ಭಾರತ ಐಕ್ಯತಾ ಯಾತ್ರೆ ಮೂಲಕ ಚಿತ್ರದುರ್ಗ ಜಿಲ್ಲೆ ಹರ್ತಿಕೋಟೆ ಪ್ರವೇಶಿಸಿರುವ ರಾಹುಲ್ ಗಾಂಧಿ ಅವರು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಗೊಲ್ಲ ಸಮುದಾಯದ ಹೆಣ್ಣು ಮಕ್ಕಳನ್ನು ಭೇಟಿಯಾಗಿದ್ದು ಈಗ ಎಲ್ಲೆಡೆ ಮೆಚ್ಚುಗೆಗೆ ಕಾರಣವಾಗಿದೆ.
ಹೌದು, ಭಾರತ ಐಕ್ಯತಾ ಯಾತ್ರೆ ರ್ಯಾಲಿ ಚಿತ್ರದುರ್ಗ ಜಿಲ್ಲೆ ಹರ್ತಿಕೋಟೆ ಪಕ್ಕದ ಕಪಿಲೇಹಟ್ಟಿಯತ್ತ ಸಾಗುತ್ತಿರುವ ಸಮಯದಲ್ಲಿ ರಾಹುಲ್ ಗಾಂಧಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಹೆಣ್ಣು ಮಕ್ಕಳನ್ನು ಕಂಡಿದ್ದಾರೆ. ಆ ತಕ್ಷಣವೇ ಅವರ ಕಾರ್ಯಕರ್ತರಿಗೆ ತಿಳಿಸಿ ರಾಹುಲ್ ಗಾಂಧಿ ಅವರನ್ನ ತಮ್ಮ ಬಳಿ ಕರೆಯಿಸಿಕೊಂಡು ಅವರ ಸಂಕಟಗಳಿಗೆ ಕಿವಿಯಾಗಿದ್ದಾರೆ. ಈ ಒಂದು ಮಾನವೀಯ ನಡೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದ್ದು ಚಿತ್ರದುರ್ಗ ಜನರು ರಾಹುಲ್ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಆ ಹೆಣ್ಣು ಮಕ್ಕಳ ಸಹೋದರ ಶಿವಣ್ಣ ಕಸವನಹಳ್ಳಿ ವಾಟ್ಸ್ ಆಪ್ ಮೆಸೇಜ್ ಮೂಲಕ ಪೀಪಲ್ ವೀಡಿಯಾಗೆ ಮಾಹಿತಿ ನೀಡಿದ್ದು, ಈ ಕೆಳಕಂಡ ಫೋಟೋ ಯಾವದಿರಬಹುದು!? ಅಂತ ನೀವು ಯೋಚಿಸಿರುವಿರಾ!? ಇದು ಹರ್ತಿಕೋಟೆ ಪಕ್ಕದ ಕಪಿಲೇಹಟ್ಟಿಯ ಗೊಲ್ಲ ಜನಾಂಗದ ನನ್ನ ಸೋದರಿಯರು.. ಅವರು ಇವತ್ತು ಈರುಳ್ಳಿ ಆಯಲು ಹೊಲಕ್ಕೆ ಹೋಗಿದ್ರು.. ಅದೇ ದಾರಿಯಲ್ಲಿ ನಮ್ಮೆಲ್ಲರ ಪ್ರೀತಿಯ ರಾಯಬಾರಿ ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಹೋಗುವಾಗ… ನಮ್ಮ ಗೊಲ್ಲರೆಣ್ಣುಮಕ್ಕಳನ್ನು ಕಂಡ ರಾಹುಲ್ ಅವರನ್ನ ತಮ್ಮ ಬಳಿ ಕರೆಯಿಸಿಕೊಂಡು, ಅವರ ಸಂಕಟಗಳಿಗೆ ಕಿವಿಯಾಗಿದ್ದಾರೆ ಎಂದು ಹೇಳಿದ್ದಾರೆ.