Friday, June 21, 2024

ಸತ್ಯ | ನ್ಯಾಯ |ಧರ್ಮ

ಬೆಳಗಾವಿ ಮಹಿಳೆಗೆ ಚಪ್ಪಲಿ ಹಾಕಿ ಮೆರವಣಿಗೆ: ಪ್ರಕರಣದ ಪ್ರಮುಖ ಆರೋಪಿ ಬಂಧನ

ಬೆಳಗಾವಿ: ಹನಿ ಟ್ರ್ಯಾಪಿಂಗ್ ಶಂಕೆಯಲ್ಲಿ ಮಹಿಳೆಯೊಬ್ಬರಿಗೆ ಚಪ್ಪಲಿ ಹಾರ ತೊಡಿಸಿ ಮೆರವಣಿಗೆ ನಡೆಸಿದ ಪ್ರಕರಣದ ಪ್ರಮುಖ ಆರೋಪಿಯನ್ನು ಕರ್ನಾಟಕ ಪೊಲೀಸರು ಸೋಮವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯನ್ನು ಅರ್ಜುನ ಗುಂಡವ್ವಗೋಳ ಎಂದು ಗುರುತಿಸಲಾಗಿದೆ. ಮಹಿಳೆಯ ಮೇಲೆ ಹಲ್ಲೆ ನಡೆಸಿದ ಇತರರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಹನಿ ಟ್ರ್ಯಾಪಿಂಗ್ ಶಂಕೆಯ ಮೇರೆಗೆ ಸ್ಥಳೀಯ ಜನರು ಬೆಳಗಾವಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಂತ್ರಸ್ತೆಯನ್ನು ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದರು.

ಗೋಕಾಕ ಪೇಟೆ ಸಮೀಪದ ಘಟಪ್ರಭಾ ಮೃತ್ಯುಂಜಯ ಬಡಾವಣೆಯಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ.

ಮಹಿಳೆಯ ವಿರುದ್ಧ ಹನಿ ಟ್ರ್ಯಾಪಿಂಗ್ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಮಹಿಳೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮಹಿಳೆಯ ಮೇಲೆ ಹಲ್ಲೆ ನಡೆಸಿ ಪರೇಡ್ ಮಾಡಿದ ಸ್ಥಳೀಯರ ವಿರುದ್ಧವೂ ದೂರು ದಾಖಲಿಸಿದ್ದಾರೆ.

ಆರೋಪಿ ಅರ್ಜುನ ಗುಂಡವ್ವಗೋಳ್ ಸಂತ್ರಸ್ತೆ ಹನಿ ಟ್ರ್ಯಾಪಿಂಗ್‌ನಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದ. ಅವನು ತನ್ನ ಸಹಚರರೊಂದಿಗೆ ಸಂತ್ರಸ್ತೆಯ ಮನೆಗೆ ನುಗ್ಗಿ ಅವಳನ್ನು ಪ್ರಶ್ನಿಸಿದ್ದ. ನಂತರ ಆಕೆಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ ಸಹಚರರು ಹಲ್ಲೆ ನಡೆಸಿದ್ದಾರೆ. ನಂತರ ಘಟಪ್ರಭಾ ಮೃತ್ಯುಂಜಯ ವೃತ್ತದ ಬಳಿ ಚಪ್ಪಲಿ ಹಾರ ತೊಡಿಸಿ ಮೆರವಣಿಗೆ ಮಾಡಲಾಯಿತು.

ನಂತರ ಮಹಿಳೆಯನ್ನು ಠಾಣೆಗೆ ಕರೆದೊಯ್ದಿದ್ದು, ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಗುಂಪು ಪೊಲೀಸರನ್ನು ಒತ್ತಾಯಿಸಿದೆ. ಸಂತ್ರಸ್ತೆ ಯುವಕನೊಬ್ಬನನ್ನು ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು