ನವದೆಹಲಿ: ಬೆಲೆ ಏರಿಕೆ ಮತ್ತು ನಿರುದೋಗ್ಯದ ವಿರುದ್ಧ ದಿಲ್ಲಿಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಛೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿರುವಾಗ ಪ್ರಿಯಾಂಕ ಗಾಂಧಿ ವಾದ್ರಾ ಮತ್ತು ಇತರ ಕಾಂಗ್ರೆಸ್ ನಾಯಕರನ್ನು ಪೋಲಿಸರು ಬಂಧಿಸಿದರು.
ರಾಷ್ಟçಪತಿಭವನಕ್ಕೆ ಯೋಜಿತ ಮೆರವಣಿಗೆ ಮತ್ತು ಪ್ರಧಾನಿ ಮನೆಗೆ ‘ಘೇರವ್’ ಆರಂಭಿಸುವ ಮೊದಲು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿ ತೆರಳಿದ್ದರು.
ಪಕ್ಷದ ಇತರ ನಾಯಕರಂತೆ ಪ್ರತಿಭಟನೆಯ ಸಂಕೇತವಾದ ಕಪ್ಪು ಬಟ್ಟೆಯನ್ನು ಧರಿಸಿದ ಪ್ರಿಯಾಂಕ ಗಾಂಧಿ, ಸ್ವಲ್ಪ ಹೊತ್ತು ರಸ್ತೆಯಲ್ಲಿಯೇ ಧರಣೆ ನಡೆಸಿ, ಎಐಸಿಸಿ ಸಮೀಪ ಹಾಕಲಾಗಿದ್ದ ಬ್ಯಾರಿಕೆಡ್‌ಗಳ ಮೇಲೆ ಹತ್ತಿದಾಗ ಪೋಲಿಸರು ಅವರನ್ನು ಎಳೆದುಕೊಂಡು ವ್ಯಾನಿಗೆ ನೂಕಿದರು.