Sunday, July 27, 2025

ಸತ್ಯ | ನ್ಯಾಯ |ಧರ್ಮ

ಭದ್ರಾವತಿ: ಶಾಸಕನ ಪುತ್ರನ ಕೊಲೆಗೆ ಜೈಲಿನಿಂದಲೇ ಸಂಚು?

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ವರ ಅವರ ಪುತ್ರ ಬಸವೇಶ್‌ ಅವರ ಹತ್ಯೆಗೆ ಸ್ಕೆಚ್ ರೂಪಿಸಲಾಗಿದೆ ಎಂಬ ಸುದ್ದಿ ಬೆಳಕಿಗೆ ಬಂದಿದೆ. ಆರೋಪಿ ಜೈಲಿನಿಂದಲೇ ಹತ್ಯೆಗೆ ಸ್ಕೆಚ್ ಸಂಚು ರೂಪಿಸಿದ್ದ ಎನ್ನಲಾಗಿದೆ.

ಡಿಚ್ಚಿ ಮುಬಾರಕ್ ಎಂಬ ಜೈಲಿನಲ್ಲಿರುವ ಆರೋಪಿ ಯುವಕ ಬಸವೇಶ ಅವರ ಹತ್ಯೆಗೆ ಸಂಚು ರೂಪಿಸಿದ್ದ. ಆರೋಪಿ ಡಿಚ್ಚಿ ಮುಬಾರಕ್‌ ಈಗಾಗಲೇ ಪ್ರಕರಣವೊಂದರಲ್ಲಿ‌ ಜೈಲಿನಲ್ಲಿದ್ದಾನೆ. ಆರೋಪಿ ಮುಬಾರಕ್ ಎಂಬಾತನಿಗೆ ಕೊಲೆ ಮಾಡುವಂತೆ ಸುಪಾರಿ ನೀಡಿದ್ದ.  ಭದ್ರಾವತಿ ಗಾಂಧಿ ಸರ್ಕಲ್‌ನಲ್ಲಿ ಬಸವೇಶನನ್ನು ಕೊಲೆ ಮಾಡುವಂತೆ ಡಿಚ್ಚಿ ಮುಬಾರಕ್ ಸೂಚಿಸಿದ್ದ ಎಂದು ತಿಳಿದು ಬಂದಿದೆ.

ಈ ಪ್ರಕರಣದಲ್ಲಿ ಗುತ್ತಿಗೆದಾರ ಸುನೀಲ್ ಎಂಬಾತನ ಹೆಸರನ್ನು ಸಹ ಬಗ್ಗೆ ಆರೋಪಿ ಮುಬಾರಕ್ ಬಾಯಿ ಬಿಟ್ಟಿದ್ದಾನೆ. ಕಾರು ಹಾಗೂ ನಾಲ್ಕು ಮಂದಿ ಹುಡುಗರನ್ನು ಗ್ಯಾಂಗ್‌ ಮೂಲಕ ಕೊಲೆಗೆ ಸ್ಕೆಜಚ್‌ ಹಾಕಲಾಗಿತ್ತು ಎನ್ನಲಾಗಿದೆ.

ಘಟನೆ ಸಂಬಂಧ ಮುಬಾರಕ್ ಸೇರಿದಂತೆ ನಾಲ್ವರ ವಿರುದ್ಧ ಭದ್ರಾವತಿ ಹಳೆನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಧ್ಯ ಶಾಸಕ ಪುತ್ರ ಬಸವೇಶ್‌ ಅವರಿಗೆ ಪೊಲೀಸ್‌ ರಕ್ಷಣೆ ಒದಗಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page