Monday, June 17, 2024

ಸತ್ಯ | ನ್ಯಾಯ |ಧರ್ಮ

ಬೆಂಗಳೂರಿನ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಬೆಂಗಳೂರು : ಒಂದೇ ಕುಟುಂಬದ ಮೂರು ಜನ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೆಚ್.ಎಸ್‌.ಆರ್‌ ಲೇಔಟ್‌ ನಲ್ಲಿ ನಡೆದಿದೆ.

ಬೆಂಗಳೂರಿನ ಒಂದೇ ಕುಟುಂಬದ ಮೂರು ಮಂದಿ ಬೆಂಕಿ ಹಚ್ಚಿಕೊಂಡು ಸಾವಿಗೀಡಾಗಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. 54 ವರ್ಷದ  ಸಂತೋಷ್‌ ಕುಮಾರ್‌, ಆತನ ಪತ್ನಿ ಓಮನ್‌ ಸಂತೋಷ್‌(50) ಮತ್ತು ಸನುಷಾ(17) ಮೂರು ಜನ ಮೃತದುರ್ದೈವಿಗಳಾಗಿದ್ದಾರೆ.

ಘಟನೆಯ ಕುರಿತು ಹೆಚ್.ಎಸ್‌.ಆರ್‌ ಲೇಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಿದ್ದಾರೆ.


Related Articles

ಇತ್ತೀಚಿನ ಸುದ್ದಿಗಳು