Thursday, June 13, 2024

ಸತ್ಯ | ನ್ಯಾಯ |ಧರ್ಮ

ಬೇಲೂರು, ಹಳೇಬೀಡು ಹಾಗೂ ಸೋಮನಾಥ ದೇವಾಲಯಗಳಿಗೆ ಯುನೆಸ್ಕೋ ಪರಂಪರೆಯ ಮಾನ್ಯತೆ

ದೆಹಲಿ: ಭಾರತದ ಮತ್ತಷ್ಟು ಐತಿಹಾಸಿಕ ಕಟ್ಟಡಗಳು ವಿಶ್ವ ಪಾರಂಪರಿಕ ಕಟ್ಟಡಗಳ ಪಟ್ಟಿಗೆ ಸೇರಿವೆ. ಕರ್ನಾಟಕದ ಹೊಯ್ಸಳ ಕಾಲದ ದೇವಾಲಯಗಳನ್ನು ಯುನೆಸ್ಕೋ ಪರಂಪರೆ ಪಟ್ಟಿಯಲ್ಲಿ ಸೇರಿಸಲಾಗಿದೆ.

ಪ್ರಸಿದ್ಧ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ದೇವಸ್ಥಾನಗಳಿಗೆ ಈ ಅಂತಾರಾಷ್ಟ್ರೀಯ ಮನ್ನಣೆಯನ್ನು ನೀಡಲಾಗುತ್ತಿದೆ ಎನ್ನಲಾಗಿದೆ. ಪ್ರಸ್ತುತ ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ 45ನೇ ‘ವಿಶ್ವ ಪರಂಪರೆ ಸಮಿತಿ’ಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪಶ್ಚಿಮ ಬಂಗಾಳದ ‘ಶಾಂತಿನಿಕೇತನ’ಕ್ಕೆ ಈ ಮನ್ನಣೆ ದೊರೆತ ಮರುದಿನವೇ ಹೊಯ್ಸಳ ದೇವಾಲಯಗಳು ಈ ಪಟ್ಟಿಗೆ ಸೇರ್ಪಡೆಗೊಂಡಿರುವುದು ಗಮನಾರ್ಹ.

ಹೊಯ್ಸಳರಿಗೆ ಈ ಗೌರವ ಸಿಕ್ಕಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. “ದೇವಾಲಯಗಳ ಮೇಲೆ ಕೆತ್ತಿದ ಮಾಹಿತಿ, ಭವ್ಯವಾದ ಶಿಲ್ಪವು ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಪೂರ್ವಜರ ಕಲಾತ್ಮಕತೆಗೆ ಸಾಕ್ಷಿಯಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ. ಹೊಯ್ಸಳ ದೇವಾಲಯಗಳು ಏಪ್ರಿಲ್ 15, 2014ರಿಂದ ಯುನೆಸ್ಕೋ ವೀಕ್ಷಣಾ ಪಟ್ಟಿಯಲ್ಲಿದೆ. ಪ್ರಸ್ತುತ ಭಾರತೀಯ ಪುರಾತತ್ವ ಇಲಾಖೆಯು ಅವುಗಳ ಸಂರಕ್ಷಣೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು