಿತರ ರಜೆಗಳು ಸೇರಿ 12 ತಿಂಗಳ ವೇತನವನ್ನು ನೀಡಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೀಡಬೇಕು. ಪ್ರತಿ ತಿಂಗಳ ಮೊದಲ ವಾರ ವೇತನವನ್ನು ನೇರವಾಗಿ ಅತಿಥಿ ಶಿಕ್ಷಕರ ಖಾತೆಗೆ ಜಮಾ ಮಾಡಬೇಕು.
3. ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದವರಿಗೆ ಶಿಕ್ಷಕರ ನೇಮಕಾತಿಯಲ್ಲಿ ಪ್ರತಿ ವರ್ಷಕ್ಕೆ 5% ರಷ್ಟು ಕೃಪಾಂಕ ಒದಗಿಸಬೇಕು.
4. ದೆಹಲಿ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶ ಸರಕಾರಗಳ ಮಾದರಿಯಲ್ಲಿ ಅತಿಥಿ ಶಿಕ್ಷಕರ ಸೇವೆಯನ್ನು ಪರಿಗಣಿಸಿ ಖಾಯಂಗೊಳಿಸಬೇಕು.
5. ಅತಿಥಿ ಶಿಕ್ಷಕರಿಗೆ ಸೇವಾ ಪ್ರಮಾಣ ಪತ್ರವನ್ನು ನೀಡಬೇಕು.
6. ಸರಕಾರಿ ಶಿಕ್ಷಕರಿಗೆ ನೀಡಲಾಗುತ್ತಿರುವ ಸೌಲಭ್ಯಗಳು, ತರಬೇತಿ ಮತ್ತು ಗೌರವಯುತ ವ್ಯವಸ್ಥೆ ಅತಿಥಿ ಶಿಕ್ಷಕರಿಗೆ ದೊರೆಯುವಂತೆ ಕ್ರಮವಹಿಸಬೇಕು. ಶಿಕ್ಷಕರ ಹಾಜರಾತಿ ಪುಸ್ತಕದಲ್ಲಿ ಅತಿಥಿ ಶಿಕ್ಷಕರ ಹಾಜರಾತಿಯನ್ನು ಸೇರ್ಪಡೆಗೊಳಿಸಬೇಕು.
7. ಅತಿಥಿ ಶಿಕ್ಷಕ ಎಂಬ ಪದವನ್ನು ತೆಗೆದುಹಾಕಿ ಗೌರವ ಅಥವಾ ಅರೆಕಾಲಿಕ ಶಿಕ್ಷಕ ಎ೦ದು ನಮೂದಿಸಿಬೇಕು.
8. ಅತಿಥಿ ಶಿಕ್ಷಕ/ಕಿಯರಿಗೆ ಗುಂಪು ಜೀವ ವಿಮೆ ಸೌಲಭ್ಯ ಒದಗಿಸಬೇಕು.
9. ಮನವಿ ಕೊಡುವ ಹಂತದವರೆಗೆ ಕಂಡು ಬರುವ ಬೇಡಿಕೆಗಳನ್ನು ಒಳಗೊಂಡಂತೆ
ಹನುಮಂತ ಹೆಚ್ ಎಸ್ ರಾಜ್ಯಾಧ್ಯಕ್ಷರು. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ ಕರ್ನಾಟಕ. ಮತ್ತು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಉಪಾದ್ಯಕರು ಲೋಲಕ್ಷಿ