Friday, August 22, 2025

ಸತ್ಯ | ನ್ಯಾಯ |ಧರ್ಮ

ಡಿಕೆ ಶಿವಕುಮಾರ್‌ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶಿಸಿದ ಕೋರ್ಟ್‌

ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ತರಾತುರಿಯ ತಯಾರಿಯಲ್ಲಿರುವಾಗಲೇ ಬೆಂಗಳೂರಿನ ಸ್ಥಳೀಯ ನ್ಯಾಯಾಲಯವೊಂದು ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಆದೇಶಿಸಿದೆ.

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಆರೋಪಿಯೊಬ್ಬನ್ನು ಬಂಧಿಸಿದ್ದ ಸಂದರ್ಭದಲ್ಲಿ ಬಿಜೆಪಿ ಪಕ್ಷವು ಆತ ಅಯೋಧ್ಯೆ ಕರಸೇವಕನಾಗಿದ್ದು ರಾಮಮಂದಿರ ಉದ್ಘಾಟನೆ ಸಮಯದಲ್ಲಿ ಬೇಕೆಂದೇ ಕಾಂಗ್ರೆಸ್‌ ಸರ್ಕಾರ ಅರೆಸ್ಟ್‌ ಮಾಡಿದೆಯೆಂದು ಆರೋಪಿಸಿತ್ತು.

ಇದೇ ಸಂದರ್ಭದಲ್ಲಿ ಬಿಜೆಪಿ ಈ ಕುರಿತು ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ ಅಭಿಯಾನವನ್ನು ಸಹ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಆಗ ಬಿಜೆಪಿ ಮತ್ತು ಹಿಂದುತ್ವವಾದಿ ನಾಯಕರು “ನಾನೂ ಕರಸೇವಕ ನನ್ನನ್ನೂ ಬಂಧಿಸಿ” ಎನ್ನುವ ಪೋಸ್ಟರ್‌ ಅಭಿಯಾನ ನಡೆಸಿದ್ದರು.

ಈ ಪೋಸ್ಟರ್‌ ಅಭಿಯಾನಕ್ಕೆ ಕೌಂಟರ್‌ ಆಗಿ ಕಾಂಗ್ರೆಸ್‌ ಸಹ ಹಲವಾರು ಪೋಸ್ಟರುಗಳನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಫೋಟೋ ಬಳಸಿ “ನಾನು ಆರ್‌ಟಿಜಿಎಸ್‌ ಮೂಲಕ ಲಂಚ ಪಡೆದಿದ್ದೇನೆ. 40,000 ಕೋಟಿ ಅಕ್ರಮದಲ್ಲ ಪಾಲುದಾರ ನನ್ನನ್ನು ಬಂಧಿಸಿ ” ಎಂದು ಎಡಿಟ್‌ ಮಾಡಲಾಗಿತ್ತು.

ಜೊತೆಗೆ ಶಾಸಕ ವಿ ಸುನೀಲ್‌ ಫೋಟೋ ಬಳಸಿ, “ನಾನು ಪರಶುರಾಮ ಮೂರ್ತಿ ಕಂಚನ್ನು ಕದ್ದಿದ್ದೇನೆ; ಸಿಮೆಂಟ್‌ ಕದ್ದಿದ್ದೇನೆ ನನ್ನನ್ನು ಬಂಧಿಸಿ” ಎಂದು ಎಡಿಟ್‌ ಮಾಡಲಾಗಿತ್ತು.

ಈ ಪೋಸ್ಟರುಗಳನ್ನು ಕರ್ನಾಟಕ ಕಾಂಗ್ರೆಸ್ (ಕೆಪಿಸಿಸಿ) ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಹಿನ್ನೆಲೆ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಖಾತೆ ನಿರ್ವಹಣೆ ಮಾಡುವವರ ವಿರುದ್ಧ ದೂರು ದಾಖಲಾಗಿತ್ತು.

ಬಿಜೆಪಿ ರಾಜ್ಯ ಕಾನೂನು ಪ್ರಕೋಷ್ಠದಿಂದ ಫೋರ್ಜರಿ ಹಾಗೂ ಎರಡು ಗುಂಪುಗಳ‌ ನಡುವೆ ದ್ವೇಷ ಮೂಡಿಸಿದ ಪೋಸ್ಟ್ ಹಾಕಿದ್ದಾರೆ ಎಂದು ಐಪಿಸಿ ಸೆಕ್ಷನ್ 153ಎ, 464, 504 ಮತ್ತು 505(ಬಿ)ರಡಿ ಬೆಂಗಳೂರಿನ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು.

ಬಿಜೆಪಿ ರಾಜ್ಯ ಕಾನೂನು ಪ್ರಕೋಷ್ಠದಿಂದ ಫೋರ್ಜರಿ ಹಾಗೂ ಎರಡು ಗುಂಪುಗಳ‌ ನಡುವೆ ದ್ವೇಷ ಮೂಡಿಸುವ ಪೋಸ್ಟ್ ಹಾಕಲಾಗಿದೆ ಎಂದು ಐಪಿಸಿ ಸೆಕ್ಷನ್ 153ಎ, 464, 504 ಮತ್ತು 505(ಬಿ)ರಡಿ ಬೆಂಗಳೂರಿನ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page