Wednesday, February 11, 2026

ಸತ್ಯ | ನ್ಯಾಯ |ಧರ್ಮ

ನಾಳೆ ಭಾರತ್ ಬಂದ್, ಏನಿರುತ್ತೆ ಏನಿರಲ್ಲಾ ?

ಬೆಂಗಳೂರು : ನಾಳೆ (ಫೆ.12) ಕೇಂದ್ರ ಕಾರ್ಮಿಕ ಸಂಘಗಳು (Labor unions) ಭಾರತ್ ಬಂದ್ ಗೆ (Bharath bund) ಕರೆ ನೀಡಿದ್ದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಸಂಘಟನೆಗಳ ಬೆಂಬಲ ವ್ಯಕ್ತವಾಗಿದೆ.ಹೀಗಾಗಿ ನಾಳಿನ ಪ್ರತಿಭಟನೆ (Protest) ಅನೇಕ ರಾಜ್ಯಗಳಲ್ಲಿ ಜನ ಸಾಮಾನ್ಯರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಈ ಪ್ರತಿಭಟನೆಯಲ್ಲಿ 30 ಕೋಟಿಗೂ ಹೆಚ್ಚು ಕಾರ್ಮಿಕರು ಭಾಗವಹಿಸುವ ಸಾಧ್ಯತೆ ಇದೆ ಎಂದು ಸಂಘಟಕರು ಹೇಳಿಕೊಂದಿದ್ದಾರೆ. ಹೀಗಾಗಿ ಬ್ಯಾಂಕ್ ಗಳ ಕಾರ್ಯಾಚರಣೆ, ಸಾರಿಗೆ ಸೇವೆಗಳು ಮತ್ತು ಸರ್ಕಾರಿ ಕಚೇರಿಗಳ ಮೇಲೆ ಪರಿಣಾಮ ಬೀರಲಿದೆ. ಇತ್ತೀಚೆಗೆ ಪರಿಚಯಿಸಲಾದ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರ ರಕ್ಷಣೆಯನ್ನು ದುರ್ಬಲಗೊಳಿಸುತ್ತವೆ ಮತ್ತು ಉದ್ಯೋಗ ಭದ್ರತೆಯನ್ನು ಕಡಿಮೆ ಮಾಡುತ್ತವೆ ಎಂದು ಕಾರ್ಮಿಕರ ಸಂಘಟನೆಗಳು ವಿರೋಧಿಸಿವೆ. ಈ ಬದಲಾವಣೆಗಳು ಉದ್ಯೋಗದಾತರಿಗೆ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಮತ್ತು ವಜಾಗೊಳಿಸುವಲ್ಲಿ ಹೆಚ್ಚಿನ ನಮ್ಯತೆಯನ್ನು ನೀಡುತ್ತವೆ ಎಂದು ಪ್ರತಿಪಾದಿಸಿದ್ದಾರೆ.

ಈ ಪ್ರತಿಭಟನೆಗೆ ಭಾಗವಹಿಸುವ ಪ್ರಮುಖ ಕಾರ್ಮಿಕ ಸಂಘಟನೆಗಳಲ್ಲಿ ಸಿಐಟಿಯು, ಎಐಟಿಯುಸಿ, ಐಎನ್‌ಟಿಯುಸಿ, ಎಚ್‌ಎಂಎಸ್, ಎಐಸಿಸಿಟಿಯು, ಎಲ್‌ಪಿಎಫ್ ಮತ್ತು ಯುಟಿಯುಸಿ ಬೆಂಬಲಿಸಿವೆ. ಹೀಗಾಗಿ ಪ್ರತಿಭಟನೆಯ ಎಫೆಕ್ಟ್, ದೇಶದ
ಪ್ರಮುಖ ನಗರಗಳಲ್ಲಿನ ಮಾರುಕಟ್ಟೆಗಳು ಮತ್ತು ಅಂಗಡಿಗಳು,ಬ್ಯಾಂಕುಗಳು,ಸರ್ಕಾರಿ ಕಚೇರಿಗಳು ಸೇವೆಯಲ್ಲಿ ವ್ಯತ್ಯಯವಾಗಲಿದೆ.

ಇನ್ನು ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಅಡಚಣೆ ಉಂಟಾಗಲಿದ್ದು, ಶಾಲೆ – ಕಾಲೇಜುಗಳು ತೆರೆಯುವ ಸಾಧ್ಯತೆಗಳಿವೆ. ಇನ್ನು ಆಸ್ಪತ್ರೆಗಳು ಮತ್ತು ಇತರ ವೈದ್ಯಕೀಯ ಸೌಲಭ್ಯಗಳು ಲಭ್ಯವಿರಲಿದ್ದು,
ಖಾಸಗಿ ಕಚೇರಿಗಳು ತೆರೆಯಲಿದ್ದು ವಿಮಾನ ನಿಲ್ದಾಣಗಳು, ಎಟಿಎಂಗಳು, ಇತರೆ ಅಗತ್ಯ ಸೇವೆಗಳು ಲಭ್ಯವಿರಲಿದೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page