Thursday, January 8, 2026

ಸತ್ಯ | ನ್ಯಾಯ |ಧರ್ಮ

ಮಹಿಳೆಯರ ಆಯ್ಕೆಯ ಪ್ರಥಮ ನಗರವಾಗಿ ‘ಬೆಂಗಳೂರು’ ಉದಯ: ಚೆನ್ನೈ, ಹೈದರಾಬಾದ್‌ಗೆ ನಂತರದ ಸ್ಥಾನ

ಕಳೆದ ವರ್ಷ ಮಹಿಳೆಯರಿಗೆ ವಾಸಿಸಲು ಮತ್ತು ಕೆಲಸ ಮಾಡಲು ಭಾರತದ ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಚೆನ್ನೈ ಮೂಲದ ‘ಅವತಾರ್’ ಎಂಬ ಸಂಸ್ಥೆಯು ನಡೆಸಿದ ಅಧ್ಯಯನದ ಪ್ರಕಾರ, ಮಹಿಳೆಯರ ಅಭಿವೃದ್ಧಿ ಮತ್ತು ಬೆಂಬಲದ ದೃಷ್ಟಿಯಿಂದ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಇದರ ನಂತರದ ಸ್ಥಾನಗಳಲ್ಲಿ ಚೆನ್ನೈ, ಪುಣೆ, ಹೈದರಾಬಾದ್ ಮತ್ತು ಮುಂಬೈ ನಗರಗಳು ಕಾಣಿಸಿಕೊಂಡಿವೆ.

ದೇಶದ 125 ನಗರಗಳಲ್ಲಿ ನಡೆಸಲಾದ ಈ ಸರ್ವೆಯಲ್ಲಿ ಸಾಮಾಜಿಕ ಮೂಲಸೌಕರ್ಯ ಮತ್ತು ಕೈಗಾರಿಕಾ ಸೌಲಭ್ಯಗಳನ್ನು ಮುಖ್ಯವಾಗಿ ಪರಿಗಣಿಸಲಾಗಿತ್ತು. ಈ ಪಟ್ಟಿಯಲ್ಲಿ ದಕ್ಷಿಣ ಮತ್ತು ಪಶ್ಚಿಮ ಭಾರತದ ಮೆಟ್ರೋ ನಗರಗಳು ಮಹಿಳೆಯರ ಮೊದಲ ಆಯ್ಕೆಯಾಗಿ ಹೊರಹೊಮ್ಮಿವೆ. ಬೆಂಗಳೂರು 53.29 ಸ್ಕೋರ್ ಪಡೆದರೆ, ಚೆನ್ನೈ 49.86 ಸ್ಕೋರ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ.

ಸುರಕ್ಷತೆ, ಆರೋಗ್ಯ ಮತ್ತು ಶಿಕ್ಷಣದಂತಹ ಸಾಮಾಜಿಕ ಅಂಶಗಳ ಆಧಾರದ ಮೇಲೆ ಚೆನ್ನೈ ಮಹಿಳೆಯರಿಗೆ ಹೆಚ್ಚು ಇಷ್ಟವಾದ ನಗರವಾಗಿದೆ. ಆದರೆ, ಉದ್ಯೋಗಾವಕಾಶಗಳು, ಸುಲಭ ಜೀವನ ಶೈಲಿ ಮತ್ತು ವೃತ್ತಿಜೀವನದ ದೀರ್ಘಕಾಲಿಕ ಬೆಳವಣಿಗೆಯ ದೃಷ್ಟಿಯಿಂದ ಬೆಂಗಳೂರು ಅತ್ಯಂತ ಸ್ಥಿರವಾದ ನಗರವಾಗಿ ಮೊದಲ ಸ್ಥಾನದಲ್ಲಿದೆ. ಇನ್ನು ಪುಣೆ ಮತ್ತು ಹೈದರಾಬಾದ್ ನಗರಗಳು ಸಾಮಾಜಿಕ ಮತ್ತು ಕೈಗಾರಿಕಾ ಪ್ರಗತಿಯಲ್ಲಿ ಸಮತೋಲನವನ್ನು ಕಾಯ್ದುಕೊಂಡಿವೆ ಎಂದು ವರದಿ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page